ಸ್ವೇಟರ್​ ಹಗರಣ ಆರೋಪ; ‘ನನಗೂ..ಅದಕ್ಕೂ ಸಂಬಂಧವಿಲ್ಲ’ ನ್ಯೂಸ್​ಫಸ್ಟ್​ಗೆ ಕೋಮಲ್​ ಸ್ಪಷ್ಟನೆ

ಸ್ವೇಟರ್​ ಹಗರಣ ಆರೋಪ; ‘ನನಗೂ..ಅದಕ್ಕೂ ಸಂಬಂಧವಿಲ್ಲ’ ನ್ಯೂಸ್​ಫಸ್ಟ್​ಗೆ ಕೋಮಲ್​ ಸ್ಪಷ್ಟನೆ

ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜು ಮಕ್ಕಳಿಗೆ ಸ್ವೇಟರ್ ವಿತರಣೆಯ ಟೆಂಡರನ್ನ ನಟ ಕೋಮಲ್ ಪಡೆದುಕೊಂಡು, ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಆರೋಪಕ್ಕೆ ನ್ಯೂಸ್​ಫಸ್ಟ್​ಗೆ ಪ್ರತಿಕ್ರಿಯಿಸಿದ ನಟ ಕೋಮಲ್​ ಈ ವಿಚಾರಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ನ್ಯೂಸ್​ಫಸ್ಟ್​ನ ಜೊತೆ ಮಾತಾಡಿದ ಅವರು, ನನ್ನ ಹೆಸರು ಹೇಳಿಕೊಂಡು ನನಗೆ ಸಂಬಂಧವಿಲ್ಲದ ವಿಚಾರಕ್ಕೆ, ನನ್ನ ಹೆಸರನ್ನು ತಳಕು ಹಾಕುತ್ತಿದ್ದಾರೆ. ನನ್ನ ಹೆಸರನ್ನು ಬಳಸಿಕೊಂಡು ಡ್ಯಾಮೆಜ್​ ಮಾಡಲು ಯತ್ನಿಸುತ್ತಿರುವವರ ಮೇಲೆ ಮಾನಹಾನಿ ಪ್ರಕರಣ ದಾಖಲಿಸುವುದಾಗಿ ನಟ ಕೋಮಲ್​ಎಚ್ಚರಿಕೆ ನೀಡಿದ್ದಾರೆ..

ಇದನ್ನೂ ಓದಿ: ‘ಶಾಲಾ ಮಕ್ಕಳ ಸ್ವೇಟರ್​​​ ಹೆಸರಲ್ಲಿ ₹1.7 ಕೋಟಿ ಹಣ ಗುಳುಂ’ ನಟ ಕೋಮಲ್ ವಿರುದ್ಧ ಗಂಭೀರ ಆರೋಪ

ಕಳೆದ ವರ್ಷ ಪಾಲಿಕೆ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಸ್ವೇಟರ್​ ವಿತರಿಸುವ ಟೆಂಡರನ್ನು ನಟ ಕೋಮಲ್​ ಪಡೆದು, ಸ್ವೇಟರ್​ ವಿತರಿಸದೆ ಭ್ರಷ್ಟಾಚಾರ ಎಸಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಸಿ. ಎಸ್. ರಘು ಗಂಭೀರ ಆರೋಪ ಮಾಡಿದ್ದಾರೆ..

Source: newsfirstlive.com Source link