ವಿದ್ಯಾರ್ಥಿಗಳಿಗೆ ಆನ್​​ಲೈನ್ ಮೂಲಕ ಬಸ್ ಪಾಸ್​ ವ್ಯವಸ್ಥೆ -ದರ ಏರಿಕೆ ಬಗ್ಗೆ ಸರ್ಕಾರ ಹೇಳಿದ್ದೇನು..?

ವಿದ್ಯಾರ್ಥಿಗಳಿಗೆ ಆನ್​​ಲೈನ್ ಮೂಲಕ ಬಸ್ ಪಾಸ್​ ವ್ಯವಸ್ಥೆ -ದರ ಏರಿಕೆ ಬಗ್ಗೆ ಸರ್ಕಾರ ಹೇಳಿದ್ದೇನು..?

ಬೆಂಗಳೂರು: ಸಾರಿಗೆ ಇಲಾಖೆಯ ಎಲ್ಲಾ ನಿಗಮಗಳ ವ್ಯವಸ್ಥಾಪಕ ಅಧಿಕಾರಿಗಳ ಜೊತೆ ಸಾಕಷ್ಟು ಸುದೀರ್ಘವಾದ ಚರ್ಚೆ ಆಗಿದೆ. ಇಲಾಖೆಯಲ್ಲಿ ಹೊಸ ಸುಧಾರಣೆ ತರಲು ತೀರ್ಮಾನ ಮಾಡಲಾಗಿದೆ ಅಂತ ಸಾರಿಗೆ ಸಚಿವ ಶ್ರೀರಾಮಲು ಹೇಳಿದ್ದಾರೆ.

ಕೊವಿಡ್​ 1, 2 ಹಾಗೂ 3ನೇ ಅಲೆಯ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಕೊವಿಡ್​ನಿಂದ ಸಾರಿಗೆ ಇಲಾಖೆಗೆ ಸಾಕಷ್ಟು ನಷ್ಟ ಆಗಿದೆ. ಸಾರಿಗೆ ಇಲಾಖೆ ನಷ್ಟದಲ್ಲಿದೆ. ಜನ ಸಾಮಾನ್ಯರಿಗೆ ಯಾವುದೇ ತೊಂದರೆ ಆಗಬಾರದು. ಸಾರಿಗೆ ಇಲಾಖೆ ಸೇವೆಯ ಜೊತೆಗೆ ಲಾಭ ತರಲೂ ಕ್ರಮ ತೆಗೆದುಕೊಳ್ಳಲಾಗಿದೆ. ಮುಂದಿನ ವಾರ ದೆಹಲಿಗೆ ತೆರಳಿ, ಕೇಂದ್ರ ಸಚಿವರನ್ನ ಭೇಟಿ ಮಾಡಿ ವಿಶೇಷ ಟಾಸ್ಕ್ ಫೋರ್ಸ್ ರಚನೆಗೆ ಚಿಂತೆ ಮಾಡಲಾಗುತ್ತದೆ.  ಒಂದು ನೇಷನ್ ಒಂದು ಕಾರ್ಡ್ ಅಡಿ, ಕಾರ್ಮಿಕ ಮಹಿಳೆಯರಿಗೆ ಉಚಿತ ಪ್ರಯಾಣ ಆಗಬೇಕಿದೆ. ಹಾಗಾಗಿ ಈ ನಿಗಮದಲ್ಲಿ 100 ರಿಂದ 200 ಕೋಟಿ ನಷ್ಟ ಆಗ್ತಿದೆ. ನಿಗಮಗಳನ್ನು ಲಾಭದತ್ತ ತರಬೇಕಿದೆ ಅಂತ ಶ್ರೀರಾಮುಲು ಹೇಳಿದರು.

blank

ಎಷ್ಟು ನಷ್ಟ ಆಗಿದೆ..?
7,354 ಅಂತರ ನಿಗಮ ವರ್ಗಾವಣೆ ಅರ್ಜಿ ಬಂದಿವೆ. 4,854 ನೌಕರರು ಅರ್ಹತೆ ಹೊಂದಿರುತ್ತಾರೆ. ಟಿಕೆಟ್ ಏರಿಕೆ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ ಎಂದರು. ಅಲ್ಲದೇ ಸಾರಿಗೆ ನೌಕರರ ಪ್ರತಿಭಟನೆ ಬಗ್ಗೆ ಮಾತನಾಡಿದ ಅವ್ರು, ಅದರ ಬಗ್ಗೆ ಮಾಹಿತಿ ಇದೆ. ಸದ್ಯ ಇಲಾಖೆಯನ್ನ ಲಾಭದತ್ತ ತೆಗೆದುಕೊಂಡು ಹೋಗಬೇಕಿದೆ. ಹೀಗಾಗಿ ನಾನು ಕೋಡಿಹಳ್ಳಿ ಚಂದ್ರಶೇಖರ್ ಬಗ್ಗೆ ಮಾತನಾಡಲ್ಲ. ನಾವೂ ಹೋರಾಟ ಮಾಡಿ ಬಂದವರು. ಸದ್ಯ ನಷ್ಟದ ಇಲಾಖೆಯನ್ನ ಲಾಭದತ್ತ ತರಬೇಕಿದೆ. ಕೋಡಿಹಳ್ಳಿ ಜೊತೆ ಸರ್ಕಾರ ಮಾತನಾಡಲಿದೆ ಎಂದರು.

ಇನ್ನೂ KSRTC -427, BMTC- 548, NWKSRTC-389, ಕಲ್ಯಾಣ ಕರ್ನಾಟಕ ಸಾರಿಗೆಗೆ 191 ಕೋಟಿ ಕೊವಿಡ್​ನಿಂದ ಇಲಾಖೆಗೆ ನಷ್ಟ ಆಗಿದೆ. ಮುಂದಿನ ತಿಂಗಳಿಂದ ಸಾರಿಗೆ ನೌಕರರಿಗೆ ಯಾವುದೇ ನಷ್ಟ ಆಗದಂತೆ ಕ್ರಮ ತೆಗೆದುಕೊಳ್ಳುವೆ. ವಿದ್ಯಾರ್ಥಿಗಳಿಗೆ ಆನ್​ಲೈನ್​​ನಲ್ಲಿ ಬಸ್ ಪಾಸ್ ನೀಡುವ ವ್ಯವಸ್ಥೆ ಜಾರಿ ಮಾಡುವೆ. ರಾಜಕಾರಣ ಅಂದ್ರೆ ಇದೆಲ್ಲ ಇರುತ್ತೆ. ಈ ಇಲಾಖೆ ಬೇಕು ಎಂದು ಹೇಳಲಾಗುತ್ತಾ? DCM ಆಗಿದ್ದ ಲಕ್ಷ್ಮಣ ಸವದಿ ಖಾತೆ ನನಗೆ ನೀಡಿದ್ದಾರೆ ಎಂದರು.

Source: newsfirstlive.com Source link