ಮೈಸೂರು ಫೈರಿಂಗ್ ಕೇಸ್​ -ದರೋಡೆಕೋರರ ಹುಡುಕಿ ಕೊಟ್ಟವ್ರಿಗೆ ₹5 ಲಕ್ಷ ಬಹುಮಾನ

ಮೈಸೂರು ಫೈರಿಂಗ್ ಕೇಸ್​ -ದರೋಡೆಕೋರರ ಹುಡುಕಿ ಕೊಟ್ಟವ್ರಿಗೆ ₹5 ಲಕ್ಷ ಬಹುಮಾನ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುಂಡಿನ ಸದ್ದು ಮೊಳಗಿದೆ. ಚಿನ್ನಾಭರಣ ದೋಚಲು ಬಂದ ದುಷ್ಕರ್ಮಿಗಳು ಫೈರಿಂಗ್ ನಡೆಸಿದ ಪರಿಣಾಮ ಅಂಗಡಿಗೆ ಚಿನ್ನ ಖರೀದಿಗೆ ಬಂದಿದ್ದ ಯುವಕ ಚಂದ್ರು ಸಾವನ್ನಪ್ಪಿದ್ದ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೇ ಆರೋಪಿಗಳನ್ನ ಪತ್ತೆ ಮಾಡಿ ಕೊಟ್ಟವರಿಗೆ ಐದು ಲಕ್ಷ ಬಹುಮಾನ ನೀಡಲಾಗುವುದು ಅಂತಾ ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಹೇಳಿದ್ದಾರೆ.

ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂಗಡಿಗೆ ನುಗ್ಗಿ ಚಿನ್ನಾಭರಣ ಕದಿಯಲು ಯತ್ನಿಸುತ್ತಿದ್ದಾಗ ಅಂಗಡಿ ಮಾಲೀಕ ಒಳಗೆ ನುಗ್ಗಿದ್ದಾರೆ. ಈ ವೇಳೆ ಮಾಲೀಕನಿಗೆ ದುಷ್ಕರ್ಮಿಗಳು ಥಳಿಸಿದ್ದಾರೆ. ಬಳಿಕ ಕೈ ಕಾಲು ಕಟ್ಟಿ ಚಿನ್ನಾಭರಣವನ್ನ ಲೂಟಿ ಮಾಡಲು ಯತ್ನಿಸಿದ್ದಾರೆ.

ಇದನ್ನೂ ಓದಿ: ದರೋಡೆಕೋರರಿಂದ ಚಿನ್ನದ ಅಂಗಡಿ ಮಾಲೀಕನತ್ತ ಫೈರಿಂಗ್; ರಸ್ತೆಯಲ್ಲಿ ಹೋಗ್ತಿದ್ದ ಯುವಕ ಬಲಿ

ಇದೇ ಸಂದರ್ಭದಲ್ಲಿ ಮಾಲೀಕರ ಸಂಬಂಧಿ ಅಡ್ಡ ಬಂದಿದ್ದಾರೆ. ಈ ವೇಳೆ ದುಷ್ಕರ್ಮಿಗಳಿಂದ ಫೈರಿಂಗ್ ನಡೆದಿದೆ. ದುಷ್ಕರ್ಮಿಗಳು ಹಾರಿಸಿದ ಫೈರಿಂಗ್ ದಡದಹಳ್ಳಿ ಚಂದ್ರುಗೆ ಗುಂಡು ತಗಲಿ ಸಾವನ್ನಪ್ಪಿದ್ದಾರೆ. ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಮೈಸೂರು ಫೈರಿಂಗ್ ಕೇಸ್: ‘ಎಷ್ಟೇ ಕಿರುಚಾಡಿದರೂ ಸಹಾಯಕ್ಕೆ ಯಾರೂ ಬರಲಿಲ್ಲ’ -ಮೃತನ ಸಹೋದರ ಕಣ್ಣೀರು

Source: newsfirstlive.com Source link