ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ತೇಜಸ್ವಿ ಸೂರ್ಯ ಭಾಗಿ -ಸಂಸದರಿಗೆ ಜನ ಕೇಳಿದ ಪ್ರಶ್ನೆ ಏನು ಗೊತ್ತಾ?

ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ತೇಜಸ್ವಿ ಸೂರ್ಯ ಭಾಗಿ -ಸಂಸದರಿಗೆ ಜನ ಕೇಳಿದ ಪ್ರಶ್ನೆ ಏನು ಗೊತ್ತಾ?

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯಗೆ ಕೋವಿಡ್​ ನಿಮಯಗಳನ್ನ ಗಾಳಿಗೆ ತೂರಿರುವ ಆರೋಪ ಕೇಳಿಬಂದಿದೆ. ಮಾಸ್ಕ್​​ ಧರಿಸದೆ, ಸಾಮಾಜಿಕ ಅಂತರ ಪಾಲಿಸದೇ ಫಿಟ್​ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೊರೊನಾ ಮಾರ್ಗಸೂಚಿಗಳನ್ನ ಗಾಳಿಗೆ ತೂರಿದ್ದಾರೆ ಎನ್ನಲಾಗಿದೆ.

blank

ಇದನ್ನೂ ಓದಿ:ಅಘ್ಫಾನ್ ಬೆಳವಣಿಗೆ: 45 ನಿಮಿಷಗಳ ಕಾಲ ಮೋದಿ-ಪುಟಿನ್ ಮಹತ್ವದ ಮಾತು

ಇಂದು ಬೆಳಗ್ಗೆ ಜಯನಗರದ SSMRV ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದ ತೇಜಸ್ವಿ ಸೂರ್ಯ, ರಾಜ್ಯದಲ್ಲಿ ಮೂರನೇ ಅಲೆ‌ ಮುನ್ಸೂಚನೆ ಇದ್ದರೂ ಕೋವಿಡ್ ನಿಯಮ ಉಲ್ಲಂಘನೆ ಮಾಡಿ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲದೆ, ಯಾವುದೇ ಮಾಸ್ಕ್​​ ಧರಿಸದೆ, ಸಾಮಾಜಿಕ ಅಂತರ ಪಾಲಿಸದೆ ಫಿಟ್​ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗಿಯಾಗಿರೋದ್ರಿಂದ ಸಾರ್ವಜನಿಕರು ಜನಪ್ರತಿನಿಧಿಗಳಿಗೊಂದು ಕಾನೂನು? ಜನಸಾಮಾನ್ಯರಿಗೊಂದು ಕಾನೂನಾ? ಎಂದು ಜನ ಪ್ರಶ್ನಿಸಿದ್ದಾರೆ.

blank

ಇದನ್ನೂ ಓದಿ:  ಸಿಎಂ ಬೊಮ್ಮಾಯಿ ಸಂಧಾನ ಸಕ್ಸಸ್​.. ಆನಂದ್​ ಸಿಂಗ್​ ರಾಜೀನಾಮೆ ನಿರ್ಧಾರಕ್ಕೆ ತಾತ್ಕಾಲಿಕ ಬ್ರೇಕ್

ಒಂದೇ ಜಾಗದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ರೂ ಯಾರು ಕೂಡ ಮಾಸ್ಕ್​ ಧರಿಸಿಲ್ಲ, ಸಾಮಾಜಿಕ ಅಂತರ ಪಾಲಿಸಿಲ್ಲ, ಎಂಬ ಆರೋಪ ಕೇಳಿ ಬಂದಿದ್ದು, ರನ್ನಿಂಗ್​ ವೇಳೆಯೂ ಮಾಸ್ಕ್​​, ಸಾಮಾಜಿಕ ಅಂತರ ಇಲ್ಲವೆ ಇಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಈ ಹಿಂದೆ ನಗರದ ರಸ್ತೆಗಳಲ್ಲಿ ಮಾಸ್ಕ್​​ ಧರಿಸದೆ ಸೈಕಲ್​ ಸವಾರಿ ಮಾಡಿ ಟೀಕೆಗೆ ಗುರಿಯಾಗಿದ್ದ ತೇಜಸ್ವಿ ಸೂರ್ಯ ಮತ್ತೇ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದ್ದಾರೆ.

Source: newsfirstlive.com Source link