ಸಂಜನಾ, ರಾಗಿಣಿ ಮತ್ತೆ ಜೈಲು ಸೇರ್ತಾರಾ? ಈ ಗ್ಯಾಂಗ್‌ನಿಂದ ವಶಪಡಿಸಿಕೊಂಡ ಡ್ರಗ್ಸ್‌ ಮೌಲ್ಯ ಎಷ್ಟು ಗೊತ್ತಾ?

ಸಂಜನಾ, ರಾಗಿಣಿ ಮತ್ತೆ ಜೈಲು ಸೇರ್ತಾರಾ? ಈ ಗ್ಯಾಂಗ್‌ನಿಂದ ವಶಪಡಿಸಿಕೊಂಡ ಡ್ರಗ್ಸ್‌ ಮೌಲ್ಯ ಎಷ್ಟು ಗೊತ್ತಾ?

ಇಡೀ ಸ್ಯಾಂಡಲ್‌ವುಡ್‌ ಅನ್ನೇ ತಲ್ಲಣಗೊಳಿಸಿದ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಈ ಚಾರ್ಜ್‌ಶೀಟ್‌ನಲ್ಲಿ ನಟಿಯರಾದ ಸಂಜನಾ, ರಾಗಿಣಿ ಸೇರಿದಂತೆ ಆರೋಪಿಗಳ ಡ್ರಗ್ಸ್‌ ಪ್ರಕರಣ ಬಟಾಬಯಲಾಗಿದೆ. ಆದ್ರೆ, ಮುಂದೆ ಈ ಪ್ರಕರಣ ಮುಂದೆ ಏನಾಗುತ್ತೆ? ಬೆಂಗಳೂರು ಪೊಲೀಸರು ವಶಪಡಿಸಿಕೊಂಡ ಒಟ್ಟು ಡ್ರಗ್ಸ್‌ ಮೌಲ್ಯ ಎಷ್ಟು?

ಡ್ರಗ್ಸ್‌ ಪ್ರಕರಣದ ಸೂಚನೆ ಸಿಗುತ್ತಿದ್ದಂತೆ ಬೆಂಗಳೂರು ಸಿಸಿಐ ಪೊಲೀಸರು ಪೆಡ್ಲರ್‌ ಮನೆಗಳ ಮೇಲೆ ದಾಳಿ ನಡೆಸುತ್ತಾರೆ. ಈ ದಾಳಿಯಲ್ಲಿ ಸ್ಯಾಂಡಲ್‌ವುಡ್‌ ನಟಿಯರಾದ ಸಂಜನಾ, ರಾಗಿಣಿ ಮತ್ತು ದೊಡ್ಡ ದೊಡ್ಡ ಡ್ರಗ್‌ ಪೆಡ್ಲರ್‌ಗಳು ಸಿಕ್ಕಿ ಬೀಳುತ್ತಾರೆ. ದಾಳಿಯ ವೇಳೆ ಪೊಲೀಸರು ಕೆಲವೊಂದು ದಾಖಲೆ ವಶಪಡಿಸಿಕೊಳ್ಳುತ್ತಾರೆ. ಆರೋಪಿಗಳನ್ನು ಬಂಧಿಸಿ ಅವರಿಂದ ಕೂದಲಿನ ಸ್ಯಾಂಪಲ್‌ ಪಡೆದು ಹೈದರಾಬಾದ್‌ನ CSFL ಗೆ ಕಳುಹಿಸಲಾಗಿರುತ್ತದೆ. ಬರೋಬ್ಬರಿ 10 ತಿಂಗಳ ಬಳಿಕ ಎಲ್ಲಾ ಆರೋಪಿಗಳ ವರದಿ ಪೊಲೀಸರ ಕೈಸೇರಿದೆ. ಅದರಲ್ಲಿ ಎಲ್ಲರೂ ಡ್ರಗ್ಸ್‌ ಸೇವನೆ ಮಾಡಿರುವುದು ಕನ್ಫರ್ಮ್‌ ಆಗಿದೆ. ಇದನ್ನೇ ಸಿಸಿಬಿ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದಾರೆ.

ಸಂಜನಾ, ರಾಗಿಣಿ ಮತ್ತೆ ಜೈಲು ಸೇರ್ತಾರಾ?

ಸ್ಯಾಂಡಲ್‌ವುಡ್‌ ನಟಿಯರಾದ ಸಂಜನಾ ಮತ್ತು ರಾಗಿಣಿ ಡ್ರಗ್ಸ್‌ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿ ಬೇಲ್‌ ಮೇಲೆ ಹೊರಬಂದಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ತಮ್ಮನ್ನು ಬಲಿಪಶು ಮಾಡಲಾಗಿದೆ. ತಾವು ತಪ್ಪು ಮಾಡಿಲ್ಲ ಅಂತ ಹೇಳಿಕೊಂಡಿದ್ದಾರೆ, ಕಣ್ಣೀರು ಸುರಿಸಿದ್ದಾರೆ. ಆದ್ರೆ, ಈಗ ಕೂದಲಿನ ಸ್ಯಾಂಪಲ್‌ ಪರೀಕ್ಷೆಯಿಂದ ಡ್ರಗ್ಸ್‌ ಸೇವಿಸಿರೋದು ಕನ್ಫರ್ಮ್‌ ಆಗಿದೆ. ಕೋರ್ಟ್‌ಗೆ ಚಾರ್ಜ್‌ಶೀಟ್‌ ಕೂಡ ಸಲ್ಲಿಕೆಯಾಗಿದೆ. ಹಾಗಾದ್ರೆ, ಈ ನಟಿಯರ ಭವಿಷ್ಯ ಏನು? ಈ ನಟಿಯರ ಮೂಲಕ ಡ್ರಗ್ಸ್‌ ಗಿರಾಕಿಗಳನ್ನು ಸೆಳೆಯುತ್ತಿದ್ದ ವೀರೇನ್‌ ಖನ್ನಾ, ರವಿಶಂಕರ್, ರಾಹುಲ್ ತೋನ್ಸೆ ಸೇರಿದಂತೆ ಉಳಿದ ದೊಡ್ಡ ದೊಡ್ಡ ಪೆಡ್ಲರ್‌ಗಳ ಕಥೆ ಏನು? ಅವರಿಗೆ ಯಾವ ಶಿಕ್ಷೆಯಾಗುತ್ತೆ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಸಂಜನಾ ಮತ್ತು ರಾಗಿಣಿ ಮತ್ತೆ ಜೈಲು ಸೇರ್ತಾರಾ? ಅವರ ಭವಿಷ್ಯ ಏನು? ಸ್ಯಾಂಡಲ್‌ವುಡ್‌ನಲ್ಲಿ ಅವರು ಒಪ್ಪಿಕೊಂಡಿರುವ ಚಲನಚಿತ್ರಗಳ ಕಥೆ ಏನಾಗುತ್ತೆ ? ಅನ್ನೋ ಹತ್ತಾರು ಪ್ರಶ್ನೆಗಳು ಎದುರಾಗಿವೆ. ಅಷ್ಟಕ್ಕೂ ಅವರ ವಿರುದ್ಧ ಯಾವ ಯಾವ ಸೆಕ್ಸನ್‌ನಲ್ಲಿ ಕೇಸ್‌ ದಾಖಲಾಗಿದೆ ಗೊತ್ತಾ?

ಸೆಕ್ಷನ್‌ 21, 21ಸಿ, 27ಎ, 27ಬಿ, 29, ಐಸಿಸಿ 120ಬಿ ಅಡಿ ದೂರು ದಾಖಲು
ಈ ಸೆಕ್ಷನ್‌ಗಳು ಏನು ಹೇಳುತ್ತವೆ ಗೊತ್ತಾ?

ಇವರುಗಳ ವಿರುದ್ಧ ಇರೋ ಆರೋಪ ಏನು? ದಾಳಿಯ ವೇಳೆ ಸಿಕ್ಕಿರೋ ದಾಖಲೆ ಏನು? ಅನ್ನೋದನೆಲ್ಲಾ ನೋಡಿ ಪೊಲೀಸರು ದೂರು ದಾಖಲು ಮಾಡಿಕೊಳ್ಳುತ್ತಾರೆ. ಅದೇ ರೀತಿ ಈಗ ಸಿಕ್ಕಿ ಬಿದ್ದಿರೋ ಆರೋಪಿಗಳ ಮೇಲೆ ಸೆಕ್ಷನ್‌ 21, 21ಸಿ, 27ಎ, 27ಬಿ, 29, ಐಸಿಸಿ 120ಬಿ ಅಡಿ ದೂರು ದಾಖಲು ಮಾಡಿಕೊಳ್ಳಲಾಗಿತ್ತು. ಅದರಲ್ಲಿ ಸೆಕ್ಷನ್ 21 ಅನ್ನೋದು ಡ್ರಗ್ಸ್‌ ಉತ್ಪಾದನೆ, ಸರಬರಾಜು, ಮಾರಾಟ, ಖರೀದಿ, ಆಮದು ಮತ್ತು ರಫ್ತಿನ ವಿರುದ್ಧ ಅನ್ವಯವಾಗುತ್ತದೆ. ಸೆಕ್ಷನ್ 21c ಪ್ರಕಾರ 10 ಗ್ರಾಂ ಗೂ ಅಧಿಕ ಡ್ರಗ್ಸ್‌ ಪಡೆದಿರುವುದು, ಸಂಗ್ರಹಿಸಿರುವುದು, ಸೆಕ್ಷನ್ 27b ಪ್ರಕಾರ ಡ್ರಗ್ ಹಂಚಿಕೊಂಡು ಸೇವನೆ, ಬೇರೆಯವರ ಬಳಕೆ ಮಾಡುವಾಗ ಸಾಥ್, ಸೆಕ್ಷನ್ 29 ಪ್ರಕಾರ ಡ್ರಗ್ ಬಳಕೆ ಮಾಡಲು, ಖರೀದಿಸಲು ಒಳಸಂಚು. IPC 120b ಪ್ರಕಾರ ಅಪರಾಧ ಮಾಡಲು ಒಳಸಂಚು ಒಳಪಡುತ್ತದೆ……ಈ ಎಲ್ಲಾ ಸೆಕ್ಷನ್‌ ಪ್ರಕಾರ ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

ಆರೋಪ ಸಾಬೀತಾದ್ರೆ ಎಷ್ಟು ವರ್ಷ ಶಿಕ್ಷೆ
ಕನಿಷ್ಠ 1 ವರ್ಷ, ಗರಿಷ್ಠ 4 ವರ್ಷ ಶಿಕ್ಷೆ

ಆರೋಪಿಗಳ ಮೇಲೆ ಈಗ ಹಾಕಿರೋ ಸೆಕ್ಷನ್‌ಗಲ್ಲಿ ನಟಿಮಣಿಯರ ಮೇಲೆ ಎಲ್ಲಾ ಸೆಕ್ಷನ್‌ಗಳು ಅನ್ವಯ ಆಗುವಂತೆ ಇವೆ. ಆದ್ರೆ, ಎಲ್ಲಾ ಸೆಕ್ಷನ್‌ಗಳಿಗೊ ಪ್ರತ್ಯೇಕ ಶಿಕ್ಷೆ ಅನ್ನುವುದು ಇರುವುದಿಲ್ಲ. ಒಟ್ಟಾರೆಯಾಗಿ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಸಲ್ಲಿಸಿರೋ ವಿಷಯ ಕೋರ್ಟ್‌ನಲ್ಲಿ ವಾದ ಪ್ರತಿವಾದ ನಡೆಯುತ್ತದೆ. ಅಂತಿಮವಾಗಿ ಯಾವ ಆರೋಪ ಸಾಬೀತು ಆಗುತ್ತೋ ಆ ಸೆಕ್ಷನ್‌ ಮೇಲೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಎಲ್ಲಾ ಸೆಕ್ಷನ್‌ಗಳ ಪ್ರಕಾರ ಕನಿಷ್ಠ 1 ವರ್ಷ, ಗರಿಷ್ಠ 4 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ. ಅದೇ ರೀತಿ ದಂಡದ ವಿಚಾರ ಹೇಳೋದಾದ್ರೆ ಕನಿಷ್ಠ 20 ಸಾವಿರದಿಂದ ಗರಿಷ್ಠ 50 ಸಾವಿರದ ವರೆಗೂ ವಿಧಿಸಬಹುದಾಗಿದೆ. ಹಾಗಾದ್ರೆ ನಟಿ ಮಣಿಯರ ಭವಿಷ್ಯ ಏನು? ಸಾಕ್ಷಿ ನುಡಿದವರಿಗೆ ಬೆದರಿಕೆ ಹಾಕಲಾಗುತ್ತಿದೆಯಾ? ಸಾಕ್ಷಿ ನಾಶಕ್ಕೆ ಪ್ರಯತ್ನಿಸಲಾಗಿತ್ತಾ?

ಸಾಕ್ಷಿ ನುಡಿದವರಿಗೆ ಶುರು ಆಯ್ತಾ ಭಯ?
42 ಸಾಕ್ಷಿಗಳನ್ನು ಕಲೆ ಹಾಕಿದ ಸಿಸಿಬಿ

ಚಾರ್ಜ್‌ ಶೀಟ್‌ ಸಲ್ಲಿಕೆಗೂ ಮುನ್ನ ಸಿಸಿಬಿ ಪೊಲೀಸರು ಡ್ರಗ್ಸ್‌ ಪ್ರಕರಣವನ್ನು ಸಂಪೂರ್ಣವಾಗಿ ಜಾಲಾಡಿದ್ದಾರೆ. ಮನೆ ಮೇಲೆ ರೇಡ್‌ ಮಾಡಿ ಕೆಲವಷ್ಟು ದಾಖಲೆಗಳನ್ನು ವಶಪಡಿಸಿಕೊಂಡಿದ್ರು. ಹಾಗೇ ಆರೋಪಿಗಳ ವಿರುದ್ಧ ಪ್ರತ್ಯಕ್ಷ ಸಾಕ್ಷಿಗಳನ್ನು ಕಲೆಹಾಕಿದ್ದಾರೆ. ಅದರಲ್ಲಿ ಡ್ರಗ್‌ ಸಪ್ಲೆಯರ್‌, ಖಾಸಗಿ ಪಾರ್ಟಿಯಲ್ಲಿ ಭಾಗಿಯಾದವರು, ಪಾರ್ಟಿಗಳಲ್ಲಿ ಕೆಲಸ ಮಾಡಿದವರು ಸೇರಿದ್ದಾರೆ. ಇವರೆಲ್ಲ ಪ್ರಭಾವಿಗಳ ವಿರುದ್ಧ ಸಾಕ್ಷಿ ನುಡಿದಿದ್ದಾರೆ. ತಾವು ಕಂಡಿರೋದನ್ನು ನೇರವಾಗಿ ಹೇಳಿದ್ದಾರೆ. ಆದ್ರೆ, ಇದೊಂದು ಹೈಪ್ರಫೈಲ್‌ ಕೇಸ್‌ ಆಗಿರೋದ್ರಿಂದ ಪ್ರಭಾವಿಗಳು ತಮಗೆ ಏನಾದ್ರೂ ಮಾಡಿ ಬಿಡ್ತಾರಾ ಅನ್ನೋ ಭಯ ಸಾಕ್ಷಿ ನುಡಿದವರಿಗೆ ಆರಂಭವಾಗಿದೆ. ಕೆಲವರು ತಮಗೆ ಜೀವ ಭಯವಿದೆ ಅಂತಲೂ ಗೌಪ್ಯವಾಗಿ ಹೇಳಿಕೊಂಡಿದ್ದಾರೆ. ಡ್ರಗ್ಸ್‌ ಜಾಲ ಅನ್ನೋದು ಅಂತಾರಾಷ್ಟ್ರೀಯ ಮಟ್ಟದ ಜಾಲ. ಇದರಲ್ಲಿ ಅಂಡರ್‌ ವರ್ಲ್ಡ್‌ ಡಾನ್‌ಗಳಿಂದ ಹಿಡಿದು ದೊಡ್ಡ ದೊಡ್ಡ ವ್ಯಕ್ತಿಗಳು ತೆರೆಮರೆಯಲ್ಲಿ ಇರ್ತಾರೆ. ಇದೇ ಕಾರಣಕ್ಕೆ ಸಾಕ್ಷಿ ನುಡಿದವರಿಗೆ ಭಯ ಶುರುವಾಗಿದೆ. ಆದ್ರೆ, ಸಿಸಿಬಿ ಪೊಲೀಸರು ಭಯಗೊಳ್ಳುವ ಅಗತ್ಯವಿಲ್ಲ ಅಂತ ಸಾಕ್ಷಿ ನುಡಿದವರಿಗೆ ಧೈರ್ಯ ತುಂಬಿದ್ದಾರೆ. ಇದೇ ವೇಳೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆ ಮತ್ತೊಂದು ಮಾಹಿತಿ ಸ್ಫೋಟವಾಗಿದೆ. ಆ ಮಾಹಿತಿ ಕೇಳಿದ್ರೆ ಒಂದು ಕ್ಷಣ ದಂಗಾಗಿ ಬಿಡ್ತೀರಿ.

ತನಿಖೆಯ ವೇಳೆ ಸ್ಫೋಟವಾಯಿತು ಮತ್ತೊಂದು ಮಾಹಿತಿ
ಈ ಗ್ಯಾಂಗ್‌ನಿಂದ ವಶಪಡಿಸಿಕೊಂಡ ಡ್ರಗ್ಸ್‌ ಮೌಲ್ಯ ಎಷ್ಟು ಗೊತ್ತಾ?

ಡ್ರಗ್ಸ್‌ ಕೇಸ್‌ನಲ್ಲಿ ಸಿಕ್ಕಿ ಬಿದ್ದು ಜೈಲು ಶಿಕ್ಷೆಗೆ ಕ್ಷಣಗಣನೆ ಎಣಿಸುತ್ತಿರೋ ಈ ಗ್ಯಾಂಗ್‌ ಆ್ಯಟಿವ್‌ ಆಗಿರೋದು ಇಂದು ನಿನ್ನೆಯಿಂದ ಅಲ್ಲ. ಅವರ ಬಗ್ಗೆ ಬಗೆದಷ್ಟು ಅಚ್ಚರಿಯ ವಿಷಯಗಳು ಹೊರಬರುತ್ತಲೇ ಇವೆ. ಅದರಲ್ಲಿ ಮುಖ್ಯವಾಗಿ ಡ್ರಗ್ಸ್‌ಗೆ ಗ್ರಾಹಕರನ್ನು ಸೆಳೆಯಲು ನಟಿಮಣಿಯರನ್ನು ಬಳಸಿಕೊಳ್ಳಲಾಗುತ್ತಿತ್ತು. ಆ ಮೂಲಕ ಡ್ರಗ್ಸ್‌ ಮಾರಾಟ ಜಾಲವನ್ನು ಹೆಚ್ಚಿಸಿಕೊಳ್ಳಲಾಗುತ್ತಿತ್ತು. ಈ ರೀತಿಯ ಕೃತ್ಯ ಆರಂಭವಾಗಿದ್ದು 2018ರಿಂದ. ಅಲ್ಲಿಂದ 2020ರ ವರೆಗೂ ಅಂದ್ರೆ, ಪೊಲೀಸರು ದಾಳಿ ನಡೆಸುವವರೆಗೂ ಕಾರ್ಯನಿರ್ವಹಿಸಿದ್ದಾರೆ. ಮತ್ತೊಂದು ಸ್ಫೋಟಕ ವಿಷಯ ಅಂದ್ರೆ ಇವರಿಂದಲೇ ಬಾಣಸವಾಡಿಯಲ್ಲಿ ಸಿಸಿಬಿ ಪೊಲೀಸರು ಒಂದೂವರೆ ಕೋಟಿ ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡಿದ್ರು, ಈ ವಿಷಯ ಚಾರ್ಜ್‌ಶೀಟ್‌ನಲ್ಲಿ ಸ್ಫೋಟವಾಗಿದೆ.

ಆದಿತ್ಯ ಅಗರ್ವಾಲ್‌ ಮೂಲಕ ವೀರೇನ್‌ ಖನ್ನಾಗೆ ಡ್ರಗ್ಸ್‌ ತಲುಪುತ್ತಿತ್ತು

 

ಬಾಣಸವಾಡಿಯಲ್ಲಿ ವಶಪಡಿಸಿಕೊಂಡ ಡ್ರಗ್ಸ್‌ ಸಾಮಾನ್ಯ ಮೊತ್ತದಲ್ಲ. ಈ ಡ್ರಗ್ಸ್‌ ಎಲ್ಲಿಗೆ ಹೋಗುತ್ತಿತ್ತು? ಯಾರಿಂದ ಯಾರಿಗೆ ಸರಬರಾಜು ಆಗುತ್ತಿತ್ತು? ಅನ್ನೋ ಪ್ರಶ್ನೆ ಬರುತ್ತೆ. ಮೂಲಗಳ ಪ್ರಕಾರ ಈ ಡ್ರಗ್ಸ್‌ ದೊಡ್ಡ ಪಡ್ಲರ್‌ ಆಗಿರೋ ಆದಿತ್ಯ ಅಗರ್ವಾಲ್‌ ಮೂಲಕ ವೀರೇನ್‌ ಖನ್ನಾಗೆ ತಲುಪುತ್ತಿತ್ತು. ಈ ವೀರೇನ್‌ ಖನ್ನಾ ಇದ್ದಾನಲ್ಲ, ಈತ ಏನು ಕಮ್ಮಿ ಪುರುಷ ಅಲ್ಲ. ಮಾಸ್ಟರ್‌ ಮೈಂಡ್‌ಗಳಲ್ಲಿ ಈತ ಕೂಡ ಒಬ್ಬನಾಗಿದ್ದಾನೆ. ನಟಿಯರ ಮೂಲಕ ಡ್ರಗ್ಸ್‌ ಗ್ರಾಹಕರನ್ನು ಸೆಳೆಯುವ ತಂತ್ರವನ್ನು ಈತ ಹಣೆಯುತ್ತಿದ್ದ. ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದ. ಇದಕ್ಕೆಲ್ಲ ಮುಖ್ಯ ವೇದಿಕೆಯಾಗಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಅದೇ ಪಾರ್ಟಿಯಲ್ಲಿ ಡ್ರಗ್ಸ್‌ ಡೀಲ್‌ ನಡೆಯುತ್ತಿತ್ತು. ಅಂತೂ ಇವರೆಲ್ಲರೂ ಕಂಬಿ ಎಣಿಸುವ ಕಾಲ ಕೂಡಿ ಬಂದಿದೆ.

Source: newsfirstlive.com Source link