ಗುರುವಿನ ಆರೋಗ್ಯ ವಿಚಾರಿಸಿದ ಶಿಷ್ಯ ಜಮೀರ್ ಅಹಮ್ಮದ್

ಗುರುವಿನ ಆರೋಗ್ಯ ವಿಚಾರಿಸಿದ ಶಿಷ್ಯ ಜಮೀರ್ ಅಹಮ್ಮದ್

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನ ಆಪ್ತ ಜಮೀರ್​ ಅಹ್ಮದ್​ ಖಾನ್​ ಭೇಟಿಯಾಗಿ  ಆರೋಗ್ಯ ವಿಚಾರಿಸಿದರು. ಸಿದ್ದರಾಮಯ್ಯ ಅವರು ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

blank

ಪಕ್ಷದ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಕೊಂಚ ಅನಾರೋಗ್ಯದಿಂದ ಬಳಲಿದ್ರು. ಹೀಗಾಗಿ ಅವ್ರು ಆರೋಗ್ಯ ಚೇತರಿಕೆ ಸಲುವಾಗಿ ಹಾಗೂ ಮಾನಸಿಕ ನೆಮ್ಮದಿಯ ಉದ್ದೇಶದಿಂದ ಸಿದ್ದರಾಮಯ್ಯ ಸತತ ಹತ್ತು ದಿನಗಳ ಕಾಲ‌ ವಿಶ್ರಾಂತಿಗೆ ತೆರಳಿದ್ದಾರೆ.

ಹೀಗಾಗಿ ಅವರ ಆರೋಗ್ಯದ ಬಗ್ಗೆ ಮಾತುಕತೆ ನಡೆಸಲು ಇಂದು ಮಾಜಿ ಸಚಿವ ಜಮೀರ್​ ಅಹಮ್ಮದ್​ ಖಾನ್​ ಭೇಟಿ ಮಾಡಿದ್ದರು. ಅಷ್ಟೇ ಅಲ್ಲದೇ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ನಾಯಕರು ಚರ್ಚಿಸಿದ್ದಾರೆ.

blank

Source: newsfirstlive.com Source link