ಶಹೀನ್​​ ಬಾಗ್​​ಗೆ ಆಹಾರ ಪೂರೈಸಿ ಅಂದು CAA ವಿರುದ್ಧ ಹೋರಾಟ, ಇಂದು CAA ವಿಸ್ತರಿಸಿ ಅಂತ ಒತ್ತಾಯ

ಶಹೀನ್​​ ಬಾಗ್​​ಗೆ ಆಹಾರ ಪೂರೈಸಿ ಅಂದು CAA ವಿರುದ್ಧ ಹೋರಾಟ, ಇಂದು CAA ವಿಸ್ತರಿಸಿ ಅಂತ ಒತ್ತಾಯ

ನವದೆಹಲಿ: ನಾಗರಿಕ ತಿದ್ದುಪಡಿ ಮಸೂದೆ(ಸಿಎಎ) ತಿದ್ದುಪಡಿ ಮಾಡಿ ವಿಸ್ತರಿಸಿ ಎಂದು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಂಜಿಂದರ್. ಎಸ್. ಸಿರ್ಸಾ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹೀಗೆಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ ಅವರಿಗೆ ಮನವಿ ಮಾಡಿರುವ ಸಿರ್ಸಾ, ನಾಗರಿಕ ತಿದ್ದುಪಡಿ ಮಸೂದೆಯಲ್ಲಿ 2014ರ ಬದಲಿಗೆ 2021 ಎಂದು ತಿದ್ದುಪಡಿ ಮಾಡಿ ಅವಧಿ ವಿಸ್ತರಿಸಿ ಎಂದು ರಿಕ್ವೆಸ್ಟ್​ ಮಾಡಿದ್ದಾರೆ.

ತಾಲಿಬಾನ್​​ ಉಗ್ರರಿಂದ ಇಂದು ಅಫ್ಘಾನಿಸ್ತಾನದಲ್ಲಿ ಅರಾಜಕತೆ ಉಂಟಾಗಿದೆ. ಇದರ ಪರಿಣಾಮ ಅಫ್ಘಾನ್​​ ಮೂಲದ ಸಾಕಷ್ಟು ಮಂದಿ ಭಾರತಕ್ಕೆ ಬರುತ್ತಿದ್ದಾರೆ. ಇವರು ಭಾರತದಲ್ಲಿ ನೆಲೆಸಿ ನೆಮ್ಮದಿಯಾಗಿ ಜೀವನ ನಡೆಸಲು ಸಿಎಎಗೆ ತಿದ್ದುಪಡಿ ಅವಶ್ಯಕ ಎಂಬುದು ಸಿರ್ಸಾ ಉದ್ದೇಶ.

ಅಂದು ಸಿಎಎ ಶಾಹೀನ್​​ ಬಾಗ್​​​ನಲ್ಲಿ ಹೋರಾಟ ಮಾಡುತ್ತಿದ್ದ ಪ್ರತಿಭಟನಾಕಾರರಿಗೆ ಆಹಾರ ಪೂರೈಸಿ ಸಿಎಎ ವಿರುದ್ಧ ನಿಲವು ತಾಳಿದ್ದರು. ಈಗ ಅದೇ ಸಿಎಎ ತಿದ್ದುಪಡಿ ಮಾಡಿ ಅಫ್ಘಾನ್​​​​​​ನಿಂದ ಭಾರತಕ್ಕೆ ಬರುವವರಿಗೆ ಕಾನೂನಾತ್ಮಕವಾಗಿ ಬದುಕಲು ಅವಕಾಶ ಮಾಡಿಕೊಡಿ. ಇವರಿಗೂ ಭಾರತದ ಪೌರತ್ವ ನೀಡಿ ಸಹಾಯ ಮಾಡಬೇಕು ಎಂದು ಕೇಂದ್ರಕ್ಕೆ ವಿನಂತಿಸಿದ್ದಾರೆ.

ಇದನ್ನೂ ಓದಿ: ಅಘ್ಫಾನ್ ಬೆಳವಣಿಗೆ: 45 ನಿಮಿಷಗಳ ಕಾಲ ಮೋದಿ-ಪುಟಿನ್ ಮಹತ್ವದ ಮಾತು

Source: newsfirstlive.com Source link