ಹೊಸ ಯುದ್ಧಕ್ಕೆ ಸಜ್ಜಾದ ಧ್ರುವ ಸರ್ಜಾ-ಪ್ರೇಮ್

ಬೆಂಗಳೂರು: ಅದ್ಧೂರಿ ಹಿಟ್ ಬಳಿಕ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತೆ ಚಿತ್ರೀಕರಣದಲ್ಲಿ ತೊಡಗಿದ್ದು, ಮಾರ್ಟಿನ್ ಬಳಿಕ ಇದೀಗ ಜೋಗಿ ಪ್ರೇಮ್ ಜೊತೆ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ. ಈ ಕುರಿತು ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಮತ್ತೊಂದು ಸಿನಿಮಾಗೆ ತಯಾರಾಗುತ್ತಿರುವುದಾಗಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ.

 

View this post on Instagram

 

A post shared by Dhruva Sarja (@dhruva_sarjaa)

ಧ್ರುವ ಸರ್ಜಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವೀಡಿಯೋ ಹಂಚಿಕೊಂಡಿದ್ದು, ಪ್ರೇಮ್ ಜೊತೆಗಿರುವ ಫೋಟೋ ಸೇರಿದಂತೆ ಸೆಟ್‍ನಲ್ಲಿ ತೆಗೆದ ಚಿತ್ರಗಳಿರುವ ವೀಡಿಯೋವನ್ನು ಪೋಸ್ಟ್ ಮಾಡಿ. ನಿರ್ದೇಶಕ ಪ್ರೇಮ್ ಜೊತೆ ಕೈ ಜೋಡಿಸುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಧ್ರುವ ಸರ್ಜಾ ಅವರ 6ನೇ ಚಿತ್ರ ಇದಾಗಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ನಮ್ಮನ್ನು ಬಿಟ್ಟುಬಿಡಿ ಎಂದು ಕಣ್ಣೀರಿಟ್ಟ ಸಂಜನಾ ತಾಯಿ

ಇತ್ತೀಚೆಗಷ್ಟೇ ಮಾರ್ಟೀನ್ ಚಿತ್ರಕ್ಕೆ ಸಹಿ ಹಾಕಿದ್ದ ಧ್ರುವ ಸರ್ಜಾ ಇದೀಗ ನಿರ್ದೇಶಕ ಪ್ರೇಮ್ ಜೊತೆ ಒಂದಾಗುತ್ತಿದ್ದಾರೆ. ಈ ಕುರಿತು ನಿದೇಶಕ ಪ್ರೇಮ್ ಸಹ ಟ್ವೀಟ್ ಮಾಡಿದ್ದು, ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ, ನಿಮ್ಮ ಪ್ರೀತಿ, ಪ್ರೋತ್ಸಾಹ, ಅಭಿಮಾನ, ಆಶೀರ್ವಾದ ಸದಾ ಹೀಗೆ ಇರಲಿ ಎಂದು ಬರೆದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ಹಾಗೂ ಪ್ರೇಮ್ ಜೋಡಿ ಒಂದಾಗುತ್ತಿದ್ದು, ಯಾವ ರೀತಿ ಮ್ಯಾಜಿಕ್ ಮಾಡಲಿದ್ದಾರೆ ಕಾದುನೋಡಬೇಕಿದೆ.

blank

ಹೊಸ ಸಿನಿಮಾ ಕುರಿತ ವೀಡಿಯೋ ನೋಡಿದ ಬಳಿಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದ್ದು, ಸಿನಿಮಾ ಯಾವ ರೀತಿಯಾಗಿ ಮೂಡಿ ಬರಲಿದೆ ಎಂಬ ಕಾಡುತ್ತಿದೆ. ಹೊಸ ಸಿನಿಮಾ ಮಾತ್ರವಲ್ಲದೆ ಧ್ರುವ ಸರ್ಜಾ ಮಾರ್ಟಿನ್ ಹಾಗೂ ದುಬಾರಿ ಚಿತ್ರದಗಳ ಶೂಟಿಂಗ್‍ಗಳಲ್ಲಿ ಸಹ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಸಖತ್ ಬ್ಯುಸಿಯಾಗಿದ್ದಾರೆ.

Source: publictv.in Source link