ನಿಮ್ಮನ ಮದ್ವೆ ಆಗ್ಬೇಕು ಎಂಬ ಫ್ಯಾನ್​ಗೆ ಆಯ್ತು ಒಮ್ಮೆ ಗಂಡನಿಗೆ ಕೇಳ್ತೀನಿ ಎಂದ ಖುಷ್ಬೂ

ನಿಮ್ಮನ ಮದ್ವೆ ಆಗ್ಬೇಕು ಎಂಬ ಫ್ಯಾನ್​ಗೆ ಆಯ್ತು ಒಮ್ಮೆ ಗಂಡನಿಗೆ ಕೇಳ್ತೀನಿ ಎಂದ ಖುಷ್ಬೂ

ಇತ್ತೀಚೆಗಷ್ಟೇ ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್​ ಬರೋಬರಿ 14 ಕೆ. ಜಿ ತೂಕ ಇಳಿಸಿಕೊಂಡು ಸಖತ್​ ಸ್ಲಿಮ್​ ಆಗಿ ಸುದ್ದಿಯಾಗಿದ್ದಾರೆ. ತಾವು ಸ್ಲಿಮ್​ ಆಗಿರೋ ಪೋಟೋಗಳನ್ನು ಖುಷ್ಬೂ ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಖುಷ್ಬೂ ಅವರ ಈ ಹೊಸ ಲುಕ್​ಗೆ ಅವರ ಫ್ಯಾನ್ಸ್​ ಫುಲ್​ ಫಿದಾ ಆಗಿದ್ದಾರೆ.

blank

ಖುಷ್ಬೂ ತಾವು ಸ್ಲಿಮ್​ ಆಗಿರೋ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್​ಲೋಡ್​ ಮಾಡುತ್ತಿದ್ದಂತೆ ಅವರ ಫ್ಯಾನ್ಸ್​ ಕಮೆಂಟ್​ಗಳ ಸುರಿಮಳೆಯನ್ನೆ ಸುರಿಸಿದ್ದಾರೆ. ಇನ್ನು ಅದರಲೊಬ್ಬ ಫ್ಯಾನ್​ ನಾನು ನಿಮ್ಮನ ಮದುವೆ ಆಗಬೇಕು ಮೇಡಮ್ ಅಂತಾ ಖುಷ್ಬೂ ಫೋಟೋಗೆ ಕಮೆಂಟ್​ ಮಾಡಿದ್ದು, ಈ ಕಮೆಂಟ್​ಗೆ ಪ್ರತಿಕ್ರಿಯೆ ನೀಡಿದ ಖುಷ್ಬೂ, ” ಓ ಓ ಕ್ಷಮಿಸಿ.. ನೀವು ತುಂಬಾ ತಡವಾಗಿ ಕೇಳುತ್ತಿದ್ದೀರಿ. 21 ವರ್ಷ ತಡವಾಗಿದೆ.. ಅದ್ರು ಒಂದು ಬಾರಿ ನಾನು ನನ್ನ ಗಂಡನ ಹತ್ರ ಕೇಳುತ್ತೇನೆ ಅಂತಾ ಫನ್ನಿಯಾಗಿ ಪ್ರತಿಕ್ರಿಯೆಸಿದ್ದಾರೆ.

blank

Source: newsfirstlive.com Source link