ಹಿಂದೂ ಧರ್ಮವನ್ನು ಬೈದ ಎನ್​​​​.ಮಹೇಶ್​​ಗೆ​​​​ ಯಾಕೆ ಮಂತ್ರಿ ಸ್ಥಾನ?; ಬಿಜೆಪಿ ಶಾಸಕ ಪ್ರಶ್ನೆ

ಹಿಂದೂ ಧರ್ಮವನ್ನು ಬೈದ ಎನ್​​​​.ಮಹೇಶ್​​ಗೆ​​​​ ಯಾಕೆ ಮಂತ್ರಿ ಸ್ಥಾನ?; ಬಿಜೆಪಿ ಶಾಸಕ ಪ್ರಶ್ನೆ

ಚಿಕ್ಕಮಗಳೂರು: ಕೊಳ್ಳೇಗಾಲ ಶಾಸಕ ಎನ್​​​.ಮಹೇಶ್​​​ ನೆಲೆಗಾಗಿ ಬಿಜೆಪಿಗೆ ಬಂದಿದ್ದಾರೆ ಎಂದು ಮೂಡಿಗೆರೆ ಎಂಎಲ್​​​ಎ ಎಂ.ಪಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಎಂ.ಪಿ ಕುಮಾರಸ್ವಾಮಿ, ಎನ್​​​. ಮಹೇಶ್​​ರನ್ನು ಕಾಂಗ್ರೆಸ್​ ಮತ್ತು ಜೆಡಿಎಸ್​​ ಎರಡು ಪಕ್ಷಗಳು ಬಿಟ್ಟಾಕಿವೆ, ಬಿಎಸ್​​​ಪಿಯಂತೂ ಉಚ್ಛಾಟನೆ ಮಾಡಿದೆ ಎಂದರು.

ನಾನು ಸಚಿವರಿಗಿಂತಲೂ ಖುಷಿಯಾಗಿದ್ದೇನೆ. ಅವರಿಗಿಂತಲೂ ಹೆಚ್ಚು ಕೆಲಸ ಮಾಡಿದ್ದೇನೆ. ಎನ್​​.ಮಹೇಶ್​​ ಹಿಂದೂ ಧರ್ಮವನ್ನು ಹಿಗ್ಗಾಮುಗ್ಗಾ ಬೈದಿದ್ದರು. ಹಿಂದೂ ಧರ್ಮ ಮನು ಧರ್ಮ ಎಂದು ಜಾತಿ ಮೇಲೆ ಜಾತಿಗಳನ್ನು ಎತ್ತಿಕಟ್ಟಿದ್ದರು ಎಂದು ವ್ಯಂಗ್ಯವಾಡಿದರು.

ಜಾತಿ ಜನಾಂಗ ಒಡೆದು ಶಾಸಕರಾಗಿ ಬಂದಿದ್ದಾರೆ. ಬಿಜೆಪಿಯವರು ಸೇರಿಸಿಕೊಂಡಿದ್ದಾರೆ. ಹಿಂದೂ ಧರ್ಮ, ವೈದಿಕ ಧರ್ಮವನ್ನ ಬೈದಿದ್ದಕ್ಕೆ ಬಹುಮಾನವಾಗಿ ಮಂತ್ರಿ ಮಾಡುತ್ತಾರೆ ಎಂದೆನಿಲ್ಲ. ನಮ್ಮ ಪಕ್ಷದಲ್ಲಿ ಮಂತ್ರಿ ಮಾಡಲ್ಲ, ಪಕ್ಷಕ್ಕಾಗಿ ದುಡಿದವರು ಮೂವರು ಇದ್ದೇವೆ. ನಮ್ಮಲ್ಲೇ ಯಾರನ್ನಾದರೂ ಮಾಡಲಿ ಎಂದು ಕುಟುಕಿದರು.

ಇದನ್ನೂ ಓದಿ: ಬಿಜೆಪಿ ಸೇರುವಂತೆ ಒತ್ತಾಯ ಮಾಡ್ತಿದ್ದಾರೆ.. ಯೋಚನೆ ಮಾಡ್ತಿದ್ದೇನೆ -ಎನ್​​.ಮಹೇಶ್​

Source: newsfirstlive.com Source link