ಸ್ಯಾಂಡಲ್​​ವುಡ್​​ ಡ್ರಗ್ ಕೇಸ್: CCB ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಮಲ್ ಪಂತ್

ಸ್ಯಾಂಡಲ್​​ವುಡ್​​ ಡ್ರಗ್ ಕೇಸ್: CCB ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಮಲ್ ಪಂತ್

ಬೆಂಗಳೂರು: ಸ್ಯಾಂಡಲ್​​ವುಡ್​ ಡ್ರಗ್​ ಪ್ರಕರಣದಲ್ಲಿ ಬಂಧನವಾಗಿದ್ದ ಆರೋಪಿಗಳ ಸಿಎಸ್​​ಎಫ್​ಎಲ್​​ ವರದಿ ಸಿಸಿಬಿ ಪೊಲೀಸರಿಗೆ ಲಭ್ಯವಾಗಿದ್ದು, ವರದಿಯಲ್ಲಿ ಆರೋಪಿಗಳು ಡ್ರಗ್ಸ್​ ಸೇವನೆ ಮಾಡಿರುವುದು ದೃಢವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ವರದಿಯಿಂದ ಸಿಸಿಬಿಗೆ ಸಕಾರಾತ್ಮಕವಾದ ಫಲಿತಾಂಶ ಸಿಕ್ಕಿದೆ ಎಂದಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವರದಿಯಲ್ಲಿ ಎಲ್ಲಾ ಆರೋಪಿಗಳು ಡ್ರಗ್ಸ್ ಸೇವಿಸಿರುವುದು ದೃಢವಾಗಿದೆ. ಎಲ್ಲಾ ಆರೋಪಿಗಳ ರಿಪೋರ್ಟ್ ಪಾಸಿಟಿವ್ ಬಂದಿದ್ದು, ಈ ಕೇಸ್​ನ ಅಧಿಕಾರಿಗಳು ಉತ್ತಮವಾಗಿ ಕಾರ್ಯಾಚರಣೆ ನಡೆಸಿದ್ದಾರೆ ಎಂದರು.

ಇದನ್ನೂ ಓದಿ: ಸ್ಯಾಂಡಲ್​​ವುಡ್​​ ಡ್ರಗ್ ಕೇಸ್: ಆರೋಪಿಗಳು ಡ್ರಗ್ ಸೇವಿಸಿರೋದು FSL ವರದಿಯಲ್ಲಿ ದೃಢ!

ಮುಂದುವರೆದು ಮಾತನಾಡಿದ ಅವರು, ಸದ್ಯ ಆರೋಪಿಗಳೆಲ್ಲರೂ ಡ್ರಗ್​ ಸೇವನೆ ಮತ್ತು ತರಿಸಿಕೊಂಡಿರೋದು ಸಾಬೀತಾಗಿದೆ. ಡ್ರಗ್ಸ್ ತರಿಸಿಕೊಂಡಿರುವ ಬಗ್ಗೆ ವಾಟ್ಸಪ್ ಕಾಲ್, ವಿಡಿಯೋ ಕಾಲ್, ಚಾಟಿಂಗ್ ಮಾಡಿರೊ ಬಗ್ಗೆ ದಾಖಲೆ ಸಿಕ್ಕಿದೆ. ಡ್ರೈವರ್ ಗಳ ಮೂಲಕ ಡ್ರಗ್ಸ್ ತರಿಸಿಕೊಂಡಿರೋದು ರುಜುವಾತಾಗಿದ್ದು, ನ್ಯಾಯಾಲಯದ ವಿಚಾರಣೆ ವೇಳೆ ಸಾಕ್ಷ್ಯಧಾರಗಳನ್ನ ಒದಗಿಸಲಾಗುತ್ತೆ. ಶಿಕ್ಷೆಯ ಕುರಿತು ನ್ಯಾಯಾಧೀಶರು ತೀರ್ಮಾನ ತೆಗೆದುಕೊಳ್ತಾರೆ ಎಂದರು.

ಇದನ್ನೂ ಓದಿ: ವರ್ಕ್​​ ಆಯ್ತು ಸಿಸಿಬಿ ಐಡಿಯಾ.. ಡ್ರಗ್ಸ್​ ಸೇವಿಸಿದ್ದ ನಟಿಯರಿಗೆ ಶುರುವಾಯ್ತು ಟೆನ್ಶನ್

Source: newsfirstlive.com Source link