ಅಫ್ಘಾನಿಸ್ತಾನ್ ಚಾಲೆಂಜ್; ಮೋದಿ-ಪುಟಿನ್ ಪಂಚ ಸೂತ್ರಗಳ ಪಂಚ್..!

ಅಫ್ಘಾನಿಸ್ತಾನ್ ಚಾಲೆಂಜ್; ಮೋದಿ-ಪುಟಿನ್ ಪಂಚ ಸೂತ್ರಗಳ ಪಂಚ್..!

ನವದೆಹಲಿ: ಅಫ್ಘಾನಿಸ್ತಾನ ಈಗ ತಾಲಿಬಾನ್ ನಿಯಂತ್ರಣದಲ್ಲಿದೆ. ಅಲ್ಲಿ ಉಂಟಾಗಿರುವ ಬಿಕ್ಕಟ್ಟು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರಿದ್ದು, ಹೀಗಾಗಿ ಎಲ್ಲಾ ದೇಶಗಳು ತಮ್ಮ ನಾಗರಿಕರನ್ನು ಅಲ್ಲಿಂದ ಸುರಕ್ಷಿತವಾಗಿ ಕರೆದುಕೊಂಡು ಬರುವ ಪ್ರಯತ್ನ ಮಾಡುತ್ತಿವೆ. ಏತನ್ಮಧ್ಯೆ, ಮಹತ್ವದ ಬೆಳವಣಿಗೆ ಒಂದರಲ್ಲಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಇಬ್ಬರು ರಾಷ್ಟ್ರ ನಾಯಕರು ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಗಂಭೀರವಾಗಿ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: ‘ನಿಮ್ಮನ ಮದ್ವೆ ಆಗ್ಬೇಕು’ ಎಂದ ಫ್ಯಾನ್​ಗೆ ‘ಆಯ್ತು ಒಮ್ಮೆ ಗಂಡನಿಗೆ ಕೇಳ್ತೀನಿ’ ಎಂದ ಖುಷ್ಬೂ

45 ನಿಮಿಷಗಳ ಕಾಲ ನಡೆದ ಮಾತುಕತೆಯಲ್ಲಿ ಉಭಯ ನಾಯಕರು ಅಫ್ಘಾನ್ ವಿಚಾರದಲ್ಲಿ ಪಂಚ ಸೂತ್ರಗಳನ್ನ ಮುಂದಿಟ್ಟು ಮಾತುಕತೆ ನಡೆಸಿದ್ದಾರೆ. ಅಫ್ಘಾನ್ ಬಿಕ್ಕಟ್ಟು ಎದುರಿಸುವ ವೇಳೆ ಎರಡೂ ದೇಶಗಳು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುವುದು, ಜೊತೆಗೆ ರಾಜತಾಂತ್ರಿಕ ಸಹಾಯ, ಯೋಜನೆ ರೂಪಿಸುವಿಕೆ ಹಾಗೂ ಯಾವುದೇ ಒಂದು ದೃಢ ಕ್ರಮತೆಗೆದುಕೊಳ್ಳುವಾಗ ಪರಸ್ಪರ ವಿಶ್ವಾಸದಿಂದ ಇರುವುದು ಹಾಗೂ ಭವಿಷ್ಯ ಚಾಲೆಂಜ್​ಗೆ ಸಿದ್ಧತೆ ನಡೆಸುವ ಬಗ್ಗೆ ನಿರ್ಧಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ‘ನನ್ನನ್ನ ಕ್ಷಮಿಸಿ ಅಪ್ಪಾಜಿ.. ನಾನು ಕಾಂಗ್ರೆಸ್ ಸೇರುತ್ತಿದ್ದೇನೆ’ ದೇವೇಗೌಡರಿಗೆ ಜಿಟಿಡಿ ಮನವಿ

ಅಲ್ಲದೇ ಅಫ್ಘಾನಿಸ್ತಾನ ಸಮಸ್ಯೆ ಹಿನ್ನೆಲೆಯಲ್ಲಿ ಭಾರತ ಮತ್ತು ರಷ್ಯಾದ ಮೇಲೆ ಗಂಭೀರವಾದ ಪರಿಣಾಮ ಬೀರದ ರೀತಿಯಲ್ಲಿ ಹಾಗೂ ಮುಂಬರುವ ಸಂದಿಗ್ಧತೆಗಳನ್ನ ಎದುರಿಸಲು ಒಂದು ದೃಢ ನಿರ್ಧಾರಕ್ಕೆ ಬರಲು ಇಬ್ಬರು ನಾಯಕರುಗಳು ಒಪ್ಪಿಗೆ ಸೂಚಿಸಿದ್ದಾರೆ. ಅದೇನಂದರೆ, ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಸಮಸ್ಯೆಗಳ ಇತ್ಯರ್ಥಕ್ಕಾಗಿಯೇ ಎರಡೂ ದೇಶಗಳನ ನಡುವಿನ ದ್ವಿಪಕ್ಷೀಯ ಶಾಶ್ವತ ರಾಜತಾಂತ್ರಿಕ ವ್ಯವಸ್ಥೆ ಮಾಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಶುರುವಾಗಲಿದೆ ಸರಿಗಮಪ ಚಾಂಪಿಯನ್​ಶಿಪ್; ಈಗ ರಾಜೇಶ್​ ಕೃಷ್ಣನ್​ ಸ್ಥಾನ ತುಂಬೋರು ಯಾರು?​

ಅದರ ಪ್ರಕಾರ, ಈ ಶಾಶ್ವತ ರಾಜತಾಂತ್ರಿಕತೆಯ ವ್ಯವಸ್ಥೆಯಲ್ಲಿ ಉಭಯ ದೇಶಗಳ ಅಧಿಕಾರಿಗಳು ಇರುತ್ತಾರೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ.. ಅಫ್ಘಾನಿಸ್ತಾನದ ಇತ್ತೀಚೆಗಿನ ಬೆಳವಣಿಗೆ ಬಗ್ಗೆ ಸ್ನೇಹಿತ ಹಾಗೂ ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಹತ್ವದ ವಿಚಾರಗಳನ್ನ ಶೇರ್ ಮಾಡಿಕೊಂಡೆ. ಜೊತೆಗೆ ದ್ವಿಪಕ್ಷೀಯ ಅಜೆಂಡಾಗಳ ಬಗ್ಗೆಯೂ ಮಾತುಕತೆ ನಡೆಸಿದ್ವಿ. ಅಲ್ಲದೇ ಕೊರೊನಾ ಎದುರಿಸಲು ಎರಡೂ ರಾಷ್ಟ್ರಗಳ ಸಹಕಾರದ ಬಗ್ಗೆಯೂ ಮಾತುಕತೆ ನಡೆದಿದೆ. ಮುಂದಿನ ದಿನಗಳಲ್ಲಿ ಮಹತ್ವದ ವಿಚಾರಗಳ ಬಗ್ಗೆ ಸಮಾಲೋಚನೆ ಮಾಡಲು ನಾವಿಬ್ಬರು ಒಪ್ಪಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಚಿನ್ನ ಗೆದ್ದರೂ ಬೀಗದ ನೀರಜ್ ಚೋಪ್ರಾ; ಕನ್ನಡಿಗ ಕಾಶಿನಾಥ್​​​​​ ನಾಯ್ಕ್ ಭೇಟಿಯಾಗಿ ಗುರುವಂದನೆ

ಇದನ್ನೂ ಓದಿ: 20 ವರ್ಷಗಳ ನಂತರ ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರು ಅರೆಸ್ಟ್..! ಬಿಜೆಪಿ ತೀವ್ರ ಖಂಡನೆ

ಇದನ್ನೂ ಓದಿ: ‘ಶಾಲಾ ಮಕ್ಕಳ ಸ್ವೇಟರ್​​​ ಹೆಸರಲ್ಲಿ ₹1.7 ಕೋಟಿ ಹಣ ಗುಳುಂ’ ನಟ ಕೋಮಲ್ ವಿರುದ್ಧ ಗಂಭೀರ ಆರೋಪ

ಇದನ್ನೂ ಓದಿ: ಮೆಗಾಸ್ಟಾರ್​ ಬರ್ತ್​​​ಡೇ ಸಂಭ್ರಮದಲ್ಲಿ ಒಂದಾಯ್ತು ಕೊನಿಡೆಲಾ ಕುಟುಂಬ!

Source: newsfirstlive.com Source link