ವಿಶ್ವನಾಥ್ ಅವರು ಟೀಕೆ ಮಾಡದ ವ್ಯಕ್ತಿಯೆ ಇಲ್ಲ: ಹಳ್ಳಿ ಹಕ್ಕಿಗೆ ಟಾಂಗ್​ ನೀಡಿದ ಪ್ರತಾಪ್​ ಸಿಂಹ

ವಿಶ್ವನಾಥ್ ಅವರು ಟೀಕೆ ಮಾಡದ ವ್ಯಕ್ತಿಯೆ ಇಲ್ಲ: ಹಳ್ಳಿ ಹಕ್ಕಿಗೆ ಟಾಂಗ್​ ನೀಡಿದ ಪ್ರತಾಪ್​ ಸಿಂಹ

ಮೈಸೂರು: ಬೆಂಗಳೂರು – ಮೈಸೂರು ದಶಪಥ ರಸ್ತೆಯ ಕ್ರೆಡಿಟ್ ವಾರ್ ವಿಚಾರವಾಗಿ ಸಂಸದ ಪ್ರತಾಪ್​ ಸಿಂಹ ಪ್ರತಿಕ್ರಿಯಿಸಿದ್ದು, ಹಳ್ಳಿ ಹಕ್ಕಿ ವಿಶ್ವನಾಥ್ ಗೆ ಗುಟುರಿದ್ದಾರೆ.

ಬೆಂಗಳೂರು – ಮೈಸೂರು ದಶಪಥ ರಸ್ತೆಯ ಕ್ರೆಡಿಟ್ ವಾರ್ ವಿಚಾರವಾಗಿ ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು: ಮೈಸೂರು – ಬೆಂಗಳೂರು ದಶಪಥ ರಸ್ತೆಯ ಕಾಮಗಾರಿ ವೀಡಿಯೋ ಮಾಡಿದ್ದು ಇಷ್ಟು ಜನರ ಹೊಟ್ಟೆಗೆ ಬೆಂಕಿ ಬೀಳಿಸುತ್ತೆ ಅಂತಾ ಗೊತ್ತಿರಲಿಲ್ಲ ಎಂದು ಸಂಸದ ಪ್ರತಾಪ್​ ಸಿಂಹ ವ್ಯಂಗ್ಯವಾಡಿದ್ದಾರೆ.

ಇನ್ನು ಮಾಜಿ ಸಚಿವ ಹೆಚ್​. ವಿಶ್ವನಾಥ್​ ಹೇಳಿಕೆಗೆ ತಿರುಗೇಟು ನೀಡಿದ ಅವರು, 8,666 ಕೋಟಿ ರೂ ಪ್ರಾಜೆಕ್ಟ್‌ ನಲ್ಲಿ 8 ಪೈಸೆನಾದರೂ ವಿಶ್ವನಾಥ್ ಅವರು ಬಿಡುಗಡೆ ಮಾಡಿಸಿದ್ರಾ? ಅಥವಾ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ರಾ? ವಿಶ್ವನಾಥ್ ಅವರು ತಾವೇ ಈ ಯೋಜನೆ ತಂದಿದ್ದರೆ ತಮ್ಮ ಚುನಾವಣೆ ವೇಳೆ ಯಾಕೆ ಹೇಳಿಲ್ಲ. ಎಂದು ಪ್ರಶ್ನೆ ಹಾಕಿದ್ದಾರೆ.

ಇದನ್ನೂ ಓದಿ:  ಡ್ರಗ್ಸ್​ ಕೇಸ್​​​ನಲ್ಲಿ ಸಿಕ್ಕಿರೋದು ಮೀನುಗಳಷ್ಟೇ, ಇನ್ನು ದೊಡ್ಡ ತಿಮಿಂಗಲಗಳಿವೆ; ಇಂದ್ರಜಿತ್ ಹೀಗಂದಿದ್ದು ಯಾರಿಗೆ?

ವಿಶ್ವನಾಥ್ ಅವರು ಟೀಕೆ ಮಾಡದ ವ್ಯಕ್ತಿಯೆ ಇಲ್ಲ. ಟ್ರಂಪ್, ಬೈಡೆನ್​ರನ್ನೆ ಅವರು ಬಿಟ್ಟಿಲ್ಲ. ದೇವೇಗೌಡ್ರು, ಯಡಿಯೂರಪ್ಪ,  ವಿಜಯೇಂದ್ರ,  ಎಸ್.ಟಿ. ಸೋಮಶೇಖರ್ ಎಲ್ಲರನ್ನೂ ವಿಶ್ವನಾಥ್ ಬೈಯ್ದಿದ್ದು ಆಯ್ತು.ಬಸವರಾಜ ಬೊಮ್ಮಾಯಿ ಬಗ್ಗೆ ಮಾತಾಡೋಕೆ ಇನ್ನೂ ಆರಂಭಿಸಿಲ್ಲ.ಈ‌ ಗ್ಯಾಪ್ ನಲ್ಲಿ ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.

ಮಾಧ್ಯಮದ ಮುಂದೆ ಚರ್ಚೆ ಮಾಡೋಣಾ ಬನ್ನಿ. ಈ ಯೋಜನೆಯ ಚರ್ಚೆಯಾಗಲಿ. ಹಳೆ ಉಂಡುವಾಡಿ ಕುಡಿಯುವ ನೀರು ಯೋಜನೆಗೂ ವಿಶ್ವನಾಥ್ ಐದು ಪೈಸೆ ಕೊಡಿಸಿಲ್ಲ. ನೀವು ಹಿರಿಯರು ನೀವು ಮಾರ್ಗದರ್ಶನ ಮಾಡಿ ಸರ್. ಬೀದಿ ಜಗಳಕ್ಕೆ ಇಳಿಯಬೇಡಿ ಎಂದು ಮನವಿ ಮಾಡಿದ್ದಾರೆ.

ದಶಪಥ ರಸ್ತೆ ಕ್ರೆಡಿಟ್ ಭಾರತ ಮಾತೆಗೆ ಸೇರಿದ್ದು ಎಂಬ ಶಾಸಕ ರಾಮದಾಸ್ ಗೂ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಗಿ ತಿರುಗೇಟು ನೀಡಿದ್ದು, ಮೋದಿ ಅವರು ಭಾರತ ಮಾತೆಯ ಸುಪುತ್ರ. ಕ್ಷೇತ್ರದಲ್ಲಿ ಮಾಡುವ ಕೆಲಸ ಭಾರತ ಮಾತೆಗೆ ಸೇರಿದ್ದು ಎಂದು ಹೇಳುವ ಕಾಲ ಈಗ ಬಂತಲ್ಲ ನನಗೆ ಸಂತೋಷವಾಗಿದೆ. ಕೆ.ಆರ್. ಕ್ಷೇತ್ರದಲ್ಲಿ ದಶಕಗಳಿಂದ ಬಿದ್ದಿರುವ ಕಸವನ್ನು ಸ್ವಚ್ಚ ಮಾಡುವ ಕೆಲಸವನ್ನು ನಾನೇ ಮಾಡುತ್ತಿದ್ದೇನೆ. ಅದರ ಕ್ರೆಡಿಟ್ ಕೂಡ ಭಾರತ ಮಾತೆಗೆ ಸೇರಿದ್ದಾಗುತ್ತೆ ಎಂದಿದ್ದಾರೆ.

Source: newsfirstlive.com Source link