ಹತ್ತು ವರ್ಷದಿಂದ ಹುಟ್ಟೂರಿಗೆ ಬರಲಾಗದೇ ವನವಾಸ ರೀತಿಯ ಸಂಕಷ್ಟ ಅನುಭವಿಸಿದ್ದೆ -ಜನಾರ್ದನ ರೆಡ್ಡಿ 

ಹತ್ತು ವರ್ಷದಿಂದ ಹುಟ್ಟೂರಿಗೆ ಬರಲಾಗದೇ ವನವಾಸ ರೀತಿಯ ಸಂಕಷ್ಟ ಅನುಭವಿಸಿದ್ದೆ -ಜನಾರ್ದನ ರೆಡ್ಡಿ 

ರಾಯಚೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಇಂದು ಮಂತ್ರಾಲಯಕ್ಕೆ ಭೇಟಿ ನೀಡಿ ಗುರುರಾಯರ ದರ್ಶನ ಪಡೆದುಕೊಂಡರು.

blank

ರಾಯರ ಆರಾಧನೆಗೆ ಬಂದಿರೋದು ಪೂರ್ವ ಜನ್ಮದ ಪುಣ್ಯದ ಫಲ
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ರಾಯರ ಆರಾಧನೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲ. ಕಳೆದ ಹತ್ತು ವರ್ಷಗಳ ಕಾಲ ನನ್ನ ಹುಟ್ಟೂರಿಗೆ ಬರಲಾಗದೇ ವನವಾಸದ ರೀತಿಯ ಸಂಕಷ್ಟ ಅನುಭವಿಸಿದ್ದೆ. ಅದರಿಂದ ಪಾರು ಮಾಡಿದ್ದು ಶ್ರೀ ರಾಘವೇಂದ್ರಸ್ವಾಮಿಗಳ ಪವಾಡ.

ಇದನ್ನೂ ಓದಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿ ಭೇಟಿಗೆ ಸುಪ್ರೀಂಕೋರ್ಟ್ ಒಪ್ಪಿಗೆ

blank

ನಾನು ಮಂತ್ರಾಲಯದ ರಾಯರ ಪರಮ ಭಕ್ತ. ಯಾವಾಗಲೂ ಸಂಕಷ್ಟದ ಘಳಿಗೆಯಲ್ಲಿ ರಾಘವೇಂದ್ರ ಸ್ವಾಮಿಗಳನ್ನು ಪ್ರಾರ್ಥಿಸುತ್ತೇನೆ. ರಾಯರ ಅನುಗ್ರಹದಿಂದಲೇ ಇಂದು 350ನೇ ಆರಾಧನೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದೆ. ರಾಜಕೀಯ ವಿಚಾರದ ಬಗ್ಗೆ ಮಾತಾಡಲ್ಲ. ಸಕ್ರಿಯ ರಾಜಕೀಯಕ್ಕೆ‌ ಮರಳುವ ಬಗ್ಗೆಯೂ ಏನೂ ಹೇಳಲ್ಲ ಅಂತಾ ಹೇಳಿದರು.

ಇದನ್ನೂ ಓದಿ: ‘ಗಣಿದಣಿ’ ಜನಾರ್ದನ ರೆಡ್ಡಿ ಮೇಲೆ ‘ವರ’ಮಹಾಲಕ್ಷ್ಮೀ ಕೃಪೆ

blank

ಇದನ್ನೂ ಓದಿ: ಬಳ್ಳಾರಿಗೆ ವಾಪಸ್ಸಾದ ಜನಾರ್ದನ ರೆಡ್ಡಿ; ಕುಟುಂಬ ಸಮೇತರಾಗಿ ವರಮಹಾಲಕ್ಷ್ಮಿ ಪೂಜೆ

Source: newsfirstlive.com Source link