ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ‘ಆಪರೇಷನ್​ ಹಸ್ತ’ ಜೋರು -ಮತ್ತಿಬ್ಬರು JDS ಶಾಸಕರು ‘ಕೈ’ ಹಿಡಿತಾರಾ?

ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ‘ಆಪರೇಷನ್​ ಹಸ್ತ’ ಜೋರು -ಮತ್ತಿಬ್ಬರು JDS ಶಾಸಕರು ‘ಕೈ’ ಹಿಡಿತಾರಾ?

ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯರ ತವರು ಜಿಲ್ಲೆಯಲ್ಲಿ ಆಪರೇಷನ್​ ಹಸ್ತ ಜೋರಾಗಿ ನಡೆಯುತ್ತಿದೆ. ಪ್ರಭಾವಿ ಒಕ್ಕಲಿಗ ನಾಯಕ ಜಿ.ಟಿ ದೇವೇಗೌಡಗೆ ಗಾಳ ಹಾಕುವಲ್ಲಿ ಕೈಪಡೆ ಯಶಸ್ವಿಯಾಗಿದೆ.

ಖುದ್ದು ಕಾಂಗ್ರೆಸ್ ಸೇರ್ಪಡೆಯನ್ನು ಜಿ.ಟಿ.ದೇವೇಗೌಡ ಬಹಿರಂಗವಾಗಿ ಘೋಷಿಸಿದ್ದಾರೆ. ಇದೀಗ ಜಿಟಿಡಿ ಬೆನ್ನಲ್ಲೇ ಮೈಸೂರಿನ ಮತ್ತಿಬ್ಬರು ಜೆಡಿಎಸ್​ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲು ತುದಿಗಾಲ ಮೇಲೆ ನಿಂತಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷದ ಕಾದವನ್ನು ಟಿ.ನರಸೀಪುರದ ಶಾಸಕ ಅಶ್ವಿನ್ ಹಾಗೂ ಪಿರಿಯಾಪಟ್ಟಣ ಶಾಸಕ ಮಹಾದೇವ್ ತಟ್ಟಿ ಎಂಬ ಮಾತು ಜಿಲ್ಲೆಯಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ. ಈ ಇಬ್ಬರೂ ಶಾಸಕರಿಗೆ ಕಾಂಗ್ರೆಸ್ ಸೇರಲು ಇನ್ನಿಲ್ಲದ ಉತ್ಸಾಹವಿದ್ದು, ಈಗಾಗಲೇ ಎರಡು ಸುತ್ತಿನ ಚರ್ಚೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ.

blank

ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೊತೆ ಉಭಯ ಶಾಸಕರು ಚರ್ಚಿಸಿದ್ದಾರೆ ಎನ್ನಲಾಗಿದ್ದು, ಆದರೆ ಈ ಇಬ್ಬರಿಗೆ ಕಾಂಗ್ರೆಸ್​ ಪಕ್ಷದಿಂದ ಟಿಕೆಟ್ ನೀಡುವ ಬಗ್ಗೆ ಇನ್ನೂ ಭರವಸೆ ಸಿಕ್ಕಲ್ಲವಂತೆ. ಟಿ.ನರಸೀಪುರದ ಮಾಜಿ ಶಾಸಕ ಹೆಚ್.ಸಿ ಮಹಾದೇವಪ್ಪ ಹಾಗೂ ಪಿರಿಯಾಪಟ್ಟಣದಲ್ಲಿ ವೆಂಕಟೇಶ್ ಕಾಂಗ್ರೆಸ್ ಪಕ್ಷದ ಟಿಕೆಟ್​​ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಈ ಇಬ್ಬರು ನಾಯಕರು ಜೆಡಿಎಸ್ ಎದುರು ಹೋರಾಟ ನಡೆಸಿ ಪರಾಭವ ಅನುಭವಿಸಿದ್ದರು. ಆದರೆ ಈ ಬಾರಿ ಮತ್ತೆ ಟಿಕೆಟ್​ನ್ನ ಉಭಯ ನಾಯಕರು ಬಯಸಿದ್ದಾರೆ. ಅದರಲ್ಲೂ ತಮ್ಮ ಪುತ್ರನಿಗೂ ಟಿಕೆಟ್ ಕೊಡಿಸಲು ಹೆಚ್.ಸಿ ಮಹಾದೇವಪ್ಪ ತೆರೆಮರೆಯಲ್ಲಿ ಪ್ರಯ್ನಿಸುತ್ತಿದ್ದಾರೆ ಎನ್ನಲಾಗಿದೆ. ಈ ಇಬ್ಬರೂ ಶಾಸಕರೂ ಕಾಂಗ್ರೆಸ್​ಗೆ ಸೇರಲು ಉತ್ಸುಕರಾಗಿದ್ದರೂ, ಆಯಾ ಕ್ಷೇತ್ರಗಳ ಮಾಜಿ ಶಾಸಕರು ಪ್ರಬಲ ನಾಯಕರಾಗಿರುವ ಕಾರಣ ಅಂತಿಮ ನಿರ್ಧಾರ ತಡವಾಗುತ್ತಿದೆ ಎನ್ನಲಾಗಿದೆ.

ವಿಷೇಶ ಬರಹ: ಹರೀಶ್​ ಕಾಕೋಳು, ಪೊಲಿಟಿಕಲ್ ಬ್ಯೂರೋ, ಬೆಂಗಳೂರು

Source: newsfirstlive.com Source link