’ವೈದ್ಯರ ನಡೆ ಮನೆ ಬಾಗಿಲಿನ ಕಡೆ’ ಸರ್ವೇಗೆ ಹಿನ್ನಡೆ; ಟಾರ್ಗೆಟ್​ ರೀಚ್​ ಆಗಲು ವೈದ್ಯರ ಪರದಾಟ..?

’ವೈದ್ಯರ ನಡೆ ಮನೆ ಬಾಗಿಲಿನ ಕಡೆ’ ಸರ್ವೇಗೆ ಹಿನ್ನಡೆ; ಟಾರ್ಗೆಟ್​ ರೀಚ್​ ಆಗಲು ವೈದ್ಯರ ಪರದಾಟ..?

ಬೆಂಗಳೂರು: ಬಿಬಿಎಂಪಿ ಶುರು ಮಾಡಿದ್ದ ಡೋರ್ ಟು ಡೋರ್​ ಆರೋಗ್ಯ ಸರ್ವೇಗೆ ಹಿನ್ನಡೆಯಾಗಿದ್ದು, ಟಾರ್ಗೆಟ್ ರೀಚ್ ಮಾಡಲು ವೈದ್ಯಾಧಿಕಾರಿ ತಂಡಗಳು ಪರದಾಟ ನಡೆಸುತ್ತಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

blank

ಆರೋಗ್ಯ ಸಮೀಕ್ಷೆಯಲ್ಲಿ ಹತ್ತು ಹಲವು ಸಮಸ್ಯೆಗಳು ಎದುರಾಗುತ್ತಿದೆ. ಮೂರನೇ ಅಲೆಯನ್ನ ತಡೆಯುವುದಕ್ಕಾಗಿ ‘ವೈದ್ಯರ ನಡೆ ಮನೆ ಬಾಗಿಲಿನ ಕಡೆ’ ಅನ್ನೋ ಈ ಆರೋಗ್ಯ ಸಮೀಕ್ಷೆಯನ್ನ ಕಂದಾಯ ಸಚಿವ ಆರ್.ಅಶೋಕ್​ ಆಗಸ್ಟ್​​ 16ರಂದು ಚಾಲನೆ ನೀಡಿದ್ರು. ಮೊದಲ ಹಂತದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ವಾರ್ಡ್​ಗಳಂತೆ 54 ತಂಡಗಳಿಗೆ ಚಾಲನೆ ನೀಡಲಾಗಿತ್ತು.

ಒಂದು ತಂಡ ಪ್ರತಿನಿತ್ಯ 50 ಮನೆಗಳ ಸಮೀಕ್ಷೆ ನಡೆಸಬೇಕು. ಟಾರ್ಗೆಟ್​ನಂತೆ 50 ಮನೆಗಳ ಆರೋಗ್ಯ ಸಮೀಕ್ಷೆ ನಡೆಸೋದಕ್ಕೆ ಹಿನ್ನಡೆಯಾಗಿತ್ತು. ಎಷ್ಟೇ ಪ್ರಯತ್ನಪಟ್ಟರೂ ಶೇಕಡಾ 75ರಷ್ಟು ಮಾತ್ರ ಗುರಿ ತಲುಪಲಷ್ಟೇ ಸಾಧ್ಯವಾಗ್ತಿದೆ. ಪ್ರತಿ ಟೀಂನಿಂದ ನಿತ್ಯ 35 ರಿಂದ 40 ಮನೆಗಳ ಸಮೀಕ್ಷೆ ನಡೆಸಲಾಗ್ತಾಯಿದೆ ಅಂತ ತಂಡದ ಸದಸ್ಯರು ಹೇಳ್ತಾಯಿದ್ದಾರೆ.

ಪ್ರತಿದಿನ 8 ಝೋನ್​ಗಳಲ್ಲಿ 54 ವಾರ್ಡ್​​ಗಳಿಂದ 13,500 ಮನೆಗಳ ಆರೋಗ್ಯ ಸಮೀಕ್ಷೆ ನಡೆಸಲು ಪಾಲಿಕೆ ಟಾರ್ಗೆಟ್​ ಇಟ್ಟುಕೊಂಡಿತ್ತು. ಟಾರ್ಗೆಟ್​​ನಂತೆ ಒಂದು ಲಕ್ಷ ಮೇಲ್ಪಟ್ಟ ಮನೆಗಳ ಸರ್ವೇ ನಡೆಸಬೇಕಿತ್ತು. ಆದ್ರೆ 75 ರಿಂದ 80 ಸಾವಿರ ಮನೆಗಳಷ್ಟೇ ಆರೋಗ್ಯ ಸಮೀಕ್ಷೆ ನಡೆಸಲಾಗಿದೆ.

blank

ಆರೋಗ್ಯ ಸಮೀಕ್ಷೆಗೆ ಹಿನ್ನಡೆಯಾಗಲು ಕಾರಣಗಳೇನು..!?

  • ಕೆಲವು ಮನೆಗಳಲ್ಲಿ 5ಕ್ಕಿಂತ ಹೆಚ್ಚು ಸದಸ್ಯರಿದ್ದಾರೆ
  • ಪ್ರತಿಯೊಂದು ಸದಸ್ಯರ ಮಾಹಿತಿ ಕಲೆ ಹಾಕಲು ಸಮಯ ಆಗ್ತಿದೆ
  • ಕೆಲವು ಮನೆ ಬಳಿ ಹೋದಾಗ ಯಾರೂ ಇರಲ್ಲ
  • ಕೆಲವೊಂದು ಮನೆಯವರು ನಂತರ ಬನ್ನಿ ಅಂತಿದ್ದಾರೆ
  • ಕೆಲವೊಂದು ಮನೆಗಳಿಗೆ ಎರಡು ಮೂರು ಬಾರಿ ಹೋಗುವ ಸ್ಥಿತಿ
  • ಕೇಳಿದ ಮಾಹಿತಿ ಕೊಡಲು ಕೆಲವರು ಹಿಂದೇಟು

Source: newsfirstlive.com Source link