‘ಸ್ವಾಮಿ ಒಂದ್ ಮಾತು ಹೇಳ್ತೀನಿ.. ನೆಲ, ಜಲ ಅಂತಾ ಬಂದ್ರೆ..’

‘ಸ್ವಾಮಿ ಒಂದ್ ಮಾತು ಹೇಳ್ತೀನಿ.. ನೆಲ, ಜಲ ಅಂತಾ ಬಂದ್ರೆ..’

ಬೆಂಗಳೂರು: ಮೇಕೆದಾಟು ಮತ್ತು ಮಹದಾಯಿ ನದಿನೀರು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಜೆಡಿಎಸ್ ನಾಯಕರು ಪಾದಯಾತ್ರೆ ಮಾಡುವುದರ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ.. ‘ರೀ ಸ್ವಾಮಿ ನೆಲ ಜಲ ಅನ್ನೋ ವಿಷಯಕ್ಕೆ ಬಂದ್ರೆ ರಾಜಕಾರಣ ಮರೆತು, ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡ್ತೀವಿ ಎಂದಿದ್ದಾರೆ.

ನಮ್ಮ ನೆಲ-ಜಲ, ಭಾಷೆ ವಿಷಯದಲ್ಲಿ ಯಾರೇ ಪ್ರತಿರೋಧ ವ್ಯಕ್ತಪಡಿಸಿದರೂ ನಾವು ಯೋಜನೆ ಕಾರ್ಯ ಗತಗೊಳಿಸುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ವಿರೋಧ ವ್ಯಕ್ತಪಡಿಸುವುದು ಅವರ ಹಕ್ಕಾದರೆ ಯೋಜನೆಗಳನ್ನು ಅನುಷ್ಠಾನ ಮಾಡುವುದು ನಮ್ಮ ಹಕ್ಕು. ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದರೆ ಸಾಕು ರಾಜ್ಯದ ವಿಷಯಗಳಲ್ಲಿ ಯಾವ ಯಾವ ಸರ್ಕಾರಗಳು ಹೇಗೆ ನಡೆದುಕೊಂಡಿವೆ ಎಂಬುದಕ್ಕೆ ಸಾಕ್ಷಿ ಇದೆ. ರಾಜ್ಯದ ವಿಷಯ ಬಂದಾಗ ಪಕ್ಷಬೇಧ ಮರೆತು ಹೋರಾಟ ಮಾಡಿದ್ದೇವೆ. ಈಗಲೂ ಹೋರಾಟ ಮಾಡುತ್ತೇವೆ ಎಂದರು.

Source: newsfirstlive.com Source link