ಶಾಲಾ ಆವರಣದಲ್ಲಿ ಯುವಕನ ಮೃತದೇಹ ಪತ್ತೆ.. ಇದು ಕೊಲೆಯೋ? ಆತ್ಮಹತ್ಯೆಯೋ?

ಶಾಲಾ ಆವರಣದಲ್ಲಿ ಯುವಕನ ಮೃತದೇಹ ಪತ್ತೆ.. ಇದು ಕೊಲೆಯೋ? ಆತ್ಮಹತ್ಯೆಯೋ?

ಕೊಪ್ಪಳ:  ಸರ್ಕಾರಿ ಶಾಲೆ ಆವರಣದಲ್ಲಿ ಯುವಕನ ಮೃತದೇಹ ಪತ್ತೆಯಾಗಿರುವ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಹಗೇದಾಳ ಗ್ರಾಮದಲ್ಲಿ ಘಟನೆ ನಡೆದಿದೆ.

ರಮೇಶ್​ ಯಂಕಪ್ಪ ಎಂಬ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯಾರೋ ಕೊಲೆ ಮಾಡಿ ಮೃತದೇಹವನ್ನು ನೇಣಿಗೆ ಹಾಕಿದ್ದಾರೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಚಳ್ಳೂರು-ಹಗೇದಾಳ ಗ್ರಾಮದ ಪ್ರೌಢ ಶಾಲೆಯಲ್ಲಿ ಯುವಕನ ಶವ ಪತ್ತೆಯಾಗಿದೆ. ವಿದ್ಯುತ್ ವೈರ್​​ನಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸದ್ಯ, ಸ್ಥಳಕ್ಕೆ 112 ವಾಹನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

blank

Source: newsfirstlive.com Source link