ಅಮರಿಂದರ್ ಸಿಂಗ್​ಗೆ ಮತ್ತೆ ಸಂಕಷ್ಟ: 30 ಶಾಸಕರು, 4 ಮಂತ್ರಿಗಳಿಂದ ರಾಜೀನಾಮೆಗೆ ಆಗ್ರಹ

ಅಮರಿಂದರ್ ಸಿಂಗ್​ಗೆ ಮತ್ತೆ ಸಂಕಷ್ಟ: 30 ಶಾಸಕರು, 4 ಮಂತ್ರಿಗಳಿಂದ ರಾಜೀನಾಮೆಗೆ ಆಗ್ರಹ

​​​ಚಂಡೀಗಡ: ಪಂಜಾಬ್​​​​ ಕಾಂಗ್ರೆಸ್​ನಲ್ಲಿ ಮತ್ತೆ ಭಿನ್ನಮತ ಸ್ಪೋಟಗೊಂಡಿದೆ. ಇತ್ತೀಚೆಗೆ ಪಂಜಾಬ್​​ ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ನವಜೋತ್​​ ಸಿಂಗ್​ ಸಿಧುಗೆ ನೀಡುವ ಮೂಲಕ ಬಂಡಾಯ ಶಮನ ಮಾಡಿದ್ದರು. ಈ ಬೆನ್ನಲ್ಲೀಗ ಮತ್ತೆ ಬಂಡಾಯ ಶುರುವಾಗಿದ್ದು, ಕೆಲವು ಕಾಂಗ್ರೆಸ್​​​ನ ಮಾಜಿ ಮತ್ತು ಹಾಲಿ ಶಾಸಕರು ಸಿಎಂ ಅಮರೀಂದರ್​​​ ಸಿಂಗ್​​​​​ ವಿರುದ್ಧ ಸಿಡಿದೆದಿದ್ದಾರೆ.

ಸಿಎಂ ಸ್ಥಾನದಿಂದ ಅಮರಿಂದರ್​​​ ಸಿಂಗ್​​​ರನ್ನು ಕೆಳಗಿಳಿಸುವಂತೆ ಕಾಂಗ್ರೆಸ್​​ನ ಹಾಲಿ 31 ಶಾಸಕರು ಮತ್ತು ಮಾಜಿ 7 ಮಂದಿ ಎಂಎಲ್​​ಎಗಳು ಹೈಕಮಾಂಡ್​​ ಮೇಲೆ ಒತ್ತಡ ಹಾಕಲು ಮುಂದಾಗಿದ್ದಾರೆ. ಸಚಿವ ರಾಜಿಂದರ್​​ ಸಿಂಗ್​​​ ಮನೆಯಲ್ಲಿ ಸೇರಿದ ಇಷ್ಟು ಕಾಂಗ್ರೆಸ್​ ನಾಯಕರು, ಅಮರೀಂದರ್​​ ಸಿಂಗ್​​ ಜಾಗಕ್ಕೆ ಸಿಧು ತಂದು ಕೂರಿಸುವಂತೆ ಹೈಕಮಾಂಡ್​ಗೆ ಮನವಿ ಮಾಡಲಿದ್ದಾರೆ.

ನಾಳೆಯೇ ಪಂಜಾಬ್​​ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪರ್ಗತ್ ಸಿಂಗ್ ಸೇರಿದಂತೆ ಆರು ಮಂದಿಯನ್ನು ಒಳಗೊಂಡ ಸದಸ್ಯರ ತಂಡವು ದೆಹಲಿಗೆ ಪ್ರಯಾಣ ಬೆಳಸಲಿದೆ. ಕಾಂಗ್ರೆಸ್​ ವರಿಷ್ಠೆ ಸೋನಿಯಾ ಗಾಂಧಿ ಭೇಟಿ ಮಾಡಿ ಅಮರಿಂದರ್​​​ ಸಿಂಗ್​​ ಬದಲಾವಣೆಗೆ ಒತ್ತಡ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಆನ್​​ಲೈನ್ ಮೂಲಕ ಬಸ್ ಪಾಸ್​ ವ್ಯವಸ್ಥೆ -ದರ ಏರಿಕೆ ಬಗ್ಗೆ ಸರ್ಕಾರ ಹೇಳಿದ್ದೇನು..?

ಅಮರಿಂದರ್​​​​​ ಸಿಂಗ್​​​​ ತಮ್ಮ ಕೆಟ್ಟ ಕಾರ್ಯವೈಖರಿಯಿಂದ ಎಲ್ಲಾ ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ. ನಾವು ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಗಮನಕ್ಕೆ ಈ ವಿಚಾರ ತಂದು ಅಮರಿಂದರ್​​​​​ ಸಿಂಗ್​​​​ ರಾಜೀನಾಮೆ ನೀಡುವಂತೆ ಮಾಡಿದ ಬಳಿಕಷ್ಟೇ ಪಂಜಾಬ್​​ಗೆ ವಾಪಸ್ಸಾಗಲಿದ್ದೇವೆ ಎಂದಿದ್ದಾರೆ ಪರ್ಗತ್​​ ಸಿಂಗ್.

Source: newsfirstlive.com Source link