ಮೈಸೂರು ಮೇಯರ್​​ ಚುನಾವಣೆಗೆ ಕೌಂಟ್​ಡೌನ್​ -ಅಧಿಕಾರದ ಚುಕ್ಕಾಣಿಗೆ ಮೂರು ಪಕ್ಷಗಳ ಸರ್ಕಸ್​!

ಮೈಸೂರು ಮೇಯರ್​​ ಚುನಾವಣೆಗೆ ಕೌಂಟ್​ಡೌನ್​ -ಅಧಿಕಾರದ ಚುಕ್ಕಾಣಿಗೆ ಮೂರು ಪಕ್ಷಗಳ ಸರ್ಕಸ್​!

ಕಳೆದ ಬಾರಿ ಸಾಕಷ್ಟು ರೋಚಕತೆ, ರಾಜಕೀಯ ಹೈಡ್ರಾಮಾಗಳಿಗೆ ಸಾಕ್ಷಿಯಾಗಿದ್ದ ಮೈಸೂರು ಮೇಯರ್ ಚುನಾವಣೆ ಇಂದು ಮತ್ತೆ ನಡೆಯಲಿದೆ. ಜೆಡಿಎಸ್​​ ಕಾಂಗ್ರೆಸ್ ನಡುವೆ ಅರಮನೆ ನಗರಿಯ ಸಿಂಹಾಸನಕ್ಕಾಗಿ ಹಗ್ಗಜಗ್ಗಾಟ ಶುರುವಾಗಿದೆ. ಬಿಜೆಪಿ ಸದ್ದಿಲ್ಲದೇ ಒಳಗೊಳಗೇ ರಣತಂತ್ರ ಹೆಣೆಯುತ್ತಿದ್ದು, ದಳಬಳಗದ ನಡೆ ಎಂದಿನಂತೆ ನಿಗೂಢವಾಗಿದೆ.

ಸಾಂಸ್ಕೃತಿಕ ನಗರಿಯಲ್ಲಿ ಇವತ್ತು ಮತ್ತೆ ಚುನಾವಣಾ ಪ್ರಹಸನಗಳು ಜೋರಾಗುವ ಲಕ್ಷಣಗಳು ದಟ್ಟವಾಗಿದೆ. ಮೈಸೂರು ಮೇಯರ್ ಚುನಾವಣೆಗೆ ಕೌಂಟ್​ಡೌನ್ ಶುರುವಾಗಿದ್ದು, ಅಧಿಕಾರದ ಚುಕ್ಕಾಣಿಗೆ ಮೂರೂ ರಾಜಕೀಯ ಪಕ್ಷಗಳ ಸರ್ಕಸ್ ಭರ್ಜರಿಯಾಗಿದೆ. ಮಾಜಿ ಮೇಯರ್ ರುಕ್ಮಿಣಿ ಮಾದೇಗೌಡ ಪಾಲಿಕೆ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ಮೈಸೂರು ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

blank

ಕಾಂಗ್ರೆಸ್ ಜೊತೆ ಮೈತ್ರಿಯೊಂದಿಗೆ ಮೇಯರ್‌ಗಾದಿ ಹಿಡಿದಿದ್ದ ಜೆಡಿಎಸ್ ಈ ಅವಧಿ ಪೂರ್ಣಗೊಳಿಸಲು ಅವಕಾಶ ಕೊಡಿ ಎಂದು ಪಟ್ಟುಹಿಡಿದಿದೆ. ಇತ್ತ ಮೈತ್ರಿ ಧರ್ಮದಂತೆ ಕಳೆದ ಬಾರಿಯೇ ನಮಗೆ ಮೇಯರ್ ಸ್ಥಾನ ಬಿಟ್ಟುಕೊಡಬೇಕಿತ್ತು. ಆದ್ರೆ, ಕೋಮುವಾದಿ ಬಿಜೆಪಿಗೆ ಅಧಿಕಾರ ಸಿಗಬಾರದೆಂದು ನಿಮಗೆ ಬಿಟ್ಟು ಕೊಟ್ಟಿದ್ವಿ , ಈ ಬಾರಿ ನಮಗೇ ಬೇಕು ಎಂದು ಪಟ್ಟು ಹಿಡಿದಿದೆ.

ಈ ನಡುವೆ ಜೆಡಿಎಸ್ ಖಾಸಗಿ ಹೊಟೇಲ್‌ನಲ್ಲಿ ಕಾರ್ಪೋರೇಟರ್‌ಗಳ ಸಭೆ ನಡೆಸಿದ್ದು, ಪ್ರತ್ಯೇಕ ಅಭಿಪ್ರಾಯ ಸಂಗ್ರಹ ಮಾಡಿದೆ. ಬಹುತೇಕ ಸದಸ್ಯರು ಬಿಜೆಪಿ ಜೊತೆಗಿಂತ ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಸೋದೆ ಬೆಸ್ಟ್ ಎಂದು ಹೇಳಿದ್ದಾರೆ ಎನ್ನಲಾಗ್ತಿದೆ. ಆದ್ರೆ, ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಸಲು ಮೇಯರ್ ಸ್ಥಾನ ನಮಗೇ ಬೇಕು ಎಂಬುದು ಜೆಡಿಎಸ್​ ಹಠ ಕೂಡ ಹೌದು. ಕಾಂಗ್ರೆಸ್ ಚುನಾವಣೆ ಉಸ್ತುವಾರಿ ಹೊತ್ತಿರುವ ಶಾಸಕ ತನ್ವೀರ್‌ಸೇಠ್ ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್ ಮನವೊಲಿಕೆಗೆ ಮುಂದಾಗಿದ್ದು ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎನ್ನಲಾಗ್ತಿದೆ.

blank

ಇನ್ನು, ಮೈತ್ರಿಗೆ ದಳಕೋಟೆಯ ಬಾಗಿಲು ತಟ್ಟಿರುವ ಬಿಜೆಪಿ ನಾಯಕರು ಸದ್ದಿಲ್ಲದೇ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇವತ್ತು ಜೆಡಿಎಸ್‌ ನಾಯಕರನ್ನು ಭೇಟಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನಿರ್ಧರಿಸಿದ್ದಾರೆ. ಈ ನಡುವೆ ಈ ಬಾರಿ ಕಾಂಗ್ರೆಸ್‌ಗೆ ಮೇಯರ್ ಸ್ಥಾನ ಪಡೆಯಿರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೂಚನೆ ನೀಡಿರೋದು ಚುನಾವಣಾ ಉಸ್ತುವಾರಿ ಹೊತ್ತಿರುವ ಆರ್.ಧ್ರುವನಾರಾಯಣ್ ಮತ್ತು ತನ್ವೀರ್‌ಸೇಠ್‌ಗೆ ದೊಡ್ಡ ಸವಾಲಾಗಿದೆ.

ಅಂತಿಮವಾಗಿ ನಿರ್ಣಾಯಕ ಸ್ಥಾನದಲ್ಲಿರುವ ಜೆಡಿಎಸ್ ಯಾರನ್ನ ಬೆಂಬಲಿಸುತ್ತೆ ಅನ್ನೋ ಕುತೂಹಲ ಒಂದೆಡೆಯಾದ್ರೆ , ಶಾಸಕ ಜಿ.ಟಿ.ದೇವೆಗೌಡ ಹಾಗು ಅವರ ಬೆಂಬಲಿಗ ಕಾರ್ಪೋರೆಟರ್‌ಗಳ ನಡೆಯೂ ಕುತೂಹಲ ಮೂಡಿಸಿದೆ.

Source: newsfirstlive.com Source link