ಪಂಜ್​ಶೀರ್​ಗೆ ದಿಗ್ಭಂಧನ ಹಾಕಿದ ತಾಲಿಬಾನಿಗಳು -ಕುಗ್ಗದೇ ಯುದ್ಧಕ್ಕೆ ಸಿದ್ಧರಾಗಿ ಅಂದ್ರು ಸ್ಥಳೀಯ ಸೇನಾ ನಾಯಕ

ಪಂಜ್​ಶೀರ್​ಗೆ ದಿಗ್ಭಂಧನ ಹಾಕಿದ ತಾಲಿಬಾನಿಗಳು -ಕುಗ್ಗದೇ ಯುದ್ಧಕ್ಕೆ ಸಿದ್ಧರಾಗಿ ಅಂದ್ರು ಸ್ಥಳೀಯ ಸೇನಾ ನಾಯಕ

ಇಷ್ಟು ದಿನ ಅಫ್ಘಾನ್‌ ಅನ್ನು ಇಡೀ ಜಗತ್ತು ಕರುಣಾಜನಕ ಸ್ಥಿತಿಯಲ್ಲಿ ನೋಡ್ತಾ ಇತ್ತು. ಆದ್ರೆ, ಇದೀಗ ಅದೇ ಅಫ್ಘಾನ್‌ನ ಪಂಜ್‌ಶೀರ್‌ ಎಂಬ ಚಿಕ್ಕ ಕಣಿವೆ ಪ್ರಾಂತ್ಯವನ್ನು ಬೆರಗು ಕಣ್ಣಿನಿಂದ ನೋಡುತ್ತಿದೆ. ಅದಕ್ಕೆಲ್ಲ ಕಾರಣ ಪಂಜ್‌ಶೀರ್‌ ಸಿಂಹಗಳು ತಾಲಿಬಾನಿಗಳ ಮಾರಣಹೋಮ ಮಾಡಿರೋದು!

ಅಮೆರಿಕ ಸೇನೆ ಅಫ್ಘಾನ್‌ನಿಂದ ವಾಪಸ್‌ ಆಗಿದ್ದೇ ತಡ, ತಾಲಿಬಾನಿ ಉಗ್ರರು ಚಿಗುರಿಕೊಂಡು ಬಿಟ್ರು. ಭರ್ಜರಿ ದಾಳಿ ಆರಂಭಿಸಿ ಬಿಟ್ರು. ಆಫ್ಘಾನ್‌ ಸೇನೆ ಹೋರಾಟ ಮಾಡಲಾಗದೇ ಶರಣಾಗಿ ಬಿಡ್ತು. ಪರಿಣಾಮ ಬಹುತೇಕ ಅಫ್ಘಾನ್‌ ತಾಲಿಬಾನ್‌ ಉಗ್ರರ ಕೈವಶವಾಯ್ತು. ಇಡೀ ದೇಶ ತಾಲಿಬಾನಿ ಉಗ್ರರ ವಶವಾಗುತ್ತಿದ್ದಂತೆ ಅಧ್ಯಕ್ಷ ಅಶ್ರಫ್‌ ಘನಿ ದೇಶಬಿಟ್ಟು ಓಡಿ ಹೋಗಿ ಬಿಟ್ಟ. ಅದೆಷ್ಟೋ ರಾಜಕಾರಣಿಗಳು, ಅಧಿಕಾರಿಗಳು ಬೇರೆ ಬೇರೆ ದೇಶಕ್ಕೆ ಪಲಾಯನ ಮಾಡಿ ಬಿಟ್ರು. ಅಫ್ಘನ್‌ ಪ್ರಜೆಗಳು ಕೂಡ ಕಾಬುಲ್‌ ನಿಲ್ದಾಣಕ್ಕೆ ಓಡೋಡಿ ಬಂದು ವಿಮಾನ ಏರಿದ್ರು. ಆದ್ರೆ, ಸ್ವತಃ ಅಫ್ಘಾನ್‌ನಲ್ಲಿಯೇ ಇರೋ ಪಂಚ್‌ಶಿರ್‌ ಪ್ರದೇಶ ಮಾತ್ರ ನಿಶ್ಚಿಂತೆಯಲ್ಲಿ ಇತ್ತು. ಆ ಪ್ರದೇಶವನ್ನು ಟಚ್‌ ಕೂಡ ಮಾಡಲು ತಾಲಿಬಾನಿಗಳಿಗೆ ಸಾಧ್ಯವಾಗರಿಲ್ಲ. ಇದೀಗ ಟಚ್‌ ಮಾಡಲು ಹೋದ 300 ತಾಲಿಬಾನಿ ಉಗ್ರರು ಬೂದಿಯಾಗಿ ಹೋಗಿದ್ದಾರೆ.

ಇದನ್ನೂ ಓದಿ: ‘ನಿಮ್ಮನ ಮದ್ವೆ ಆಗ್ಬೇಕು’ ಎಂದ ಫ್ಯಾನ್​ಗೆ ‘ಆಯ್ತು ಒಮ್ಮೆ ಗಂಡನಿಗೆ ಕೇಳ್ತೀನಿ’ ಎಂದ ಖುಷ್ಬೂ

ಗೆರಿಲ್ಲಾ ಮಾದರಿಯ ದಾಳಿ ನಡೆಸಿದ ಪಂಜ್‌ಶೀರ್‌ ಸೈನಿಕರು
ಗೆರಿಲ್ಲಾ ದಾಳಿಯೇ ಹೇಗಿರುತ್ತೆ ಗೊತ್ತಾ?

blank

ಶರಣಾಗಳು ಪಂಜ್‌ಶೀರ್‌ಗೆ ಗಡುವು ನೀಡಿತ್ತು ತಾಲಿಬಾನ್‌
ಶರಣಾಗದ ಹಿನ್ನೆಲೆಯಲ್ಲಿ ಪಂಜ್‌ಶೀರ್‌ನತ್ತ ನುಗ್ಗಿದ ಉಗ್ರರು

ಪಂಜ್‌ಶೀರ್‌ನಲ್ಲಿ ತಾಲಿಬಾನ್‌ ಉಗ್ರರ ಮೇಲೆ ದಾಳಿ ನಡೆಸುವುದ್ದಕ್ಕೂ ಮುನ್ನ ಕಂಡು ಬಂದ ದೃಶ್ಯವಿದು. ಪಂಜ್‌ಶೀರ್‌ಗೆ ಶರಣಾಗಲು ತಾಲಿಬಾನಿಗಳು ಗಡುವು ನೀಡಿರುತ್ತಾರೆ. ಆದ್ರೆ, ನಾವು ಹೋರಾಡುತ್ತೇವೆ ಹೊರತು ಶರಣಾಗುವುದಿಲ್ಲ ಅಂತ ಪಂಜ್‌ಶೀರ್‌ ಜನ ಘೋಷಣೆ ಹಾಕುತ್ತಾರೆ. ಆ ಸಂದರ್ಭದಲ್ಲಿ ತಾಲಿಬಾನಿ ಉಗ್ರರು ಪಂಜ್‌ಶೀರ್‌ನತ್ತ ರೈಫಲ್‌ ಹಿಡಿದು ಹೊರಡುತ್ತಾರೆ. ಅದು ಒಂದೆರಡು ವಾಹನದಲ್ಲಿ ಅಲ್ಲ, ಸಾಲು ಸಾವು ವಾಹನದಲ್ಲಿ ಸಾಗುತ್ತಾರೆ. ಆದ್ರೆ, ಅಲ್ಲಿರೋದು ಪಂಜ್‌ಶೀರ್‌ ಸಿಂಹಗಳು ಅನ್ನೋದು ತಾಲಿಬಾನಿಗಳಿಗೆ ಅರಿವಾಗಿ ಬಿಡ್ತು.

ಇದನ್ನೂ ಓದಿ: ‘ನನ್ನನ್ನ ಕ್ಷಮಿಸಿ ಅಪ್ಪಾಜಿ.. ನಾನು ಕಾಂಗ್ರೆಸ್ ಸೇರುತ್ತಿದ್ದೇನೆ’ ದೇವೇಗೌಡರಿಗೆ ಜಿಟಿಡಿ ಮನವಿ

ಯುದ್ಧ ಆರಂಭವಾದ್ರೆ ಪಂಜ್‌ಶೀರ್‌ಗೆ ನೆರವಾಗುವಱರು?

blank

ಇದೊಂದು ಮಹತ್ವದ ಪ್ರಶ್ನೆಯಾಗಿ ಬಿಟ್ಟಿದೆ. ಬಹುತೇಕ ಎಲ್ಲರ ತಲೆಯಲ್ಲಿಯೂ ಓಡುತ್ತಿರುವ ವಿಚಾರ ಇದು. ಪಂಜ್‌ಶೀರ್‌ನಲ್ಲಿ ಅನೇಕ ಅಫ್ಘಾನ್‌ ಸೈನಿಕರು, ಕಮಾಂಡರ್‌ಗಳು ಸೇರಿಕೊಂಡಿದ್ದಾರೆ. ಬೇರೆ ಬೇರೆ ಪ್ರದೇಶದಲ್ಲಿದ್ದ ಮಿಲಿಟರಿ ಕಮಾಂಡರ್‌ಗಳು ವಾಪಸ್‌ ಪಂಜ್‌ಶೀರ್‌ಗೆ ಸೇರಿಕೊಂಡಿದ್ದಾರೆ. ಹೀಗಾಗಿ ತಾಲಿಬಾನಿಗಳ ವಿರುದ್ಧದ ಹೋರಾಟಕ್ಕೆ ಆನೆಬಲ ಬಂದಂತಾಗಿದೆ. ಆದ್ರೆ, ತಾಲಿಬಾನಿಗಳ ಕೈಯಲ್ಲಿ ಹೆಚ್ಚಿನ ಶಸ್ತ್ರಾಸ್ತ್ರ ಇದೆ. ಆದ್ರೆ, ಪಂಜ್‌ಶೀರ್‌ ಪಡೆಯಲ್ಲಿರೋ ಶಸ್ತ್ರಾಸ್ತ್ರ ಹೋರಾಟಕ್ಕೆ ಸಾಕಾಗುತ್ತಾ? ಒಮ್ಮೆ ಸಾಕಾಗಲ್ಲ ಅಂತಾದ್ರೆ ಯಾವ ರಾಷ್ಟ್ರಗಳು ಮುಂದೆ ನಿಂತು ನೆರವು ನೀಡಬಹುದು?

ಪಂಜ್‌ಶೀರ್‌ ಶಕ್ತಿ ಮತ್ತೆ ಜಾಗೃತ
ಅಹ್ಮದ್‌ ಮಸೂದ್‌, ಅಮ್ರುಲ್ಲಾಹ್‌ ಸಲೇಹ್‌ ನಾಯಕತ್ವ

ಇದನ್ನೂ ಓದಿ: ಶುರುವಾಗಲಿದೆ ಸರಿಗಮಪ ಚಾಂಪಿಯನ್​ಶಿಪ್; ಈಗ ರಾಜೇಶ್​ ಕೃಷ್ಣನ್​ ಸ್ಥಾನ ತುಂಬೋರು ಯಾರು?​

ಇಂದು, ಪಂಜ್‌ಶೀರ್‌ ಪ್ರಾಂತ್ಯ ತಾಲಿಬಾನಿಗಳ ಗುಂಡಿನ ಸದ್ದಿಗೆ ಹೆದರದೇ ಎದೆಯೊಡ್ಡಿನಿಂತಿದೆ ಅಂದ್ರೆ, ಅದರ ಹಿಂದೆ ಅಹಮ್ಮದ್‌ ಮಸೂದ್‌ ಮತ್ತು ಅಫ್ಘಾನ್‌ನ ಸ್ವಘೋಷಿತ ಅಧ್ಯಕ್ಷ ಅಮ್ರುಲ್ಲಾಹ್‌ ಸಲೇಹ್‌ ಇದ್ದಾರೆ. ಪಂಜ್‌ಶೀರ್‌ ಸಿಂಹ ಎಂದೇ ಖ್ಯಾವಾಗಿದ್ದ, ತಾಲಿಬಾನಿಗಳ ವಿರುದ್ಧ ಹೋರಾಟ ಮಾಡಿ ನಿದ್ದೆಗೆಡಿಸಿದ್ದ ಮೊಹ್ಮದ್‌ ಶಾ ಮಸೂದ್‌, ಅವರ ಮಗನೇ ಅಹಮ್ಮದ್‌ ಮಸೂದ್‌. ಹೀಗಾಗಿಯೇ ತಾಲಿಬಾನಿಗಳ ಪಂಜ್‌ಶೀರ್‌ ಹೆಸರು ಕೇಳಿದ್ರೆ ನಡುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

blank

ಇದನ್ನೂ ಓದಿ: ಚಿನ್ನ ಗೆದ್ದರೂ ಬೀಗದ ನೀರಜ್ ಚೋಪ್ರಾ; ಕನ್ನಡಿಗ ಕಾಶಿನಾಥ್​​​​​ ನಾಯ್ಕ್ ಭೇಟಿಯಾಗಿ ಗುರುವಂದನೆ

ತಾಲಿಬಾನ್‌, ಸೋವಿಯತ್‌ ಒಕ್ಕೂಟಕ್ಕೂ ತಲೆಬಾಗಿಲ್ಲ ಪಂಜ್‌ಶೀರ್‌

ಅಫ್ಘಾನ್‌ ಪಂಚ್‌ಶೀರ್‌ ಪ್ರಾಂತ್ಯದ ಹೋರಾಟದ ಬಗ್ಗೆ ದೊಡ್ಡ ಇತಿಹಾಸವಿದೆ. ಇವರ್ಯಾರು ತಾಲಿಬಾನಿಗಳಿಗಾಗಲಿ, ವಿದೇಶಿ ಶಕ್ತಿಗಳಿಗಾಗಲಿ ಯಾವಾಗಲೂ ತಲೆಬಾಗಿದವರಲ್ಲ.1990 ಕ್ಕೂ ಮುನ್ನ ಸೋವಿಯತ್‌ ಒಕ್ಕೂಟ ಅಫ್ಘಾನ್‌ ಮೇಲೆ ಇನ್ನಿಲ್ಲದ ದಾಳಿ ನಡೆಸಿ ಇಡೀ ಅಫ್ಘಾನ್‌ ಮೇಲೆ ನಿಯಂತ್ರಣ ಪಡೆದಿತ್ತು. ಆದ್ರೆ, ಅವರಿಗೂ ಕೂಡ ಪಂಚ್‌ಶೀರ್‌ ಪ್ರಾಂತ್ಯದ ಮೇಲೆ ಆಕ್ರಮಣ ನಡೆಸಲು ಸಾಧ್ಯವಾಗಿರಲಿಲ್ಲ. ಸೋವಿಯತ್‌ ಒಕ್ಕೂಟ ಹಿಂದೆ ಸರಿದ ಮೇಲೆ ತಾಲಿಬಾನಿಗಳು ಅಟ್ಟಹಾಸ ಮೆರೆಯುತ್ತಿದ್ರು. ಆದ್ರೆ, ತಾಲಿಬಾನಿಗಳಿಗೂ ಈ ಪ್ರಾಂತ್ಯವನ್ನು ಟಚ್‌ ಮಾಡಲು ಸಾಧ್ಯವಾಗರಿಲ್ಲ. ಈಗಲೂ ಕೇವಲ 1 ಲಕ್ಷ 73 ಸಾವಿರ ಜನಸಂಖ್ಯೆ, 512 ಹಳ್ಳಿಗಳು, 7 ಜಿಲ್ಲೆಗಳನ್ನು ಹೊಂದಿರೋ ಅದೇ ಪಂಜ್​ಶೀರ್ ಪ್ರಾಂತ್ಯ ಮತ್ತೆ ಸಿಡಿದೆದ್ದಿದೆ.

ಇದನ್ನೂ ಓದಿ: 20 ವರ್ಷಗಳ ನಂತರ ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರು ಅರೆಸ್ಟ್..! ಬಿಜೆಪಿ ತೀವ್ರ ಖಂಡನೆ

ಇದನ್ನೂ ಓದಿ: ‘ಶಾಲಾ ಮಕ್ಕಳ ಸ್ವೇಟರ್​​​ ಹೆಸರಲ್ಲಿ ₹1.7 ಕೋಟಿ ಹಣ ಗುಳುಂ’ ನಟ ಕೋಮಲ್ ವಿರುದ್ಧ ಗಂಭೀರ ಆರೋಪ

ಇದನ್ನೂ ಓದಿ: ಮೆಗಾಸ್ಟಾರ್​ ಬರ್ತ್​​​ಡೇ ಸಂಭ್ರಮದಲ್ಲಿ ಒಂದಾಯ್ತು ಕೊನಿಡೆಲಾ ಕುಟುಂಬ!

Source: newsfirstlive.com Source link