ರಾಗಿಣಿ, ಸಂಜನಾ ಡ್ರಗ್ಸ್ ಸೇವನೆ ಸಾಬೀತು; ನಮ್ಮ ಹೋರಾಟಕ್ಕೆ ಸಂದ ಜಯ ಎಂದ ಪ್ರಶಾಂತ್​​ ಸಂಬರಗಿ

ರಾಗಿಣಿ, ಸಂಜನಾ ಡ್ರಗ್ಸ್ ಸೇವನೆ ಸಾಬೀತು; ನಮ್ಮ ಹೋರಾಟಕ್ಕೆ ಸಂದ ಜಯ ಎಂದ ಪ್ರಶಾಂತ್​​ ಸಂಬರಗಿ

ಸ್ಯಾಂಡಲ್​​ವುಡ್​​ ಡ್ರಗ್ಸ್​ ಕೇಸ್​​ ಸಂಬಂಧ ತನಿಖಾಧಿಕಾರಿ ಇನ್ಸ್​ಪೆಕ್ಟರ್​ ಪುನೀತ್​ ಬೆಂಗಳೂರಿನ 33ನೇ CCH​ ಕೋರ್ಟ್​ಗೆ FSL​ ವರದಿ ಸಲ್ಲಿಸಿದ್ದಾರೆ. ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಡ್ರಗ್ ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​​​ ಸಂಬರಗಿ ನ್ಯೂಸ್​​ಫಸ್ಟ್​ ಪ್ರತಿಕ್ರಿಯೆ ನೀಡಿದ್ದಾರೆ.

9 ತಿಂಗಳ ನಂತರ ನಮ್ಮ ಹೋರಾಟಕ್ಕೆ, ಸತ್ಯಕ್ಕೆ ಜಯ ಸಿಕ್ಕಿದೆ. ನಟಿ ರಾಗಿಣಿ ಸಾಕ್ಷಿ ನಾಶಕ್ಕೆ ಪ್ರಯತ್ನ ಪಟ್ಟಿದ್ರು. ಅವರ ಮೇಲೆ ಮತ್ತೊಂದು ಕೇಸ್ ಹಾಕಬೇಕು. ಸಂಜನಾ ಮಾಧ್ಯಮಗಳ ಮುಂದೆ ಆಡಿದ್ದ ನಾಟಕವನ್ನ, ಸಿನಿಮಾದಲ್ಲಿ ಮಾಡಿದ್ರೆ ದೊಡ್ಡ ನಾಯಕಿಯಾಗ್ತಿದ್ರು ಎಂದರು.

ಇದನ್ನೂ ಓದಿ: ಡ್ರಗ್ಸ್​ ಕೇಸ್​​​ನಲ್ಲಿ ಸಿಕ್ಕಿರೋದು ಮೀನುಗಳಷ್ಟೇ, ಇನ್ನು ದೊಡ್ಡ ತಿಮಿಂಗಲಗಳಿವೆ; ಇಂದ್ರಜಿತ್ ಹೀಗಂದಿದ್ದು ಯಾರಿಗೆ?

ಫಾರ್ಮ್ ಹೌಸ್​​ಗಳಲ್ಲಿ ಪಾರ್ಟಿ ಮಾಡುವ ಸ್ಟಾರ್ ನಟರ ಬಗ್ಗೆ ಶೀಘ್ರದಲ್ಲೇ ಮಾಹಿತಿ ಕೊಡ್ತೀನಿ. ಸ್ಯಾಂಡಲ್​​​ವುಡ್​​ನಲ್ಲಿ ಮಾದಕ ವ್ಯಸನಿಗಳಿದ್ದಾರೆ. ಅದರೆ ಡ್ರಗ್ ಪೆಡ್ಲರ್​​ಗಳು ಇಲ್ಲ ಎಂದು ಹೇಳಿದರು.

Source: newsfirstlive.com Source link