BREAKING: ಕೇಂದ್ರ ಸಚಿವರನ್ನೇ ವಶಕ್ಕೆ ಪಡೆದ ಮಹಾರಾಷ್ಟ್ರ ಪೊಲೀಸರು

BREAKING: ಕೇಂದ್ರ ಸಚಿವರನ್ನೇ ವಶಕ್ಕೆ ಪಡೆದ ಮಹಾರಾಷ್ಟ್ರ ಪೊಲೀಸರು

ಮುಂಬೈ: ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನ ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ‘ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ’ ಅನ್ನೋ ಹೇಳಿಕೆ ಸಂಬಂಧ ರತ್ನಗಿರಿ ಪೊಲೀಸರು ಅವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಹೇಳಿಕೆ ಸಂಬಂಧ ನಾರಾಯಣ ರಾಣೆ ವಿರುದ್ಧ ಪೊಲೀಸರು ಎಫ್​ಐಆರ್​​ ಕೂಡ ದಾಖಲಿಸಿದ್ದಾರೆ. ಇದನ್ನ ಪ್ರಶ್ನಿಸಿ ಕೇಂದ್ರ ಸಚಿವರು ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

Source: newsfirstlive.com Source link