ಮೋದಿ-ಪುಟಿನ್ ಡೀಪ್ ಡಿಸ್ಕಷನ್; ಯಾವೆಲ್ಲಾ ವಿಚಾರಗಳು ಪ್ರಸ್ತಾಪ ಆದ್ವು..?

ಮೋದಿ-ಪುಟಿನ್ ಡೀಪ್ ಡಿಸ್ಕಷನ್; ಯಾವೆಲ್ಲಾ ವಿಚಾರಗಳು ಪ್ರಸ್ತಾಪ ಆದ್ವು..?

ನವದೆಹಲಿ: ಅಫ್ಘಾನಿಸ್ತಾನ ಈಗ ತಾಲಿಬಾನ್ ನಿಯಂತ್ರಣದಲ್ಲಿದೆ. ಅಲ್ಲಿ ಉಂಟಾಗಿರುವ ಬಿಕ್ಕಟ್ಟು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರಿದ್ದು, ಹೀಗಾಗಿ ಎಲ್ಲಾ ದೇಶಗಳು ತಮ್ಮ ನಾಗರಿಕರನ್ನು ಅಲ್ಲಿಂದ ಸುರಕ್ಷಿತವಾಗಿ ಕರೆದುಕೊಂಡು ಬರುವ ಪ್ರಯತ್ನ ಮಾಡುತ್ತಿವೆ. ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಇಬ್ಬರು ರಾಷ್ಟ್ರ ನಾಯಕರು ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಗಂಭೀರವಾಗಿ ಚರ್ಚೆ ನಡೆಸಿದ್ದಾರೆ.

ಈ ಸಮಯದಲ್ಲಿ ತಾಲಿಬಾನ್ ಸರ್ಕಾರವನ್ನು ಗುರುತಿಸಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಪ್ರಪಂಚದ ಮುಂದೆ ಬಂದಿದೆ. ಹಲವು ದೇಶಗಳು ಇದನ್ನು ಬಹಿರಂಗವಾಗಿ ವಿರೋಧಿಸಿವೆ. ಅದೇ ಸಮಯದಲ್ಲಿ ಕೆಲವು ದೇಶಗಳು ಬೆಂಬಲ ಕೂಡ ಸೂಚಿಸಿವೆ. ಚೀನಾ ಮತ್ತು ಪಾಕಿಸ್ತಾನದ ಹಿರಿಯ ಮಂತ್ರಿಗಳೊಂದಿಗೆ ತಾಲಿಬಾನ್ ಪ್ರತ್ಯೇಕ ಸಭೆಗಳನ್ನು ನಡೆಸಿದೆ ಅಂತಾ ವರದಿಯಾಗಿದೆ.

ಇದೀಗ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮೋದಿ ಮಾತುಕತೆ ನಡೆಸಿದ್ದಾರೆ. 45 ನಿಮಿಷಗಳ ಮಾತುಕತೆಯಲ್ಲಿ ಕೇವಲ ಅಫ್ಘಾನಿಸ್ತಾನದ ವಿಚಾರವನ್ನ ಮಾತ್ರ ಪ್ರಸ್ತಾಪ ಮಾಡಿಲ್ಲ. ಉಭಯ ದೇಶಗಳ ದ್ವಿಪಕ್ಷೀಯ ಒಪ್ಪಂದಗಳ ಬಗ್ಗೆಯೂ ಮಾತನಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ.. ಅಫ್ಘಾನಿಸ್ತಾನದ ಇತ್ತೀಚೆಗಿನ ಬೆಳವಣಿಗೆ ಬಗ್ಗೆ ಸ್ನೇಹಿತ ಹಾಗೂ ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಹತ್ವದ ವಿಚಾರಗಳನ್ನ ಶೇರ್ ಮಾಡಿಕೊಂಡೆ. ಜೊತೆಗೆ ದ್ವಿಪಕ್ಷೀಯ ಅಜೆಂಡಾಗಳ ಬಗ್ಗೆಯೂ ಮಾತುಕತೆ ನಡೆಸಿದ್ವಿ. ಅಲ್ಲದೇ ಕೊರೊನಾ ಎದುರಿಸಲು ಎರಡೂ ರಾಷ್ಟ್ರಗಳ ಸಹಕಾರದ ಬಗ್ಗೆಯೂ ಮಾತುಕತೆ ನಡೆದಿದೆ. ಮುಂದಿನ ದಿನಗಳಲ್ಲಿ ಮಹತ್ವದ ವಿಚಾರಗಳ ಬಗ್ಗೆ ಸಮಾಲೋಚನೆ ಮಾಡಲು ನಾವಿಬ್ಬರು ಒಪ್ಪಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

Source: newsfirstlive.com Source link