ನಿರ್ದೇಶಕ ಪ್ರೇಮ್​​, ಧ್ರುವ ಸರ್ಜಾ ಕಾಂಬಿನೇಷನ್​​ನಲ್ಲಿ ಹೊಸ ಸಿನಿಮಾ ಕನ್ಫರ್ಮ್​​

ನಿರ್ದೇಶಕ ಪ್ರೇಮ್​​, ಧ್ರುವ ಸರ್ಜಾ ಕಾಂಬಿನೇಷನ್​​ನಲ್ಲಿ ಹೊಸ ಸಿನಿಮಾ ಕನ್ಫರ್ಮ್​​

‘ಪೊಗರು’ ಸಿನಿಮಾ ಮುಗಿಸಿ ‘ಮಾರ್ಟಿನ್’ ಆಗಲು ಧ್ರುವ ಸರ್ಜಾ ಸಜ್ಜಾಗಿದ್ದಾರೆ. ಈ ನಡುವೆ ‘ಏಕ್ ಲವ್ ಯಾ’ ಸಿನಿಮಾ ಮುಗಿಸಿ ತಮ್ಮ ಸಿನಿ ಕರಿಯರ್​​ನ 9ನೇ ಸಿನಿಮಾಕ್ಕೆ ಸಜ್ಜಾಗಿ ಒಂದೊಳ್ಳೆ ದಿನಕ್ಕೆ ಕಾದಿದ್ದ ನಿರ್ದೇಶಕ ಜೋಗಿ ಪ್ರೇಮ್, ಧ್ರುವ ಸರ್ಜಾ ಅವರೊಂದಿಗೆ ಸಿನಿಮಾ ಮಾಡೋದು ಪಕ್ಕಾ ಆಗಿದೆ.

ಒಂದು ಸ್ಪೆಷಲ್ ವಿಡಿಯೋದ ಮೂಲಕ ಧ್ರುವ ಸರ್ಜಾ ಜೊತೆ ಶೋ ಮ್ಯಾನ್ ಸಿನಿಮಾ ಮಾಡೋದನ್ನ ಕನ್ಫರ್ಮ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಜೋಗಿ ಪ್ರೇಮ್ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮಾಡಿದ್ರು. ಆ ವೇಳೆಯೇ ಧ್ರುವ ಸರ್ಜಾ, ಪ್ರೇಮ್ ಅವರ 9ನೇ ಸಿನಿಮಾಕ್ಕೆ ಹೀರೋ ಅನ್ನೋ ಸುಳಿವು ಸಿಕ್ಕಿತ್ತು. ಆದರೆ ಪ್ರೇಮ್ ಕಡೆಯಿಂದ ಅಧಿಕೃತ ಘೋಷಣೆ ಆಗಿ ಘೋಷಣೆ ಆಗಿರಲಿಲ್ಲ.

blank

ಆಗಸ್ಟ್ 24ನೇ ತಾರೀಖ್ ಹೊಸ ಸಿನಿಮಾ ಅನೌನ್ಸ್ ಮಾಡ್ತಿವಿ ಅನ್ನೋ ವಿಚಾರ ಗೊತ್ತಾದ ಕಾರಣ ಧ್ರುವ ಸರ್ಜಾ ಫ್ಯಾನ್ಸ್ ಪ್ರೇಮ್ ಮನೆ ಮುಂದೆ ಸಂಭ್ರಮದ ಆಚರಣೆ ಮಾಡಿದ್ದರು. ಕೊನೆಗೂ ಪ್ರೇಮ್, ಧ್ರುವ ಸರ್ಜಾ ಜೊತೆ ಸಿನಿಮಾ ಮಾಡೋದು ಖಚಿತವಾಗಿದ್ದು, ಕೆವಿಎನ್ ಪ್ರೊಡೆಕ್ಷನ್ ಅಡಿ ಧ್ರುವ-ಪ್ರೇಮ್ ಸಿನಿಮಾ ಮೂಡಿ ಬರಲಿದೆ.

ಮುಂದಿನ ದಿನಗಳಲ್ಲಿ ಟೈಟಲ್ ಸಮೇತ ಮತ್ತಷ್ಟು ಸದ್ದು ಮಾಡಲು ಚಿತ್ರತಂಡ ತಯಾರಿ ನಡೆಸಿದ್ದಾರೆ. ಧ್ರುವ ಸರ್ಜಾ ನಟನೆಯ ಸಿನಿಮಾಗಳೆಂದ್ರೆ ಕ್ರೇಜ್ ಇದ್ದೇ ಇರುತ್ತೆ. ಹಂಗೆ ಜೋಗಿ ಪ್ರೇಮ್ ಸಿನಿಮಾಗಳೆಂದರೂ ಕೂಡ ಕ್ರೇಜ್ ಡಬಲ್ ಆಗುತ್ತೆ. ಈ ಕ್ರೇಜ್ ಪ್ಲಸ್ ಕ್ರೇಜ್ ಒಟ್ಟಿಗೆ ಸೇರಿದ್ರೆ ಏನಾಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Source: newsfirstlive.com Source link