‘ಶಾಲಾ ಮಕ್ಕಳ ಸ್ವೇಟರ್​​​ ಹೆಸರಲ್ಲಿ ₹1.7 ಕೋಟಿ ಹಣ ಗುಳುಂ’ ನಟ ಕೋಮಲ್ ವಿರುದ್ಧ ಗಂಭೀರ ಆರೋಪ

‘ಶಾಲಾ ಮಕ್ಕಳ ಸ್ವೇಟರ್​​​ ಹೆಸರಲ್ಲಿ ₹1.7 ಕೋಟಿ ಹಣ ಗುಳುಂ’ ನಟ ಕೋಮಲ್ ವಿರುದ್ಧ ಗಂಭೀರ ಆರೋಪ

ಬೆಂಗಳೂರು: ಶಾಲಾ ಮಕ್ಕಳಿಗೆ ವಿತರಿಸುವ ಸ್ಪೆಟರ್ ನಲ್ಲಿ ಬಿಬಿಎಂಪಿ ಭ್ರಷ್ಟಾಚಾರ ಎಸಗಿದೆ ಎಂಬ ಆರೋಪದ ಮೇಲೆ, ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಸ್ಪೆಟರ್ ಹರಾಜು ಹಾಕುವ ಮೂಲಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿದೆ.

blank

ಶಾಲೆ ಆರಂಭ ಇರದ ಸಮಯದಲ್ಲಿ ಪಾಲಿಕೆ ವ್ಯಾಪ್ತಿಯ ಮಕ್ಕಳಿಗೆ ಸ್ವೇಟರ್​ ವಿತರಿಸಿದಾಗಿ ಹೇಳಿ, ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿ, ಬಿಬಿಎಂಪಿ ಕಛೇರಿ ಮುಂದೆ ‘ಬಿಬಿಎಂಪಿ ಅಧಿಕಾರಿಗಳಿಗೆ ಉಚಿತ ಸ್ಪೆಟರ್’ ಎಂದು ಕೂಗಿ ಪ್ರತಿಭಟನೆ ನಡೆಸಿದ್ದಾರೆ..

ನಟ ಕೋಮಲ್ ಮೇಲೆ ಗಂಭೀರ ಆರೋಪ.

ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜು ಮಕ್ಕಳಿಗೆ ಸ್ಪೆಟರ್ ವಿತರಣೆಯ ಟೆಂಡರನ್ನ ನಟ ಕೋಮಲ್ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಕಳೆದ ವರ್ಷ ಕೊರೊನಾ ಕಾರಣದಿಂದಾಗಿ ತರಗತಿಗಳು ನಡೆದಿಲ್ಲ. ಆದರೂ ಮಕ್ಕಳಿಗೆ ಸ್ಪೆಟರ್ ವಿತರಣೆ ಮಾಡಿದ್ದೇವೆ ಅಂತ ಟೆಂಡರ್​ ಪಡೆದವರಿಗೆ ಹಣ ಬಿಡುಗಡೆ ಮಾಡಲಾಗಿದೆ. ಇನ್ನು ಹಣ ಬಿಡುಗಡೆ ಮಾಡುವಂತೆ ಪಾಲಿಕೆ ಅಧಿಕಾರಗಳ ಮೇಲೆ ಸಚಿವ ಆರ್ ಅಶೋಕ್, ನಟ ಜಗ್ಗೇಶ್ ಒತ್ತಡ ಹಾಕಿದ್ದಾರೆ, ಎಂದು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಸಿ. ಎಸ್. ರಘು ಗಂಭೀರ ಆರೋಪ ಮಾಡಿದ್ದಾರೆ..

ಇನ್ನು ಈ ಬಗ್ಗೆ ಸದ್ಯ ನಟ ಕೋಮಲ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ, ಈ ಆರೋಪದ ಸತ್ಯಾಸತ್ಯತೆ ತನಿಖೆ ನಂತರವಷ್ಟೇ ಬಯಲಿಗೆ ಬರಬಹುದು.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಸ್ವೇಟರ್​ ವಿತರಿಸಿರುವುದಾಗಿ ಹೇಳಿ 1.69 ಕೋಟಿ ಗುಳುಂ? BBMP ಮತ್ತೊಂದು ಅಕ್ರಮ?

Source: newsfirstlive.com Source link