ಆರ್ಡರ್ ಮಾಡಿದ್ದ ಪಿಜ್ಜಾದಲ್ಲಿ ಸಿಕ್ತು ನಟ್ಟು, ಬೋಲ್ಟ್ – ಮಹಿಳೆ ಶಾಕ್

ಲಂಡನ್: ಇಂಗ್ಲೆಂಡ್‍ನ ಮಹಿಳೆಯೊಬ್ಬರು ಇತ್ತೀಚೆಗಷ್ಟೇ ಆರ್ಡರ್ ಮಾಡಿದ್ದ ಡೊಮಿನೊಸ್‍ನಿಂದ ಪಿಜ್ಜಾದಲ್ಲಿ ಕಬ್ಬಿಣದ ಬೋಲ್ಡ್ ಹಾಗೂ ನಟ್ಟನ್ನು ಕಂಡು ಶಾಕ್ ಆಗಿದ್ದಾರೆ.

ಇದರಿಂದ ಕೋಪಗೊಂಡ ಮಹಿಳೆ ಆರ್ಡರ್ ಮಾಡಿದ್ದ ಡೊಮಿನೊಸ್ ಪಿಜ್ಜಾದ ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಡೊಮಿನೊಸ್ ಪಿಜ್ಜಾ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಗಮನ ಹರಿಸುತ್ತಿಲ್ಲ. ಪಿಜ್ಜಾವನು ಸೇವಿಸುವುದಕ್ಕೂ ಮುನ್ನ ಪರೀಕ್ಷಿಸಿ ತಿನ್ನುವಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ವೆಜ್ ಬದಲು ನಾನ್‍ವೆಜ್ ಪಿಜ್ಜಾ ಬಂತು- 1 ಕೋಟಿ ಪರಿಹಾರ ಕೇಳಿದ ಮಹಿಳೆ

ಈ ಕುರಿತಂತೆ ಫೇಸ್‍ಬುಕ್‍ನಲ್ಲಿ ಫೋಟೋ ಜೊತೆಗೆ, ಅಂದು ರಾತ್ರಿ ಆರ್ಡರ್ ಮಾಡಿದ್ದ ಡೊಮಿನೊಸ್ ಪಿಜ್ಜಾದಲ್ಲಿ ಬೋಲ್ಟ್ ಹಾಗೂ ನಟ್ ಕಂಡು ಗಾಬರಿಗೊಂಡೆ. ಅದರ ಅರ್ಧವನ್ನು ನಾನು ತಿಂದಿದ್ದೇನೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಡೊಮಿನೊಸ್ ಪಿಜ್ಜಾದ ಗುಣಮಟ್ಟವನು ಪರಿಶೀಲಿಸುತ್ತಾರೋ ಇಲ್ವೋ? ಪಿಜ್ಜಾದಲ್ಲಿ ಬೋಲ್ಟ್, ನಟ್ ಸಿಕ್ಕಿದೆ. ದಯವಿಟ್ಟು ಪಿಜ್ಜಾ ತಿನ್ನುವ ಮೊದಲು ಎರಡು ಬಾರಿ ಪರೀಕ್ಷಿಸಿ, ನಾನಗಲಿ, ಯಾರಾದರೂ ಈ ಪಿಜ್ಜಾವನ್ನು ಸೇವಿಸಿದನ್ನು ದ್ವೇಷಿಸುತ್ತೇನೆ. ಫ್ಲೀಟ್ವುಡ್ ಆರ್ಡಿ ನಾರ್ತ್‍ನಲ್ಲಿರುವ ಥಾನ್ರ್ಟನ್-ಕ್ಲೆವೆಲೀಸ್ ಶಾಖೆಯಲ್ಲಿರುವ ಡೊಮಿನೋಸ್‍ನಿಂದ ಪಿಜ್ಜಾ ಆರ್ಡರ್ ಮಾಡುವಾಗ ಜಾಗರೂಕರಾಗಿರಿ ಎಂದು ಕ್ಯಾಪ್ಷನ್‍ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ:ಕಲ್ಲಂಗಡಿ ಹಣ್ಣಿನ ಪಿಜ್ಜಾ ವೀಡಿಯೋ ವೈರಲ್

blank

ನಂತರ ಮಹಿಳೆ ರೆಸ್ಟೋರೆಂಟ್‍ಗೆ ಕರೆ ಮಾಡಿ ದೂರು ನೀಡಿ, ಪಿಜ್ಜಾವನ್ನು ಹಿಂದಿರುಗಿಸಿದ್ದಾರೆ. ನಂತರ ಈ ಕುರಿತಂತೆ ಡೊಮಿನೊಸ್ ಮಹಿಳೆಗೆ ಕ್ಷಮೆಯಾಚಿಸಿ, ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ತಿಳಿಸಿದೆ. ಇದನ್ನೂ ಓದಿ:ಆರ್ಡರ್ ಮಾಡದಿದ್ರೂ 9 ವರ್ಷದಿಂದ ಮನೆಗೆ ಬರ್ತಿದೆ ಪಿಜ್ಜಾ

Source: publictv.in Source link