ಶುರುವಾಗಲಿದೆ ಸರಿಗಮಪ ಚಾಂಪಿಯನ್​ಶಿಪ್; ಈಗ ರಾಜೇಶ್​ ಕೃಷ್ಣನ್​ ಸ್ಥಾನ ತುಂಬೋರು ಯಾರು?​

ಶುರುವಾಗಲಿದೆ ಸರಿಗಮಪ ಚಾಂಪಿಯನ್​ಶಿಪ್; ಈಗ ರಾಜೇಶ್​ ಕೃಷ್ಣನ್​ ಸ್ಥಾನ ತುಂಬೋರು ಯಾರು?​

ಸುಮಧುರ ಗಾಯನಗಳ ಮೂಲಕ ಗಾನ ಸುಧೆ ಹರಿಸಿದ ಶೋ ಸರಿಗಮಪ..ಅದೇಷ್ಟೊ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಗಿರುವ ವೇದಿಕೆ. ಈಗ ಮತ್ತೆ ನಿಮ್ಮ ಮನೆಯಲ್ಲಿ ಸಂಗೀತ ನಾದ ಮೊಳಗಿಸಲು ಹೊಸ ರೂಪದಲ್ಲಿ ಬರುತ್ತಿದೆ..ಅದೇ ಸರಿಗಮಪ ಚಾಂಪಿಯನ್​​ಶಿಪ್. ಹೌದು, ಜೀ ಕನ್ನಡ ತನ್ನ ಹಳೆ  ಸ್ಪರ್ಧಿಗಳನ್ನ ಆಗಾಗ ವೇದಿಕೆಯ ಮೇಲೆ ಕರೆ ತರುತ್ತಿರುತ್ತದೆ. ಈ ಹಿಂದೆ ಕಾಮಿಡಿ ಕಿಲಾಡಿಗಳು ಚಾಂಪಿಯನ್​​ಶಿಪ್ ಮಾಡಲಾಗಿತ್ತು. ಈಗ ಅದೇ ರೀತಿಯ ಫಾರ್ಮೆಟ್​ನಲ್ಲಿ ಸರಿಗಮಪ ಬರುತ್ತಿದೆ..

blank

ಹಲವಾರು ವರ್ಷಗಳಿಂದ ಜನ ಮೆಚ್ಚಿದ ಸಿಂಗಿಂಗ್​ ಶೋ ಎನಿಸಿಕೊಂಡಿರುವ ಸರಿಗಮಪ ಚಾಂಪಿಯನ್​​ಶಿಪ್​ ಸದ್ಯದಲ್ಲಿ ನಿಮ್ಮ ಮುಂದೆ ಬರಲಿದೆ ಎಂಬ ಮಾಹಿತಿ ತಿಳಿದು ಬಂದಿದೆ. ವಿಶೇಷ ಅಂದ್ರೆ ಸರಿಗಮಪ ಶೋನ ಹಳೆ ಸ್ಪರ್ಧಿಗಳು ಈ ಚಾಂಪಿಯನ್​​ಶಿಪ್​ನಲ್ಲಿ ಭಾಗವಹಿಸಲಿದ್ದು, ಸಾಕಷ್ಟು ಬದಲಾವಣೆಗಳ ಜೊತೆ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ..

ಮೂಲಗಳ ಪ್ರಕಾರ ನಿರೂಪಕಿ ಅನುಶ್ರೀ ಅವರೇ ಕಾರ್ಯಕ್ರಮದ ನಿರೂಪಣೆ ಮುಂದುವರೆಸಲಿದ್ದು, ಇನ್ನುಳಿದಂತೆ ತೀರ್ಪುಗಾರರ ಸ್ಥಾನ ಬದಲಾಗುವ ಸಾಧ್ಯತೆ ಇದೆ. ಯಥಾ ಪ್ರಕಾರ ವಿಜಯ್​ ಪ್ರಕಾಶ್​, ಅರ್ಜುನ್​ ಜನ್ಯಾ ಹಾಗೂ ಮಹಾ ಗುರುಗಳಾದ ಹಂಸಲೇಖ ಅವರು ಇರಲಿದ್ದಾರೆ.

blank

ಗಾಯಕ ರಾಜೇಶ್​ ಕೃಷ್ಣನ್​ ಅವರ ಸ್ಥಾನ ಬದಲಾಗುವ ಎಲ್ಲಾ ರೀತಿಯ ಸಾಧ್ಯತೆ ಇದೆ. ಕಾರಣ ರಾಜೇಶ್​ ಅವರು ಎದೆ ತುಂಬಿ ಹಾಡುವೆನು ಶೋನಲ್ಲಿ ಬ್ಯಸಿಯಾಗಿದ್ದಾರೆ. ರಾಜೇಶ್​ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ…
ಒಟ್ನಲ್ಲಿ ಜನರ ಅಚ್ಚುಮೆಚ್ಚಿನ ಕಾರ್ಯಕ್ರಮ ಸರಿಗಮಪ ಮತ್ತೆ ಬರುತ್ತಿರುವುದು ಸಂಗೀತಾಸಕ್ತರಿಗೆ ಸಂಭ್ರಮ ನೀಡಿದೆ. ಸರಿಗಮಪದ ಹಳೆ ವಿದ್ಯಾರ್ಥಿಗಳ ಸಮಾಗಮ ಹೇಗಿರಲಿದೆ ಎಂಬ ಕುತೂಹಲ ಮೂಡಿಸಿದೆ.

Source: newsfirstlive.com Source link