ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಜೊತೆ ಫಿಲ್ಮ್ ಮಾಡ್ತಾರಾ ಇಂದ್ರಜಿತ್​ ಲಂಕೇಶ್​..?

ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಜೊತೆ ಫಿಲ್ಮ್ ಮಾಡ್ತಾರಾ ಇಂದ್ರಜಿತ್​ ಲಂಕೇಶ್​..?

ಡ್ರಗ್ಸ್​ ಕೇಸ್​ಗೆ ಸಂಬಂಧ ಪಟ್ಟಂತೆ, ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿರವರ FSL ಪರೀಕ್ಷೆಯಲ್ಲಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟ ಬೆನ್ನಲ್ಲೇ, ಇಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ, ಕೇಸ್​ ಬಗ್ಗೆ ಮಾತುಕತೆ ನಡೆಸಿದ್ರು.

ತನಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ಅವರ ಮೇಲೆ ಅನುಕಂಪವಿದೆ ಎಂದಿದ್ದಾರೆ. ಅಲ್ಲದೇ, ಅವರಿಗೆಲ್ಲ ಏನಾದ್ರೂ ಚಿಕಿತ್ಸೆ ಕೊಡಿಸಲು ಮನವಿ ಮಾಡುವೆ ಅಂತಲೂ ಇಂದ್ರಜಿತ್ ಹೇಳಿದ್ದಾರೆ. ಇನ್ನೂ, ಈ ವೇಳೆ ವೈಕ್ತಿಕವಾಗಿ ಯಾವುದೇ ದ್ವೇಷವಿಲ್ಲ, ಅನುಕಂಪವಿದ್ದಿದ್ದರಿಂದ ಹೀಗೆ ಮಾಡಿದ್ದೆ ಅಂತ ಹೇಳಿದ್ರು. ಅಲ್ಲದೇ, ನೀವು ಇಬ್ಬರೂ ನಟಿಯರ ಜೊತೆ ಸಿನಿಮಾ ಮಾಡ್ತೀರಾ ಅಂತ ಕೇಳಿದಾಗ, ‘‘ಅನುಕಂಪವಿರೋದು ನಿಜ, ಸಿನಿಮಾ ದೂರದ ಮಾತು ‘Anything is possible’. ಅದರ ಬಗ್ಗೆ ನಾನು ಮಾತಾಡ್ತಾಯಿಲ್ಲ. ಡ್ರಗ್ಸ್​ ಬಂದು ಬೆಂಗಳೂರಲ್ಲಿ ಡಂಪ್​ ಆಗ್ತಾಯಿದೆ ಅಂದ್ರೆ ಅದನ್ನ ಸೇವನೆ ಮಾಡ್ತಾಯಿರೋರು ತುಂಬಾ ಜನರಿದ್ದಾರೆ. ಹಾಗಾಗಿ ಈ ಬಗ್ಗೆ ತನಿಖೆಯಾಗ್ಬೇಕು ಅಂತ ನಾನು ಮಾಧ್ಯಮದ ಮೂಲಕ ಕೇಳಿಕೊಂಡಿದ್ದೆ’’ ಅಂತ ಇಂದ್ರಜಿತ್​ ಲಂಕೇಶ್​ ಹೇಳಿದ್ದಾರೆ.

Source: newsfirstlive.com Source link