‘ಪಾರ್ಕಿಂಗ್ ಬೋರ್ಡ್ ಇಲ್ಲಂದ್ರೆ ಅದು ನೋ ಪಾರ್ಕಿಂಗ್ ಅಂತಾನೇ’ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

‘ಪಾರ್ಕಿಂಗ್ ಬೋರ್ಡ್ ಇಲ್ಲಂದ್ರೆ ಅದು ನೋ ಪಾರ್ಕಿಂಗ್ ಅಂತಾನೇ’ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

01. ಇಂದು ದೆಹಲಿಗೆ ಸಿಎಂ ಬೊಮ್ಮಾಯಿ

blank

ಸಿಎಂ ಬಸವರಾಜ್​ ಬೊಮ್ಮಾಯಿ ಇಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1:20ರ ವಿಮಾನದಲ್ಲಿ ರಾಷ್ಟ್ರ ರಾಜಧಾನಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಇಂದು ಸಂಜೆ ಕೇಂದ್ರದ ಸಚಿವರನ್ನು ಸಿಎಂ ಭೇಟಿಯಾಗಲಿದ್ದು, ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಇನ್ನು ನಾಳೆ ಬೆಳಗ್ಗೆ 8 ಗಂಟೆಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ ಕೇಂದ್ರದ ಸಚಿವರನ್ನು ಭೇಟಿಯಾಗಿ ಸಂಜೆ 4:05 ರ ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ವಾಪಾಸಾಗಲಿದ್ದಾರೆ.

02. ಸಿದ್ದರಾಮಯ್ಯ ಭೇಟಿಯಾದ ಜಮೀರ್‌ ಅಹ್ಮದ್‌

blank

ಬೆಂಗಳೂರಿನಲ್ಲಿರುವ ಜಿಂದಾಲ್‌ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಿ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನ ಶಾಸಕ ಜಮೀರ್‌ ಅಹ್ಮದ್‌ ಭೇಟಿ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಯ ಮೊರೆ ಹೋಗಿದ್ದು, ನಿನ್ನೆ ಸಂಜೆ ಶಾಸಕ ಜಮೀರ್‌ ಅಹ್ಮದ್‌ ಭೇಟಿಯಾಗಿ ಸಿದ್ದರಾಮಯ್ಯರ ಆರೋಗ್ಯ ವಿಚಾರಿಸಿದ್ರು, ಅಲ್ಲದೇ ಕೆಲ-ಕಾಲ ಉಭಯ ನಾಯಕರು ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ರು. ಇನ್ನು ಶಾಸಕ ಜಮೀರ್‌ ಅಹ್ಮದ್‌ ಖಾನ್‌ಗೆ ಕಾಂಗ್ರೆಸ್‌ ಮುಖಂಡ ಜಿ.ಎ.ಬಾವ ಸಾಥ್‌ ನೀಡಿದ್ರು.

03. ಹಳೇ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು!

ಇವತ್ತು ಮಂಡ್ಯ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದೆ. ಜಿಲ್ಲೆಯ ಖಾಸಗಿ ಸಮುದಾಯ ಭವನದಲ್ಲಿ ಸಭೆ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ಇದೇ ಮೊದಲ ಬಾರಿಗೆ ಮಂಡ್ಯದಲ್ಲಿ ಕೇಸರಿಗಳ ಚರ್ಚೆ ನಡೆಯಲಿದ್ದು, ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಗೆ ಬಿಜೆಪಿ ಪ್ಲಾನ್ ಹಾಕಿದಂತಿದೆ.

 04. ಹೋಳಿಗೆ ಊಟ ತಿಂದು ಆಸ್ಪತ್ರೆ ಸೇರಿದ ಜನರು

blank

ವಿಷಾಹಾರ ಸೇವಿಸಿ 100ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಬೆಣ್ಣೆಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಸೀಮಂತ ಕಾರ್ಯಕ್ರಮದಲ್ಲಿ ಹೋಳಿಗೆ ಸೀಕರಣೆಯ ಸಿಹಿ ಅಡುಗೆ ಊಟದ ವ್ಯವಸ್ಥೆ ಮಾಡಲಾಗಿತ್ತು, ಈ ವೇಳೆ ಊಟ ಮಾಡಿದ 100 ಕ್ಕೂ ಅಧಿಕ‌ ಮಂದಿಗೆ ವಾಂತಿಯಾಗಿದೆ. ಕೂಡಲೇ ಎಚ್ಚೆತ್ತು ಅಸ್ವಸ್ಥರಾಗಿದ್ದವರಲ್ಲಿ 20ಕ್ಕೂ ಹೆಚ್ಚು ಮಂದಿಯನ್ನ ಜಗಳೂರು ಆಸ್ಪತ್ರೆಗೆ ದಾಖಲಿಸಲಾಯ್ತು. ಅದೃಷ್ಟವಶಾತ್‌ ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

05. ವಿಚಾರಣೆಗೂ ಮುನ್ನವೇ ಜಾಮೀನು ಅರ್ಜಿ ಸಲ್ಲಿಕೆ

blank

ಲವ್​​ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ಫೈಟರ್ ಸಾವು ಪ್ರಕರಣ ಸಂಬಂಧ ವಿಚಾರಣೆಗೂ ಮುಂಚೆಯೇ ನಟ ಅಜಯ್​ ರಾವ್ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ರಾಮನಗರ 3ನೇ ಹೆಚ್ಚುವರಿ ಸೆಷನ್ಸ್​ ಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಯಾಗಿದೆ. ಆಗಸ್ಟ್​​ 26ರಂದು ಅಜಯ್​ ರಾವ್​ ವಿಚಾರಣೆ ಎದುರಿಸಬೇಕಿತ್ತು. ಇನ್ನು ಶೂಟಿಂಗ್ ನಡೆಯುವ ಸ್ಥಳದಲ್ಲಿ ನಟ ಅಜಯ್​​ ರಾವ್ ಇದ್ದರು, ಈ ಹಿನ್ನೆಲೆ ವಿಚಾರಣೆಗೆ ಹಾಜರಾಗಲು ಅಜಯ್​​ ರಾವ್​ಗೆ ಸೂಚನೆ ನೀಡಲಾಗಿದೆ.

06. ‘ಪ್ರತಿ 100ಮೀಟರ್‌ಗೆ ಪಾರ್ಕಿಂಗ್​ ಬೋರ್ಡ್‌ ಹಾಕುವುದಿಲ್ಲ’

blank

ಬೆಂಗಳೂರಿನಲ್ಲಿರುವ ಎಲ್ಲಾ ಪಾರ್ಕಿಂಗ್ ಬೋರ್ಡ್ ಹೊರತುಪಡಿಸಿ.. ಉಳಿದಲ್ಲೆವೂ ನೋ ಪಾರ್ಕಿಂಗ್ ಅಂತಾನೆ ಲೆಕ್ಕಾ.. ಅಂತಾ ಸಂಚಾರಿ ಜಂಟಿ ಪೊಲೀಸ್‌ ಆಯುಕ್ತ ರವಿಕಾಂತೇಗೌಡ ಹೇಳಿದ್ದಾರೆ. ನೋ ಪಾರ್ಕಿಂಗ್ ಬೋರ್ಡ್ ಹಾಕಿಲ್ಲ ಅಂತಾ ವಾಹನ ನಿಲ್ಲಿಸಬಾರ್ದು. ಪಾರ್ಕಿಂಗ್ ಇದ್ರೆ ಅಲ್ಲಿ ಬೋರ್ಡ್ ಹಾಕಿರ್ತೀವಿ. ಇನ್ನು ಪ್ರತೀ ನೂರು ಮೀಟರ್​​ಗೂ ನೋ ಪಾರ್ಕಿಂಗ್ ಬೋರ್ಡ್ ಹಾಕೋಕಾಗಲ್ಲ. ಪಾರ್ಕಿಂಗ್ ಅಂತಾ ಬೋರ್ಡ್ ಇಲ್ಲ ಅಂದ್ರೆ ಅದು ನೋ ಪಾರ್ಕಿಂಗ್ ಅಂತಾನೇ ಅರ್ಥ ಎಂದಿದ್ದಾರೆ.

07. ಕೇಂದ್ರದ ನಗದೀಕರಣ ಯೋಜನೆ ವಿರುದ್ಧ ಕಿಡಿ

blank

ಕೇಂದ್ರದ ರಾಷ್ಟ್ರೀಯ ನಗದೀಕರಣ ಯೋಜನೆ ವಿರುದ್ಧ ರಾಹುಲ್​ ಗಾಂಧಿ ಕಿಡಿ ಕಾರಿದ್ದಾರೆ. ಬಿಜೆಪಿ ಸರ್ಕಾರ ಕಳೆದ 70 ವರ್ಷಗಳಲ್ಲಿ ಮಾಡಿದ ಎಲ್ಲಾ ಸ್ವತ್ತುಗಳನ್ನು ಪ್ರಧಾನ ಮಂತ್ರಿಯ ಕೈಗಾರಿಕೋದ್ಯಮಿ ಸ್ನೇಹಿತರಿಗೆ ಮಾರಾಟ ಮಾಡುತ್ತಿದೆ ಅಂತಾ ಆರೋಪಿಸಿದ್ದಾರೆ. ಕಳೆದ 70 ವರ್ಷಗಳಲ್ಲಿ ಏನೂ ಆಗಿಲ್ಲ ಎಂದು ಬಿಜೆಪಿ ಮತ್ತು ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ, ಹಣಕಾಸು ಸಚಿವರು ಕಳೆದ 70 ವರ್ಷಗಳಲ್ಲಿ ನಿರ್ಮಿಸಿದ ಸ್ವತ್ತುಗಳನ್ನು ಮಾರಲು ನಿರ್ಧರಿಸಿದ್ದಾರೆ. ಅಲ್ಲದೇ, ಬಿಜೆಪಿ ಸರ್ಕಾರದ ಖಾಸಗೀಕರಣ ಯೋಜನೆ ಪ್ರಮುಖ ಕ್ಷೇತ್ರಗಳಲ್ಲಿ ಏಕಸ್ವಾಮ್ಯವನ್ನು ಸೃಷ್ಟಿಸುವ ಗುರಿ ಹೊಂದಿದೆ ಎಂದು ಜರಿದಿದ್ದಾರೆ.

08. ‘ಕಾಶ್ಮೀರಕ್ಕಾಗಿ ನಮಗೆ ತಾಲಿಬಾನ್​ ನೆರವು ನೀಡಲಿದೆ’

blank

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪಕ್ಷದ ನಾಯಕಿ ನೀಲಂ ಇರ್ಶಾದ್ ಶೇಕ್, ವಿವಾದಾತ್ಮಕ ಹೇಳಿಕೆ ನೀಡಿದ್ದಾಳೆ. ಟಿವಿ ಕಾರ್ಯಕ್ರಮೊಂದರಲ್ಲಿ, ಕಾಶ್ಮೀರಕ್ಕಾಗಿ ಪಾಕಿಸ್ತಾನ ಸರ್ಕಾರ ತಾಲಿಬಾನ್ ನೆರವು ಪಡೆಯು ಬಗ್ಗೆ ಮಾತನಾಡಿರೋದಾಗಿ ಹೇಳಿದ್ದಾಳೆ. ಇನ್ನು ನೀಲಂ ಈ ರೀತಿ ಹೇಳುತ್ತಿದ್ದಂತೆ ಕಾರ್ಯಕ್ರಮದ ನಿರೂಪಕ ನೀಲಂರನ್ನು ಎಚ್ಚರಿಸಲು ಮುಂದಾಗಿದ್ದಾರೆ. ನೀವು ಏನ್ ಮಾತಾಡ್ತಿದ್ದೀರಾ ಗೊತ್ತಿದೆಯಾ? ಈ ಕಾರ್ಯಕ್ರಮ ವಿಶ್ವದಾದ್ಯಂತ ಪ್ರಸಾರವಾಗುತ್ತೆ. ಭಾರತೀಯರು ಕೂಡ ನಿಮ್ಮ ಮಾತುಗಳನ್ನ ಕೇಳ್ತಾರೆ ಅಂತಾ ಮನವರಿಕೆ ಮಾಡಿದ್ದಾರೆ. ಹೀಗಿದ್ದರೂ, ನೀಲಂ ತನ್ನ ಉದ್ಧಟತನದ ಮಾತುಗಳನ್ನ ಸಮರ್ಥಿಸಿಕೊಂಡಿದ್ದಾಳೆ.

09. ಕಾಬೂಲ್​ನಿಂದ ‘ಗುರು ಗ್ರಂಥ ಸಾಹೀಬ್’ ವಾಪಾಸ್

blank

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಉಗ್ರರು ಅಟ್ಟಹಾಸ ಮೆರೆಯುತ್ತಿರೋ ಹಿನ್ನೆಲೆ, ಅಫ್ಘಾನ್​ನಿಂದ ಭಾರತೀಯರನ್ನ ಕರೆತರಲಾಗ್ತಿದೆ. ಕಾಬೂಲ್​​​ನಿಂದ ಅಫ್ಘಾನ್​​ ಮೂಲದ ನೂರಾರು ಹಿಂದೂ ಮತ್ತು ಸಿಖ್ಖರು ಭಾರತ ವಾಯುಸೇನೆ ವಿಮಾನದಲ್ಲಿ ದೆಹಲಿಗೆ ಆಗಮಿಸಿದ್ದಾರೆ. ಈ ವೇಳೆ ಕಾಬೂಲ್​​ನಿಂದ ಭಾರತಕ್ಕೆ ವಾಪಾಸ್​ ತಂದ ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹೀಬ್​ಗೆ ಕೇಂದ್ರ ಸಚಿವ ಹರ್ದೀಪ್​​ ಸಿಂಗ್​​ ಪುರಿ ಮತ್ತು ವಿ. ಮುರಳೀಧರನ್ ಕೈಮುಗಿದು ಸ್ವಾಗತಿಸಿದ್ದಾರೆ.

10. ಹಲೋ ಮಾನವ.. ಮಾಸ್ಕ್‌ ಹಾಕುವುದು ಯಾವಾಗ?

blank

ನಮ್ಮ ಜನರಿಗೆ ಮಾಸ್ಕ್‌ ಹಾಕೊಳ್ಳಿ. ಕೊರೊನಾ ಓಡಿಸಿ ಅಂತ ಎಷ್ಟೇ ಹೇಳಿದ್ರೂ ಹಲವರು ಕ್ಯಾರೆ ಅಂತಿಲ್ಲ. ಈ ವಿಷ್ಯ ಒಂದು ಕೋತಿಗೂ ಗೊತ್ತಾಗಿತ್ತೇನೋ ಅನ್ಸುತ್ತೆ. ಹಾಗಾಗಿ.. ನಂಗೆ ಬೇರೆಯವರು ನೀತಿ ಪಾಠ ಮಾಡುವುದಕ್ಕೂ ಮೊದ್ಲೇ ಮಾಸ್ಕ್‌ ಹಾಕಿಕೊಂಡು ಬಿಡೋಣ ಅನ್ನೋ ರೀತಿ ಕೋತಿ ಮರಿಯೇ ಮಾಸ್ಕ್‌ನ ಹಾಕಿಕೊಂಡಿದೆ. ರಸ್ತೆ ಮೇಲೆ ಬಿದ್ದಿದ್ದ ಮಾಸ್ಕ್‌ ತೆಗೆದುಕೊಂಡ ಕೋತಿ ಮುಖಕ್ಕೆ ಧರಿಸಿ ಒಂದ್‌ ರೌಂಡ್‌ ಹಾಕಿದೆ. ಅಯ್ಯೋ ಮಾಸ್ಕ್‌ ಹಾಕಿಕೊಂಡ್ರೆ ಏನು ಕಾಣುತ್ತಿಲ್ವಲ್ಲಪ್ಪ ಅಂತಾ ಮತ್ತೆ ಮಾಸ್ಕ್ ತೆಗೆದಿದೆ.

Source: newsfirstlive.com Source link