ಚಿನ್ನ ಗೆದ್ದರೂ ಬೀಗದ ನೀರಜ್ ಚೋಪ್ರಾ; ಕನ್ನಡಿಗ ಕಾಶಿನಾಥ್​​​​​ ನಾಯ್ಕ್ ಭೇಟಿಯಾಗಿ ಗುರುವಂದನೆ

ಚಿನ್ನ ಗೆದ್ದರೂ ಬೀಗದ ನೀರಜ್ ಚೋಪ್ರಾ; ಕನ್ನಡಿಗ ಕಾಶಿನಾಥ್​​​​​ ನಾಯ್ಕ್ ಭೇಟಿಯಾಗಿ ಗುರುವಂದನೆ

ಹತ್ತಿದ ಏಣಿಯನ್ನ ಮರೆಯದವ..ಕಲಿಸಿದ ಗುರುವನ್ನು ಕಡೆಗಣಿಸದವ ಆಗಸವನ್ನೇ ಮುಟ್ಟಬಲ್ಲ.. ಜನಮಾನಸದಲ್ಲಿಯೇ ಮಿನುಗುತಾರೆ ಆಗಬಲ್ಲ ಅಂತಾರೆ. ಅದಕ್ಕೆ ಉದಾಹರಣೆ ಅಂದ್ರೆ ಕ್ರಿಕೆಟ್ ದೇವರು ಸಚಿನ್​ ತೆಂಡುಲ್ಕರ್. ಭಾರತ ರತ್ನ ಪಡೆದಾಗಲೂ ಅವರು ತಮ್ಮ ಗುರು ರಮಾಕಾಂತ್ ಅಚ್ರೇಕರ್ ಪಾದಕ್ಕೆ ತಲೆ ಬಾಗಿದ್ದ ಗುರು ಭಕ್ತ ಅವರು. ಈಗ ಅದೇ ಹಾದಿಯಲ್ಲಿ ಮತ್ತೊಬ್ಬ ಸೂಪರ್ ಸ್ಟಾರ್ ಆಟಗಾರ ಸೇರ್ಪಡೆಯಾಗಿದ್ದಾರೆ. ಹೌದು.. ಬರೋಬ್ಬರಿ 112 ವರ್ಷಗಳ ಬಳಿಕ ಭಾರತಕ್ಕೆ ಅಥ್ಲೆಟಿಕ್ಸ್​​ನಲ್ಲಿ ಪದಕ ತಂದ ನೀರಜ ಚೋಪಾತ್ರ ತಮ್ಮ ಗುರು, ಕನ್ನಡಿಗ ಕಾಶಿನಾಥ್ ನಾಯ್ಕ್​ ಮನೆಗೆ ಹೋಗಿ ಆಶೀರ್ವಾದ ಪಡೆದಿದ್ದಾರೆ.

blank

2015ರಿಂದ ಸುಮಾರು ಮೂರು ವರ್ಷಗಳ ಕಾಲ ಪಟಿಯಾಲಾದಲ್ಲಿ ಜಾವಲಿನ್ ಎಸೆತದ ತರಬೇತಿ ನೀಡಿದ್ದ ಕಾಶಿನಾಥ್ ನಾಯ್ಕ್ ಅವರ ಮನೆಗೆ ಭೇಟಿ ನೀಡಿ ನೀರಜ್ ಚೋಪ್ರಾ ಅಭಿನಂದನೆ ಸಲ್ಲಿಸಿದ್ದಾರೆ. ಇಂದು ಪುಣಾದ ಕೋರೆಗಾಂವ್​ನಲ್ಲಿರುವ ಕಾಶಿನಾಥ್ ನಾಯ್ಕ್ ಅವರ ಮನೆಗೆ ನೀರಜ್ ಚೋಪ್ರಾ ಆಗಮಿಸಿದ್ದರು. ಈ ವೇಳೆ ಕಾಶಿನಾಥ್ ನಾಯ್ಕ್ ಅವರ ಪತ್ನಿ ಚೈತ್ರಾ ಅವರು ಆರತಿ ಬೆಳಗಿ ಮನೆಗೆ ಸ್ವಾಗತಿಸಿದ್ರು. ಸುಮಾರು ಒಂದು ಗಂಟೆಗಳ ಕಾಲ ಗುರುಶಿಷ್ಯರು ಓಲಿಂಪಿಕ್​ ಕ್ರೀಡಾಕೂಟದ ಬಗ್ಗೆ ಮಾತುಕತೆ ನಡೆಸಿದರು.

blank

ಅಷ್ಟೇ ಅಲ್ಲ ಕಾಶೀನಾಥ್ ಅವರ ಮಕ್ಕಳ ಜೊತೆ ಮಗುವಾಗಿ ನೀರಜ್ ಚೋಪ್ರಾ ಸಾಕಷ್ಟು ಸಮಯ ಕಾಲ ಕಳೆದರು. blank blank

 

Source: newsfirstlive.com Source link