ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ನಟ ಪ್ರಕಾಶ್ ರೈ

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರೈ ಅವರು ಇಂದು ತಮ್ಮ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಅಭಿಮಾನಿಗಳೊಂದಿಗೆ ನಟ ಹಂಚಿಕೊಂಡಿದ್ದಾರೆ.

ಹೌದು. ಮದುವೆ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪತ್ನಿ ಜೊತೆಗಿನ ಮದುವೆ ಫೋಟೋ ಅಪ್ಲೋಡ್ ಮಾಡಿಕೊಂಡಿರುವ ಪ್ರಕಾಶ್ ರೈ, ಪತ್ನಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನನ್ನ ಜೀವನ ಪಯಣದಲ್ಲಿ ಒಬ್ಬ ಒಳ್ಳೆಯ ಗೆಳತಿ, ಪ್ರಿಯತಮೆ ಹಾಗೂ ಜೀವನದ ಸಹ ಪ್ರಯಾಣಿಕೆಯಾಗಿ ಇರುವುದಕ್ಕೆ ತುಂಬಾ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಪ್ರಕಾಶ್ ರೈ ಅವರು ಎರಡನೇ ಮದುವೆಯಾದ ವಿಷಯ ತುಂಬಾ ಹಳೆಯದು. ಮೊದಲ ಪತ್ನಿಯಿಂದ ದೂರಾಗಿ ರೈ ನಂತರ ಪೋನಿ ಅವರನ್ನು ವಿವಾಹವಾದರು. ಪೋನಿಯವರು ಬಾಲಿವುಡ್‍ನಲ್ಲಿ ಕೊರಿಯೋಗ್ರಾಫರ್ ಆಗಿದ್ದರು. ಈ ವೇಳೆ ಪ್ರಕಾಶ್ ರೈ, ಪೋನಿ ಅವರನ್ನು ಪ್ರೀತಿಸಿ ಮದುವೆಯಾದರು. ಈ ಜೋಡಿಗೆ ಮುದ್ದಾದ ಮಗನಿದ್ದಾನೆ. ಇದನ್ನೂ ಓದಿ: ನಿಮ್ಮನ್ನು ಪಡೆಯಲು ನಾವು ಅದೃಷ್ಟ ಮಾಡಿದ್ದೇವೆ: ಪ್ರಕಾಶ್ ರೈ

blank

ಇತ್ತೀಚೆಗೆ ಚಿತ್ರೀಕರಣದ ವೇಳೆ ನಟ ಗಾಯಗೊಂಡಿದ್ದರು. ಕಾಲಿವುಡ್ ನಟ ಧನುಷ್ ಅಭಿನಯದ `ಡಿ44′ ಚಿತ್ರ ಇತ್ತೀಚೆಗಷ್ಟೇ ಆಗಸ್ಟ್ 5 ರಂದು ಸೆಟ್ಟೇರಿದ್ದು, ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರಕಾಶ್ ರೈ ಅಭಿನಯಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಚಿತ್ರೀಕರಣ ಚೆನ್ನೈನಲ್ಲಿ ನಡೆಯುತ್ತಿದ್ದು, ಶೂಟಿಂಗ್ ವೇಳೆ ಆಗಸ್ಟ್ 10ರಂದು ಪ್ರಕಾಶ್ ರೈ ಕೆಳಗೆ ಬಿದ್ದು ಗಾಯಗೊಂಡಿದ್ದರು. ಹೀಗಾಗಿ ತಕ್ಷಣ ಅವರನ್ನು ಅಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‍ಗೆ ಕರೆದೊಯ್ಯಲಾಗಿತ್ತು. ಸದ್ಯ ನಟ ಆರೋಗ್ಯವಾಗಿದ್ದು, ಶೀಘ್ರವೇ ಚಿತ್ರೀಕರಣಕ್ಕೆ ಮರಳುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಡೆವಿಲ್ ಈಸ್ ಬ್ಯಾಕ್, ಶಸ್ತ್ರ ಚಿಕಿತ್ಸೆ ಯಶಸ್ವಿ: ಪ್ರಕಾಶ್ ರೈ

Source: publictv.in Source link