ಶಾಕಿಂಗ್ ನ್ಯೂಸ್​:​ ಅಫ್ಘಾನ್​​ನ ಕಾಬೂಲ್​​​ನಿಂದ ಉಕ್ರೇನ್​​ ವಿಮಾನ ಹೈಜಾಕ್

ಶಾಕಿಂಗ್ ನ್ಯೂಸ್​:​ ಅಫ್ಘಾನ್​​ನ ಕಾಬೂಲ್​​​ನಿಂದ ಉಕ್ರೇನ್​​ ವಿಮಾನ ಹೈಜಾಕ್

ತಾಲಿಬಾನ್​​ ಉಗ್ರರ ವಶವಾದ ಅಫ್ಘಾನಿಸ್ತಾನದ ಕಾಬೂಲ್​​ನಿಂದ ತನ್ನ ದೇಶದ ಪ್ರಜೆಗಳನ್ನು ಸ್ಥಳಾಂತರ ಮಾಡುತ್ತಿದ್ದ ಉಕ್ರೇನ್​​ ದೇಶದ ವಿಮಾನ ಹೈಜಾಕ್​​ ಆಗಿದೆ. ಯಾರೋ ಅಪರಿಚಿತರು ಉಕ್ರೇನಿಯನ್​​ ವಿಮಾನವನ್ನು ಹೈಜಾಕ್​​ ಮಾಡಿದ್ದಾರೆ ಎಂದು ಉಕ್ರೇನ್​​ ವಿದೇಶಾಂಗ ಸಚಿವ ಯೆವ್ಗೆನಿ ಯೆನ್ ತಿಳಿಸಿದ್ದಾರೆ.

ಆಗಸ್ಟ್​ 22ನೇ ತಾರೀಕಿನಂದು ನಮ್ಮ ದೇಶದ ಉಕ್ರೇನಿಯನ್​​​​ ವಿಮಾನ ಹೈಜಾಕ್​ ಮಾಡಲಾಗಿದೆ. ಯಾರೋ ಅಪರಿಚಿತ ವ್ಯಕ್ತಿಗಳು ನಮ್ಮ ದೇಶದ ಜನರ ಬದಲಿಗೆ ಇರಾನ್​​ ಪ್ರಜೆಗಳನ್ನು ತುಂಬಿ ಹೈಜಾಕ್​​ ಮಾಡಿದ್ದರು. ಹಾಗಾಗಿ ಮೂರು ಬಾರಿ ನಮ್ಮ ಸ್ಥಳಾಂತರ ಮಿಷನ್ ಸಕ್ಸಸ್​ ಆಗಲಿಲ್ಲ. ಏಕೆಂದರೆ, ನಮ್ಮ ದೇಶದ ಪ್ರಜೆಗಳನ್ನು ನಾವು ಕರೆದುಕೊಂಡು ಬರಲಾಗಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಅಫ್ಘಾನ್ ಸೇನೆ-ತಾಲಿಬಾನ್​ ಸಂಘರ್ಷ: 200 ವರ್ಷಗಳ ಕಾಲದ ಕಾದಾಟದ ಸ್ವಾರಸ್ಯಕರ ಕಥೆ

Source: newsfirstlive.com Source link