ಮತ್ತೊಂದು ವಿವಾದಕ್ಕೆ ಕಿಡಿ ಹಚ್ಚಿದ ಕಾಂಗ್ರೆಸ್​ -ಯತ್ನಾಳ್ ವಿರುದ್ಧ ಅವಹೇಳನಾಕಾರಿ ಪೋಸ್ಟರ್ ಅಂಟಿಸಿ ಆಕ್ರೋಶ

ಮತ್ತೊಂದು ವಿವಾದಕ್ಕೆ ಕಿಡಿ ಹಚ್ಚಿದ ಕಾಂಗ್ರೆಸ್​ -ಯತ್ನಾಳ್ ವಿರುದ್ಧ ಅವಹೇಳನಾಕಾರಿ ಪೋಸ್ಟರ್ ಅಂಟಿಸಿ ಆಕ್ರೋಶ

ಬೆಂಗಳೂರು: ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬೆಂಗಳೂರು ಕಾಂಗ್ರೆಸ್ ನಗರ ಘಟಕ ಇಂದು ಪ್ರತಿಭಟನೆ ನಡೆಸಿತು. ವಿಧಾನಸೌಧ ಬಳಿಯಿರುವ ಶಾಸಕರ ಭವನ ಕಚೇರಿಗೆ ಮುತ್ತಿಗೆ ಹಾಕಿದ ಕಾಂಗ್ರೆಸ್​ ಕಾರ್ಯಕರ್ತರು, ಯತ್ನಾಳ್ ಅವರ ಕಚೇರಿ ಭಾಗಿಲಿಗೆ ಅವಹೇಳನಾಕಾರಿ ಪೋಸ್ಟರ್ ಒಂದನ್ನ ಅಂಟಿಸಿ ಹೊಸ ವಿವಾದ ಸೃಷ್ಟಿಸಿದ್ದಾರೆ.   ​​

ಬಸನಗೌಡ ಪಾಟೀಲ್​​ರನ್ನ ಉಗ್ರ ಬಿನ್​ ಲಾಡನ್​​ ಪುತ್ರನೆಂದು ನಿಂದಿಸಿ ಪೊಸ್ಟರ್ ಅಂಟಿಸಿದ್ದಾರೆ. ಇದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಕೆಟ್ಟ ಪದಗಳಿಂದ ನಿಂದಿಸಿರುವ ಕಾಂಗ್ರೆಸ್​ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇನ್ನು ಅವಹೇಳನಾಕಾರಿ ಬಿತ್ತಿ ಪತ್ರಿಕೆ ಅಂಟಿಸುತ್ತಿರುವ ಪೋಸ್ಟರ್ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆದ ಫೋಟೋದಲ್ಲಿ ಕಾಂಗ್ರೆಸ್​ ಕಾರ್ಯಕರ್ತನೊಬ್ಬ ಬಾಗಿಲಿಗೆ ಪೋಸ್ಟರ್​ ಅಂಟಿಸುತ್ತಿರೋದನ್ನ ಕಾಣಬಹುದಾಗಿದೆ. ಅದರಲ್ಲಿ ಯತ್ನಾಳ್ ಅವರನ್ನ ಕೆಟ್ಟ ಪದಗಳಿಂದ ನಿಂದಿಸಲಾಗಿದೆ.

ಯತ್ನಾಳ್ ಗಡಿಪಾರಿಗೆ ಮನವಿ
ಇದಕ್ಕೂ ಮೊದಲು ಬಿಜೆಪಿ ನಾಯಕರ ವಿರುದ್ಧ ಸಿಎಂ ಗೃಹ ಕಚೇರಿ ಮುಂಭಾಗ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಧರಣಿ ಕೂತು ರಾಹುಲ್ ಗಾಂಧಿ ವಿರುದ್ಧ ಹೇಳಿಕೆಯನ್ನ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದರು. ನಂತರ ಯತ್ನಾಳ್ ಅವರನ್ನ ಗಡಿಪಾರು ಮಾಡುವಂತೆ ಸಿಎಂಗೆ ಮನವಿ ಸಲ್ಲಿಸಿದ್ದಾರೆ.

Source: newsfirstlive.com Source link