ಅವಮಾನ ಎಷ್ಟು ಸಹಿಸಲಿ – ಕಾಂಗ್ರೆಸ್ ಸೇರುವ ಬಗ್ಗೆ ಜಿಟಿ ದೇವೇಗೌಡ ಸುಳಿವು

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಕಾಂಗ್ರೆಸ್ ಸೇರುವ ಬಗ್ಗೆ ಸುಳಿವು ನೀಡಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಿಟಿ ದೇವೇಗೌಡ, ಜೆಡಿಎಸ್ ನಲ್ಲಿ ಆಗಿರುವ ಅವಮಾನಗಳ ಬಗ್ಗೆ ಇತ್ತೀಚೆಗೆ ನನ್ನನ್ನು ಭೇಟಿ ಮಾಡಿದ ಹೆಚ್ ಡಿ ದೇವೇಗೌಡರ ಬಳಿಯೂ ಹೇಳಿಕೊಂಡಿದ್ದೆ. ಆಗ ಅವರು ನಿನ್ನನ್ನು ಮರಿದೇವೇಗೌಡ ಎಂದುಕೊಂಡಿದ್ದೇನೆ. ನೀನು ನನ್ನ ಜೊತೆಯೇ ಇರಬೇಕೆಂದು ಹೇಳಿದರು. ಅದಕ್ಕೆ ನಾನು ದಯವಿಟ್ಟು ಕ್ಷಮಿಸಿ ನನ್ನೊಂದಿಗೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮಾತನಾಡಿದ್ದಾರೆಂದು ದೇವೇಗೌಡರಿಗೆ ಹೇಳಿದ್ದೇನೆ ಎನ್ನುವ ಮೂಲಕ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಸುಳಿವು ನೀಡಿದರು.

ನಾವು ನಿಮ್ಮ ಜೊತೆ ಇದ್ದೇವೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಬೇಡಿ. ನಿಮ್ಮ ಜೊತೆ ಕಾಂಗ್ರೆಸ್ ಇದೆ ಎಂದು ಹೇಳಿದ್ದಾರೆ. ನಾನು ನನ್ನ ಮಗ ಇಬ್ಬರಿಗೂ ಟಿಕೆಟ್ ಕೇಳಿದ್ದೇನೆ. ಹೈಕಮಾಂಡ್ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ನೀವು ಯೋಚನೆ ಮಾಡಬೇಡಿ ಎಂದು ಭರವಸೆ ನೀಡಿದ್ದಾರೆ ಎಂದು ಜಿಟಿಡಿ ಹೇಳಿದರು. ಇದನ್ನೂ ಓದಿ: ಉದ್ಧವ್ ಠಾಕ್ರೆ ವಿರುದ್ಧ ಹೇಳಿಕೆ – ಕೇಂದ್ರ ಸಚಿವ ನಾರಾಯಣ ರಾಣೆ ಅರೆಸ್ಟ್

ಎಚ್.ಡಿ. ದೇವೇಗೌಡರಿಗೆ ಮಾತ್ರ ನನ್ನ ಮೇಲೆ ಪ್ರೀತಿ ಇತ್ತು. ಆದರೆ ಎಚ್.ಡಿ. ಕುಮಾರ ಸ್ವಾಮಿ, ಸಾರಾ ಮಹೇಶ್ ಇಬ್ಬರಿಗೂ ನಾನು ಪಾರ್ಟಿಯಲ್ಲಿ ಇರುವುದು ಬೇಕಿಲ್ಲ. ಸಾರಾ ಮಹೇಶ್ ಇನ್ನಾದರೂ ನಿಮ್ಮ ಮೋಸ, ವಂಚನೆ, ಸುಳ್ಳು ಬಿಟ್ಟು ರಾಜಕಾರಣ ಮಾಡಿ ಎಂದು ತಿವಿದರು.

blank

ವಯಸ್ಸಾಗುತ್ತಾ ಆಗುತ್ತಾ ಸಾರಾ ಮಹೇಶ್ ಪ್ರಬುದ್ಧರಾಗಿ ಸಣ್ಣತನ ಬಿಡಬೇಕು. ಕುಮಾರಸ್ವಾಮಿ ಇನ್ನಾದರೂ ಕ್ಷೇತ್ರಕ್ಕೆ ಸಿಮೀತರಾಗಿರುವ ಜಿಲ್ಲೆಗೆ ಸಿಮೀತರಾಗಿರುವ ಮುಖಂಡರ ನಂಬಿ ರಾಜಕಾರಣ ಮಾಡುವುದು ಬಿಡಬೇಕು. ನನಗೆ ಕುಮಾರಸ್ವಾಮಿ ಹಲವು ಬಾರಿ ಅವಮಾನ ಮಾಡಿದ್ದಾರೆ. ಇನ್ನೂ ಎಷ್ಟು ದಿನ ಅವಮಾನ ಸಹಿಸಲಿ ಎಂದು ಪ್ರಶ್ನಿಸಿದರು.

Source: publictv.in Source link