ಭಾರೀ ಮಳೆಯಿಂದ ನಂದಿಬೆಟ್ಟದಲ್ಲಿ ಗುಡ್ಡ ಕುಸಿದು ಸಂಚಾರ ಸಂಪೂರ್ಣ ಸ್ಥಗಿತ

ಭಾರೀ ಮಳೆಯಿಂದ ನಂದಿಬೆಟ್ಟದಲ್ಲಿ ಗುಡ್ಡ ಕುಸಿದು ಸಂಚಾರ ಸಂಪೂರ್ಣ ಸ್ಥಗಿತ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಾದ ಭಾರೀ ಮಳೆಯಿಂದಾಗಿ, ನಂದಿಬೆಟ್ಟದ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದೆ. ನಂದಿಬೆಟ್ಟದಲ್ಲಿ ರಸ್ತೆಗೆ ಅಡ್ಡಲಾಗಿ ಮಣ್ಣು, ಕಲ್ಲು ಬಂಡೆ ಕುಸಿತವಾಗಿದ್ದು, ರಸ್ತೆ ಸಂಪೂರ್ಣ ಬಂದ್​ ಆಗಿದೆ.

blank

ಕಳೆದ ರಾತ್ರಿ ವಿಶ್ವವಿಖ್ಯಾತ ನಂದಿಗಿರಿಧಾಮದ ಬಳಿ ಧಾರಕಾರ ಮಳೆಯಾಗಿತ್ತು. ಭಾರೀ ಮಳೆಗೆ ನಂದಿಬೆಟ್ಟದ ಚೆಕ್ ಪೋಸ್ಟ್​ನ ಸ್ಬಲ್ಪ ದೂರದಲ್ಲೇ ರಸ್ತೆಗೆ ಅಡ್ಡಲಾಗಿ ಮಣ್ಣು ಬಂಡೆ ಉರುಳಿಬಿದ್ದಿದೆ. ಅಷ್ಟೇ ಅಲ್ಲದೇ, ಬೃಹತ್ ಕಲ್ಲು ಬಂಡೆಗಳ ಜೊತೆ ಮರ ಗಿಡಗಳು ಕುಸಿತವಾಗಿದ್ದು, ಪರಿಣಾಮ ವಿದ್ಯುತ್​ ಕಂಬಗಳು ನೆಲಕ್ಕುರುಳಿದೆ. ಹೀಗಾಗಿ, ನಂದಿಗಿರಿಧಾಮದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತವಾಗಿದ್ದು, ನಂದಿಬೆಟ್ಟಕ್ಕೆ ಹೋದ ಪ್ರವಾಸಿಗರನ್ನ ಚೆಕ್ ಪೋಸ್ಟ್ ನಿಂದಲೇ ಪೊಲೀಸರು ವಾಪಾಸ್​​ ಕಳುಹಿಸುತ್ತಿದ್ದಾರೆ.

Source: newsfirstlive.com Source link