ಕಾಮಗಾರಿ ವಿಡಿಯೋ ಮಾಡಿದ್ದು ಇಷ್ಟು ಜನ್ರ ಹೊಟ್ಟೆಗೆ ಬೆಂಕಿ ಬೀಳಿಸುತ್ತೆ ಅಂತಾ ಗೊತ್ತಿರಲಿಲ್ಲ-ಪ್ರತಾಪ್​ ಸಿಂಹ

ಕಾಮಗಾರಿ ವಿಡಿಯೋ ಮಾಡಿದ್ದು ಇಷ್ಟು ಜನ್ರ ಹೊಟ್ಟೆಗೆ ಬೆಂಕಿ ಬೀಳಿಸುತ್ತೆ ಅಂತಾ ಗೊತ್ತಿರಲಿಲ್ಲ-ಪ್ರತಾಪ್​ ಸಿಂಹ

ಮೈಸೂರು : ಬೆಂಗಳೂರು – ಮೈಸೂರು ದಶಪಥ ರಸ್ತೆಯ ಕ್ರೆಡಿಟ್ ವಾರ್ ವಿಚಾರವಾಗಿ ಸಂಸದ ಪ್ರತಾಪ್​ ಸಿಂಹ ಪ್ರತಿಕ್ರಿಯಿಸಿದ್ದು, ಮೋದಿ ಅವರ ಆಡಳಿತದಲ್ಲಿ ಶುರುವಾಗುವ ಪ್ರಾಜೆಕ್ಟ್ ಗಳು ಮೋದಿ ಸರಕಾರಕ್ಕೆ ಸಲ್ಲಬೇಕು ಎಂದಿದ್ದಾರೆ.

ಬೆಂಗಳೂರು – ಮೈಸೂರು ದಶಪಥ ರಸ್ತೆಯ ಕ್ರೆಡಿಟ್ ವಾರ್ ವಿಚಾರವಾಗಿ ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು: ಮೈಸೂರು – ಬೆಂಗಳೂರು ದಶಪಥ ರಸ್ತೆಯ ಕಾಮಗಾರಿ ವೀಡಿಯೋ ಮಾಡಿದ್ದು ಇಷ್ಟು ಜನರ ಹೊಟ್ಟೆಗೆ ಬೆಂಕಿ ಬೀಳಿಸುತ್ತೆ ಅಂತಾ ಗೊತ್ತಿರಲಿಲ್ಲ ಎಂದು ಸಂಸದ ಪ್ರತಾಪ್​ ಸಿಂಹ ವ್ಯಂಗ್ಯವಾಡಿದ್ದಾರೆ.

ಮೋದಿ ಸರಕಾರ ಈ ಯೋಜನೆಗೆ ಹಣ ಬಿಡುಗಡೆ ಕಾಮಗಾರಿ ಚಾಲನೆ ನೀಡಲಾಗಿತ್ತು. ಹೀಗಾಗಿ ಮೈಸೂರು ದಶಪಥ ರಸ್ತೆಯ ಕ್ರೆಡಿಟ್ ಪ್ರಧಾನಿ ಮೋದಿ ಅವರಿಗೆ ಸಲ್ಲಬೇಕು. ಪ್ರತಿಯೊಬ್ಬ ಶಾಸಕ, ಸಂಸದ ಮಾಡುವ ಕೆಲಸಗಳ ಶ್ರೇಯ ಮೋದಿ ಅವರಿಗೆ ಸಲ್ಲಬೇಕು ಎಂದಿದ್ದಾರೆ.

ಇದನ್ನೂ ಓದಿ: ಡ್ರಗ್ಸ್​ ಕೇಸ್​​​ನಲ್ಲಿ ಸಿಕ್ಕಿರೋದು ಮೀನುಗಳಷ್ಟೇ, ಇನ್ನು ದೊಡ್ಡ ತಿಮಿಂಗಲಗಳಿವೆ; ಇಂದ್ರಜಿತ್ ಹೀಗಂದಿದ್ದು ಯಾರಿಗೆ

Source: newsfirstlive.com Source link