‘ಲವ್​​ ಯು ರಚ್ಚು’ ಫೈಟರ್ ಸಾವು ಕೇಸ್: ಪೊಲೀಸ್ ವಿಚಾರಣೆಗೆ ಬಂದ ರಚಿತಾ ರಾಮ್

‘ಲವ್​​ ಯು ರಚ್ಚು’ ಫೈಟರ್ ಸಾವು ಕೇಸ್: ಪೊಲೀಸ್ ವಿಚಾರಣೆಗೆ ಬಂದ ರಚಿತಾ ರಾಮ್

ಬೆಂಗಳೂರು: ಲವ್​ ಯು ರಚ್ಚು ಸಿನಿಮಾ ದುರಂತ ಪ್ರಕರಣ ಸಂಬಂಧ ನಟಿ ರಚಿತಾ ರಾಮ್ ಅವರು ಇಂದು ಸಂಜೆ ಬಿಡದಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.

ಆಗಸ್ಟ್​ 9 ರಂದು ‘ಲವ್​ ಯು ರಚ್ಚು’ ಚಿತ್ರೀಕರಣದ ವೇಳೆ ವಿದ್ಯುತ್ ಶಾಕ್ ತಗುಲಿ ಫೈಟರ್ ವಿವೇಕ್ ಸಾವನ್ನಪ್ಪಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಚಿತ್ರದ ನಾಯಕರಿ ಆಗಿರುವ ರಚಿತಾ ರಾಮ್ ಅವರಿಗೆ ಬಿಡದಿ ಪೊಲೀಸ್ ಠಾಣೆ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಅದರಂತೆ ಇಂದು ಸಂಜೆ 5.30 ರ ಸುಮಾರಿಗೆ ರಚಿತಾ ರಾಮ್ ಅವರು ಬಿಡದಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಇನ್ಸ್​ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ರಚಿತಾ ರಾಮ್ ಅವರಿಂದ ಹೇಳಿಕೆಯನ್ನ ಪಡೆದುಕೊಳ್ಳಲಾಗುತ್ತಿದೆ.

Source: newsfirstlive.com Source link