ಇಂದು ಬೊಮ್ಮಾಯಿ ದೆಹಲಿ ಪ್ರವಾಸ.. ಅಸಮಾಧಾನ ಶಮನಕ್ಕೆ ‘ಹೊಸ ತಂತ್ರ’ ತರ್ತಾರ ಸಿಎಂ..?

ಇಂದು ಬೊಮ್ಮಾಯಿ ದೆಹಲಿ ಪ್ರವಾಸ.. ಅಸಮಾಧಾನ ಶಮನಕ್ಕೆ ‘ಹೊಸ ತಂತ್ರ’ ತರ್ತಾರ ಸಿಎಂ..?

ಬೆಂಗಳೂರು: ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದು, ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿದೆ.

ಮಧ್ಯಾಹ್ನ 1:20 ರ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೊಮ್ಮಾಯಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಂಜೆ ವೇಳೆಗೆ ಕೇಂದ್ರದ ಸಚಿವರನ್ನು ಭೇಟಿಯಾಗಿ ರಾತ್ರಿ ದೆಹಲಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಇದನ್ನೂ ಓದಿ: ‘ನಿಮ್ಮನ ಮದ್ವೆ ಆಗ್ಬೇಕು’ ಎಂದ ಫ್ಯಾನ್​ಗೆ ‘ಆಯ್ತು ಒಮ್ಮೆ ಗಂಡನಿಗೆ ಕೇಳ್ತೀನಿ’ ಎಂದ ಖುಷ್ಬೂ

ನಾಳೆ ಬೆಳಗ್ಗೆ 8 ಘಂಟೆಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮತ್ತೆ ಕೇಂದ್ರದ ಸಚಿವರನ್ನು ಭೇಟಿಯಾಗಲಿದ್ದಾರೆ. ಅದಾದ ಬಳಿಕ ಅಂದ್ರೆ ಸಂಜೆ ಸಂಜೆ 4:05 ರ ಸುಮಾರಿಗೆ ದೆಹಲಿಯಿಂದ ಬೆಂಗಳೂರಿನತ್ತ ಹೊರಡಲಿದ್ದಾರೆ.

ಬೊಮ್ಮಾಯಿ ಅವರ ಇವತ್ತಿನ ದೆಹಲಿ ಪ್ರವಾಸ ಸಾಕಷ್ಟು ನಿರೀಕ್ಷೆಯನ್ನ ಹುಟ್ಟುಹಾಕಿದೆ. ರಾಜ್ಯದ ವಿವಿಧ ಯೋಜನೆಗಳಿಗೆ ಕೇಂದ್ರದ ಒಪ್ಪಿಗೆ, ರಾಜ್ಯಕ್ಕೆ ಬರಬೇಕಾಗಿರುವ ಕೇಂದ್ರದ ತೆರಿಗೆ ಹಣದ ಕುರಿತ ಚರ್ಚೆ ಒಂದ್ಕಡೆಯಾದ್ರೆ, ಮತ್ತೊಂದು ಕಡೆ ರಾಜಕೀಯವಾಗಿ ಸಿಎಂ ಬೊಮ್ಮಾಯಿಗೆ ದೊಡ್ಡ ಚಾಲೆಂಜ್ ಇದೆ.

ಇದನ್ನೂ ಓದಿ: ‘ನನ್ನನ್ನ ಕ್ಷಮಿಸಿ ಅಪ್ಪಾಜಿ.. ನಾನು ಕಾಂಗ್ರೆಸ್ ಸೇರುತ್ತಿದ್ದೇನೆ’ ದೇವೇಗೌಡರಿಗೆ ಜಿಟಿಡಿ ಮನವಿ

ಆನಂದ್ ಸಿಂಗ್ ಸೇರಿದಂತೆ ಹಲವರು ಖಾತೆ ಬಗ್ಗೆ ಕ್ಯಾತೆ ತೆಗೆದಿದ್ದಾರೆ. ಅದರ ಮುಂದುವರಿದ ಭಾಗವಾಗಿ ಆನಂದ್ ಸಿಂಗ್ ಅವರು ರಾಜೀನಾಮೆ ವಿಚಾರವನ್ನ ಸಿಎಂ ಮುಂದೆ ಪದೇ ಪದೇ ಪ್ರಸ್ತಾಪ ಮಾಡುತ್ತಿದ್ದಾರೆ. ಇದರ ಹೊರತಾಗಿ ಇನ್ನೂ ಕೆಲವರು ತಮಗೆ ಸಚಿವ ಸ್ಥಾನವನ್ನ ನೀಡಿಲ್ಲ ಅಂತಾ ಸಿಎಂ ಮೇಲೆ ಮುನಿಸಿಕೊಂಡಿದ್ದಾರೆ. ಹೀಗಾಗಿ ಬೊಮ್ಮಾಯಿ ಅವರ ಇಂದಿನ ಕೇಂದ್ರದ ನಾಯಕ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಅಸಮಾಧಾನಕ್ಕೆ ಶಮನಕ್ಕೆ ಹೈಕಮಾಂಡ್ ಸಿಎಂ ಬಳಿ ಯಾವ ಅಸ್ತ್ರವನ್ನ ನೀಡುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.

ಇದನ್ನೂ ಓದಿ: ಶುರುವಾಗಲಿದೆ ಸರಿಗಮಪ ಚಾಂಪಿಯನ್​ಶಿಪ್; ಈಗ ರಾಜೇಶ್​ ಕೃಷ್ಣನ್​ ಸ್ಥಾನ ತುಂಬೋರು ಯಾರು?​

ಇದನ್ನೂ ಓದಿ: ಚಿನ್ನ ಗೆದ್ದರೂ ಬೀಗದ ನೀರಜ್ ಚೋಪ್ರಾ; ಕನ್ನಡಿಗ ಕಾಶಿನಾಥ್​​​​​ ನಾಯ್ಕ್ ಭೇಟಿಯಾಗಿ ಗುರುವಂದನೆ

ಇದನ್ನೂ ಓದಿ: 20 ವರ್ಷಗಳ ನಂತರ ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರು ಅರೆಸ್ಟ್..! ಬಿಜೆಪಿ ತೀವ್ರ ಖಂಡನೆ

ಇದನ್ನೂ ಓದಿ: ‘ಶಾಲಾ ಮಕ್ಕಳ ಸ್ವೇಟರ್​​​ ಹೆಸರಲ್ಲಿ ₹1.7 ಕೋಟಿ ಹಣ ಗುಳುಂ’ ನಟ ಕೋಮಲ್ ವಿರುದ್ಧ ಗಂಭೀರ ಆರೋಪ

ಇದನ್ನೂ ಓದಿ: ಮೆಗಾಸ್ಟಾರ್​ ಬರ್ತ್​​​ಡೇ ಸಂಭ್ರಮದಲ್ಲಿ ಒಂದಾಯ್ತು ಕೊನಿಡೆಲಾ ಕುಟುಂಬ!

Source: newsfirstlive.com Source link