ಕಾಶ್ಮೀರ ವಶಕ್ಕೆ ತಾಲಿಬಾನ್ ಸಹಾಯ ಮಾಡಲಿದೆ ಎಂದ ಪಾಕಿಸ್ತಾನ್; ಸ್ಕೆಚ್ ಹಾಕಿದ್ರಾ ಇಮ್ರಾನ್?

ಕಾಶ್ಮೀರ ವಶಕ್ಕೆ ತಾಲಿಬಾನ್ ಸಹಾಯ ಮಾಡಲಿದೆ ಎಂದ ಪಾಕಿಸ್ತಾನ್; ಸ್ಕೆಚ್ ಹಾಕಿದ್ರಾ ಇಮ್ರಾನ್?

ಶ್ರೀನಗರ: ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ನಂತರ ತಾಲಿಬಾನ್​ ಕಣ್ಣು ಭಾರತದ ಜಮ್ಮು-ಕಾಶ್ಮೀರದ ಮೇಲೆ ಬಿದ್ದಿದೆ. ಭಾರತದ ಭಾಗವಾದ ಜಮ್ಮು-ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನದೊಂದಿಗೆ ತಾಲಿಬಾನ್​​ ಕೈ ಜೋಡಿಸಲಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್‌ (ಪಿಟಿಐ) ಪಕ್ಷವೇ ಖುದ್ದು ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಮಾತಾಡಿರುವ ಪಿಟಿಐ ನಾಯಕಿ ನೀಲಮ್​​ ಇರ್ಶಾದ್​​ ಶೇಖ್​ ಎಂಬುವರು ಲೈವ್​​ನಲ್ಲೇ ಹೀಗೆ ಉದ್ದೇಶಪೂರ್ವಕ ಹೇಳಿಕೆ ನೀಡಿದ್ದಾರೆ. ಜಮ್ಮು-ಕಾಶ್ಮೀರವನ್ನು ವಶಕ್ಕೆ ಪಡೆಯಲು ಪಾಕಿಸ್ತಾನದ ಜತೆ ತಾಲಿಬಾನ್​​ ಕೈ ಜೋಡಿಸಲಿದೆ. ಸದ್ಯದಲ್ಲೇ ಕಾಶ್ಮೀರವನ್ನು ನಾವು ವಶಪಡಿಸಿಕೊಳ್ಳಲಿದ್ದೇವೆ ಎಂದಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಸರ್ಕಾರ ರಚನೆಯ ತಾಲೀಮಿನಲ್ಲಿದ್ದಾರೆ. ಈ ಮಧ್ಯೆ ಪಾಕಿಸ್ತಾನದ ಐಎಸ್​ಐ ಮುಖ್ಯಸ್ಥ ಹಮೀದ್ ಫೈಜ್​ ಕಳ್ಳಾಟ ಬಯಲಾಗಿದೆ. ಈತ ತಾಲಿಬಾನ್ ನಾಯಕರ ಭೇಟಿ ಮಾಡಿರುವ ಫೋಟೋ ಹೊರಬಿದ್ದಿದೆ. ಇನ್ನು, ಹಮೀದ್​ ಫೈಜ್ ಕಂದಹಾರ್​ನಲ್ಲಿ ತಾಲಿಬಾನಿಗಳನ್ನ ಭೇಟಿ ಮಾಡಿದ್ದಾನೆ ಎನ್ನಲಾಗಿದ್ದು, ಅಫ್ಘಾನಿಸ್ತಾನದ ಮುಂದಿನ ಅಧ್ಯಕ್ಷ ಅಂತಲೇ ಬಿಂಬಿತವಾಗಿರುವ ಮುಲ್ಲಾ ಅಬ್ದುಲ್ಲಾ ಘನಿ ಬರಾದರ್​ ಜೊತೆಗೆ ಚರ್ಚೆ ನಡೆಸಿದ್ದಾನೆ.

blank

ಇನ್ನು, ತಾಲಿಬಾನಿಗಳ ಜೊತೆಗೆ ಹಮೀದ್ ಫೈಜ್ ನಮಾಜ್ ಮಾಡುತ್ತಿರುವ ಫೋಟೋ ಲೀಕ್ ಆಗಿದ್ದಿ, ಪಾಕ್​ ಸರ್ಕಾರ ಹಾಗೂ ತಾಲಿಬಾನ್​ ನಡುವಿನ ಸ್ನೇಹ ಸಂಬಂಧಕ್ಕೆ ಐಎಸ್​ಐ ಸೇತುವೆಯಾಗಿರೋದು ಬಯಲಾಗಿದೆ. ಇನ್ನು, ಸರ್ಕಾರ ರಚನೆಯ ಸರ್ಕಸ್​ನಲ್ಲಿರುವ ತಾಲಿಬಾನಿಗಳ ಭೇಟಿಗಾಗಿ, ಇಂದು ಕಾಬೂಲ್​ಗೆ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಭೇಟಿ ನೀಡುವ ಸಾಧ್ಯತೆ ಇದ್ದು, ಸರ್ಕಾರ ರಚನೆ ಹಾಗೂ ಮುಂದಿನ ಬಾಂಧವ್ಯದ ಬಗ್ಗೆ ಚರ್ಚಲಿಸಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ತಾಲಿಬಾನ್ ಜೊತೆಗೆ ಪಾಕ್​ ISI ಮುಖ್ಯಸ್ಥನ ಕಳ್ಳಾಟ.. ಅಫ್ಘಾನ್ ಅರಾಜಕತೆಯ ಹಿಂದೆ ಪಾಕ್ ಕೈವಾಡ?

ತಾಲಿಬಾನ್​​ ಅಫ್ಘಾನಿಸ್ತಾನ ವಶಕ್ಕೆ ಪಡೆಯುತ್ತಿದ್ದಂತೆಯೇ ತನ್ನನ್ನು ಬೆಂಬಲಿಸುವ ಪಾಕಿಸ್ತಾನಕ್ಕೆ ಕಾಶ್ಮೀರ ವಶಕ್ಕೆ ಪಡೆಯಲು ಸಹಾಯ ಮಾಡುವುದಾಗಿ ಮಾತು ಕೊಟ್ಟಿದೆ ಎನ್ನಲಾಗಿದೆ. ತಾಲಿಬಾನ್‌ನಲ್ಲಿ ಕೆಲವು ಲಷ್ಕರ್‌ ಕಮಾಂಡರ್‌ಗಳು ಕೂಡ ಕಾರ್ಯನಿರ್ವಹಿಸಲು ಆರಂಭಿಸಿದ್ದಾರಂತೆ. ತಾಲಿಬಾನ್‌ ಕೈಗೆ ಬಂದ ಶಸ್ತ್ರಗಳು ಲಷ್ಕರ್‌ಗೆ ಹಸ್ತಾಂತರ ಆಗುತ್ತಿವೆ. ಜಮ್ಮು-ಕಾಶ್ಮೀರದಲ್ಲಿ ಈ ಮೂಲಕ ದಾಳಿ ನಡೆಸಲು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಹುನ್ನಾರ ನಡೆಸಿದೆ ಎಂದು ಮೂಲಗಳು ಹೇಳಿವೆ.

Source: newsfirstlive.com Source link