ಕಾಬೂಲ್​​ನಿಂದ ಸಿಖ್ಖರ ಪವಿತ್ರ ಗ್ರಂಥ ಹೊತ್ತು ತಂದ ಪಂಜಾಬಿಗರು; ಕೈ ಮುಗಿದು ಸ್ವಾಗತಿಸಿದ ಕೇಂದ್ರ ಸಚಿವ

ಕಾಬೂಲ್​​ನಿಂದ ಸಿಖ್ಖರ ಪವಿತ್ರ ಗ್ರಂಥ ಹೊತ್ತು ತಂದ ಪಂಜಾಬಿಗರು; ಕೈ ಮುಗಿದು ಸ್ವಾಗತಿಸಿದ ಕೇಂದ್ರ ಸಚಿವ

ಅಫ್ಘಾನಿಸ್ತಾನದಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯ ಮುಂದುವರಿದಿದೆ. ಪ್ರಧಾನಿ ನರೇಂದ್ರ ಮೋದಿ ಆದೇಶದ ಮೇರೆಗೆ ಕಾಬೂಲ್​​​ನಿಂದ ಅಫ್ಘಾನ್​​ ಮೂಲದ ನೂರಾರು ಮಂದಿ ಹಿಂದೂ ಮತ್ತು ಸಿಖ್ಖರನ್ನು ಭಾರತ ವಾಯುಸೇನೆ ವಿಮಾನದಲ್ಲಿ ದೆಹಲಿಗೆ ಹೊತ್ತು ತಂದಿದೆ. ಈ ಮಧ್ಯೆ ಕೇಂದ್ರ ಸಚಿವರಾದ ಹರ್ದೀಪ್​​ ಸಿಂಗ್​​ ಪುರಿ ಮತ್ತು ವಿ.ಮುರಳೀಧರನ್ ಅವರು ಕಾಬೂಲ್​​ನಿಂದ ಭಾರತಕ್ಕೆ ಬಂದ​​​ ಸಿಖ್ಖರ ಪವಿತ್ರ ಗ್ರಂಥ ‘ಗುರು ಗ್ರಂಥ ಸಾಹೀಬ್’ಗೆ ಕೈಮುಗಿದು ಸ್ವಾಗತಿಸಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರುವ ಹರ್ದೀಪ್​​ ಸಿಂಗ್​​, ಕಾಬೂಲ್​​ನಿಂದ ಶ್ರೀ ಗುರು ಗ್ರಂಥ ಸಾಹೀಬರನ್ನು ಸ್ವಾಗತಿಸಲು ನಾನು ಬಹಳ ಅದೃಷ್ಟವಂತ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಮೂವರು ಸಿಖ್ಖರು ಪವಿತ್ರ ಗ್ರಂಥ ಶ್ರೀ ಗುರು ಗ್ರಂಥ ಸಾಹೀಬ್ ತಲೆ ಮೇಲೆ ಹೊತ್ತು ತರುತ್ತಿರುವ ವಿಡಿಯೋ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಮೋದಿ-ಪುಟಿನ್ ಡೀಪ್ ಡಿಸ್ಕಷನ್; ಯಾವೆಲ್ಲಾ ವಿಚಾರಗಳು ಪ್ರಸ್ತಾಪ ಆದ್ವು..?

Source: newsfirstlive.com Source link