‘ಕಲಾವಿದನ ಸಾವು ನಿಜಕ್ಕೂ ದುರಂತ; ಆದರೆ ಅದು ಹೇಗೆ ನಡೆಯಿತು ಅನ್ನೋದ್ರ ಬಗ್ಗೆ ತಿಳಿದಿಲ್ಲ’

‘ಕಲಾವಿದನ ಸಾವು ನಿಜಕ್ಕೂ ದುರಂತ; ಆದರೆ ಅದು ಹೇಗೆ ನಡೆಯಿತು ಅನ್ನೋದ್ರ ಬಗ್ಗೆ ತಿಳಿದಿಲ್ಲ’

ರಾಮನಗರ: ‘ಲವ್‌ ಯು ರಚ್ಚು’ ಸಿನಿಮಾ ಚಿತ್ರೀಕರಣದ ವೇಳೆ ನಡೆದ ದುರಂತಕ್ಕೆ ಸಂಬಂಧ ಪಟ್ಟಂತೆ ಚಿತ್ರದ ನಾಯಕಿ ರಚಿತಾ ರಾಮ್‌ ಇಂದು ಸಂಜೆ ಬಿಡದಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಯನ್ನ ಎದುರಿಸಿದರು.

ಇದನ್ನೂ ಓದಿ:  ಫೈಟರ್​ ವಿವೇಕ್​ ಸಾವಿನ ದುರ್ಘಟನೆ ನಡೆದಾಗ ನಾನು ಸ್ಪಾಟ್​​ನಲ್ಲಿ ಇರಲಿಲ್ಲ -ರಚಿತಾ ರಾಮ್

blank

ರಾಮನಗರ ಡಿವೈಎಸ್ಪಿ ಮೋಹನ್‌ ಕುಮಾರ್ ಸುಮಾರು ಅರ್ಧ ಗಂಟೆಗಳ ಕಾಲ ನಟಿಯನ್ನ ವಿಚಾರಣೆ ನಡೆಸಿದರು. ವಿಚಾರಣೆ ಬಳಿಕ ಮಾತನಾಡಿದ ಅವರು.. ‘ಘಟನೆ ನಡೆದ ದಿನ ನಾನು ಸ್ಥಳದಲ್ಲಿ ಇರಲಿಲ್ಲ. ಈ ಕುರಿತು ಪೊಲೀಸರಿಗೆ ವಿವರಣೆ ನೀಡಿದ್ದೇನೆ. ಕಲಾವಿದನ ಸಾವು ನಿಜಕ್ಕೂ ದುರಂತ. ಆದರೆ ಅದು ಹೇಗೆ ನಡೆಯಿತು ಎಂಬ ಬಗ್ಗೆ ನನಗೆ ತಿಳಿದಿಲ್ಲ. ಫೈಟಿಂಗ್​ ಸೀನ್​ನಲ್ಲಿ ನಟಿಯರಿಗೆ ಹೆಚ್ಚು ಕೆಲಸ ಇರುವುದಿಲ್ಲ. ಹೀಗಾಗಿ ನಾನು ಶೆಡ್ಯೂಲ್​ನಲ್ಲಿ ಇರಲಿಲ್ಲ. ಅಲ್ಲದೇ ಅಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

blank

ಇದನ್ನೂ ಓದಿ: ರಚಿತಾ ರಾಮ್​ಗೆ ತರಾಟೆ ತೆಗೆದುಕೊಂಡಿದ್ಯಾಕೆ ಅಭಿಮಾನಿಗಳು..?!

ಘಟನೆ ನಡೆದ ಸಂದರ್ಭ ಸ್ಥಳದಲ್ಲೇ ನಟ ಅಜಯ್‌ ರಾವ್‌ ಇದ್ದರು. ಯಾಕೆ ಅವ್ರು ಫೈಟರ್​ ನೆರವಿಗೆ ಧಾವಿಸಲಿಲ್ಲ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಅಜಯ್‌ ಅವರನ್ನೇ ಕೇಳಬೇಕು. ಚಿತ್ರೀಕರಣ ಸಂದರ್ಭ ಇಂತಹ ಘಟನೆಗಳಾದಾಗ ಕೂಡಲೇ ನೆರವಾಗುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

blank

ಇದನ್ನೂ ಓದಿ: ‘ಲವ್​​ ಯು ರಚ್ಚು’ ಫೈಟರ್ ಸಾವು ಕೇಸ್: ಪೊಲೀಸ್ ವಿಚಾರಣೆಗೆ ಬಂದ ರಚಿತಾ ರಾಮ್

Source: newsfirstlive.com Source link