ಶಿವಾರಾಧನೆಯಲ್ಲಿ ಒಲಿಂಪಿಕ್ಸ್ ಪದಕ ವಿಜೇತ ರವಿ ದಹಿಯಾ -ರಿಯಲ್ ‘ಬಾಹುಬಲಿ’ಯ ಶಿವ ಭಕ್ತಿಗೆ ಬಹುಪರಾಕ್..!

ಶಿವಾರಾಧನೆಯಲ್ಲಿ ಒಲಿಂಪಿಕ್ಸ್ ಪದಕ ವಿಜೇತ ರವಿ ದಹಿಯಾ -ರಿಯಲ್ ‘ಬಾಹುಬಲಿ’ಯ ಶಿವ ಭಕ್ತಿಗೆ ಬಹುಪರಾಕ್..!

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಬಳಿಕ ಕುಸ್ತಿಪಟು ರವಿ ದಹಿಯಾ ಅವರಿಗೆ ದೇಶದ ಜನರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತಕೋರಿ ಮೆಚ್ಚುಗೆ ಸೂಚಿಸಿದ್ದರು. ಸದ್ಯ ತಮ್ಮ ತವರಿಗೆ ವಾಪಸ್ ಆಗಿರುವ ರವಿ ದಹಿಯಾ ತಮ್ಮ ಹರಕೆಯನ್ನು ಪೂರ್ಣಗೊಳಿಸಿದ್ದು, ಶಿವಲಿಂಗಕ್ಕೆ ಜಲಾಭಿಷೇಕ ನೆರವೇರಿಸಿದ್ದಾರೆ.

ರವಿ ದಹಿಯಾ ಅವರ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಬಯಕೆಯನ್ನು ಈಡೇರಿಸಲು ಅವರ ಕುಟುಂಬಸ್ಥರು ಕೂಡ ಮನೆಯಲ್ಲಿ ಅಖಂಡ ಜ್ಯೋತಿಯನ್ನು ಬೆಳಗಿಸಿದ್ದರು. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ವಿಜೇತರಾದ ರವಿ ದಹಿಯಾ, ತಮ್ಮ ತವರಿಗೆ ವಾಪಸ್​ ಆಗಿ ಶಿವಲಿಂಗಕ್ಕೆ ಜಲಾಭಿಷೇಕವನ್ನು ಮಾಡಿ ಹರಕೆ ಪೂರ್ಣಗೊಳಿಸಿದ್ದಾರೆ.

ನೀರನ್ನು ಕೊಡದಲ್ಲಿ ಹೊತ್ತು ದೇವಾಲಯ ಪ್ರವೇಶಿಸಿ ರವಿ ದಹಿಯಾ ಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಫೋಟೋಗೆ ನೋಡಿ ಫಿದಾ ಆಗಿದ್ದಾರೆ. ಹಲವರು ರವಿ ದಹಿಯಾರನ್ನು ರಿಯಲ್​ ಬಾಹುಬಲಿ ಎಂದು ಕಮೆಂಟ್​ ಮಾಡಿ ಪ್ರತಿಕ್ರಿಯೆ ನೀಡಿದದ್ದಾರೆ.

2020ರಲ್ಲಿ ರವಿ ದಹಿಯಾ, ದೀಪಕ್​​ ಪೂನಿಯಾ ಹಾಗೂ ಹಲವರು ವಿಶ್ವದ ಎತ್ತರ ಪ್ರದೇಶದಲ್ಲಿರುವ ಶಿವನ ದೇವಾಲಯ ಉತ್ತರಾಖಂಡ ತುಂಗನಾಥಕ್ಕೆ ಟ್ರೆಕ್ಕಿಂಗ್ ಮಾಡಿ ಗಮನ ಸೆಳೆದಿದ್ದರು. ಪದಕ ವಿಜೇತರಾಗಿ ಭಾರತಕ್ಕೆ ಮರಳಿದ ಬಳಿಕ ತಮಗೆ ಕುಸ್ತಿಯಲ್ಲಿ ಪ್ರೇರಣೆಯಾಗಿದ್ದ ಜಮ್ಮುವಿನ ವಿಕ್ರಾಂತ್​​ ಮಹಾಜನ್​ ಅವರನ್ನು ಭೇಟಿ ಮಾಡಿ ಧನ್ಯವಾದ ಅರ್ಪಿಸಿದ್ದರು.

Source: newsfirstlive.com Source link