ಮಣಿರತ್ನಂ ಹೊಸ ಸಿನಿಮಾ ಪೊನ್ನಿನ್ ಸೆಲ್ವನ್; ಲೀಕ್​​ ಆಯ್ತು ಐಶ್ವರ್ಯ ರೈ ಫೋಟೋ

ಮಣಿರತ್ನಂ ಹೊಸ ಸಿನಿಮಾ ಪೊನ್ನಿನ್ ಸೆಲ್ವನ್; ಲೀಕ್​​ ಆಯ್ತು ಐಶ್ವರ್ಯ ರೈ ಫೋಟೋ

ಮಾಜಿ ವಿಶ್ವಸುಂದರಿ ,ಬಾಲಿವುಡ್​ ಬೆಡಗಿ ಐಶ್ವರ್ಯ ರೈ ಬಚ್ಚನ್​ ಸುಮಾರು 11 ವರ್ಷದ ಬಳಿಕ ಮತ್ತೆ ಕಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. 2010ರಲ್ಲಿ ತೆರೆಕಂಡ ಎಂಥಿರನ್​ ಐಶ್​ ನಟನೆಯ ಕೊನೆಯ ತಮಿಳು ಚಿತ್ರವಾಗಿತ್ತು. ಇದೀಗ ಐಶ್​ ಮತ್ತೆ ಕಾಲಿವುಡ್​ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಹೌದು ನಟಿ ಐಶ್ವರ್ಯ ರೈ , ನಿರ್ದೇಶಕ ಮಣಿರತ್ನಂ ಕಲ್ಪನೆಯಲ್ಲಿ ಮೂಡಿ ಬರುತ್ತಿರುವ ‘ಪೊನ್ನಿನ್ ಸೆಲ್ವನ್’ ಎಂಬ ಚಿತ್ರದಲ್ಲಿ ನಂದಿನಿ ಮತ್ತು ಮಂದಾಕಿನಿ ದೇವಿ ಎಂಬ ಹೆಸರಿನ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ‘ಪೊನ್ನಿನ್ ಸೆಲ್ವನ್’ ಚಿತ್ರದ ಶೂಟಿಂಗ್​ ವೇಳೆ ಐಶ್ವರ್ಯ ರೈ ನಿರ್ವಹಿಸುತ್ತಿರುವ ಪಾತ್ರದ ಫೋಟೋವೊಂದು ಲೀಕ್​ ಆಗಿದೆ.

ಸದ್ಯ ಈ ಪೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್​ ಅಗಿದೆ. ಈ ಫೋಟೋದಲ್ಲಿ ಐಶ್ವರ್ಯ ಕೆಂಪು ಸೀರೆ ಧರಿಸಿ ರಾಣಿಯ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಐಶ್​ರ ಈ ಹೊಸ ಲುಕ್​ ಕಂಡು ಫ್ಯಾನ್ಸ್​ ಫುಲ್​ ಫಿದಾ ಆಗಿದ್ದಾರೆ. ಇನ್ನು ಮುಂದಿನ ವರ್ಷ 2022 ಎಪ್ರೀಲ್​ ತಿಂಗಳಲ್ಲಿ ‘ಪೊನ್ನಿನ್ ಸೆಲ್ವನ್’ ಚಿತ್ರ ರಿಲೀಸ್​ ಅಗೋ ಸಾಧ್ಯತೆಗಳಿವೆ.

ಇದನ್ನೂ ಓದಿ: ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಜೊತೆ ಫಿಲ್ಮ್ ಮಾಡ್ತಾರಾ ಇಂದ್ರಜಿತ್​ ಲಂಕೇಶ್​..?

Source: newsfirstlive.com Source link