ಕಿಚ್ಚ ಸುದೀಪ್​ ಮುಂದಿನ ಸಿನಿಮಾ ಯಾವ್ದು? ಬಿಗ್​​ ಅಪ್ಡೇಟ್ ಕೊಟ್ಟ ಕಾಲಿವುಡ್​ ನಿರ್ದೇಶಕ

ಕಿಚ್ಚ ಸುದೀಪ್​ ಮುಂದಿನ ಸಿನಿಮಾ ಯಾವ್ದು? ಬಿಗ್​​ ಅಪ್ಡೇಟ್ ಕೊಟ್ಟ ಕಾಲಿವುಡ್​ ನಿರ್ದೇಶಕ

ಸ್ಯಾಂಡಲ್​ವುಡ್​ನ ಅಭಿನಯ ಚಕಕ್ರವರ್ತಿ ಕಿಚ್ಚ ಸುದೀಪ್​ ಸದ್ಯ ಕೋಟಿಗೊಬ್ಬ-3 ಮತ್ತು ವಿಕ್ರಾಂತ್ ರೋಣ ಸಿನಿಮಾದ ಚಿತ್ರೀಕರಣ ಫೂರ್ಣಗೊಳಿಸಿದ್ದಾರೆ. ಸುದೀಪ್​ ಅವರ ಕೊಟ್ಟಿಗೊಬ್ಬ-3 ಚಿತ್ರ ಅಕ್ಟೋಬರ್ 14ಕ್ಕೆ ತೆರೆ ಕಾಣಲಿದೆ ಎಂಬ ನಿರೀಕ್ಷೆ ಇದೆ. ಈ ನಡುವೆಯೇ ಕಿಚ್ಚನ ಮುಂದಿನ ಸಿನಿಮಾ ಯಾವುದು ಅಂತಾ ಅಭಿಮಾನಿಗಳು ಕಾತುರದಿಂದ ಕಾದು ಕುಳಿತ್ತಿದ್ದಾರೆ. ಈ ನಡುವೆಯೇ ಕಿಚ್ಚನ ಮುಂದಿನ ಸಿನಿಮಾದ ಬಗ್ಗೆ ಇಂಟ್ರಸ್ಟಿಂಗ್ ವಿಚಾರವೊಂದು ಹೊರಬಂದಿದೆ.

ಹೌದು, ಕಾಲಿವುಡ್​ನ ಖ್ಯಾತ ನಿರ್ದೇಶಕರಾದ ವೆಂಕಟ್​ ಪ್ರಭು ಇತ್ತೀಚಿಗಷ್ಟೇ ಕಿಚ್ಚನ ಮನೆಗೆ ಭೇಟಿ ನೀಡಿದ್ದರಿ. ಈ ವೇಳೆ ವೆಂಕಟ್​ ಪ್ರಭು ಅವರಿಗೆ ಕಿಚ್ಚ ಸುದೀಪ್​ ತಮ್ಮ ಕೈಯಾರೆ ಅಡುಗೆ ಮಾಡಿ ಬಡಿಸಿದ್ದಾರೆ.

ಸುದೀಪ್ ಅವರ ಆತಿಥ್ಯಕ್ಕೆ ವೆಂಕಟ್ ಪ್ರಭು ಫಿದಾ ಆಗಿದ್ದು, ಕಿಚ್ಚನ ಜೊತೆಗೆ ಇರುವ ಫೋಟೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು, ” ಎಂಥಹ ಅದ್ಭುತ ಆತಿಥ್ಯ… ಧನ್ಯವಾದಗಳು ಸುದೀಪ್​ಅವರೆ.. ನೀವು ಬಹಳ ಚೆನ್ನಾಗಿ ಅಡುಗೆ ಮಾಡ್ತಿರಾ.. ನಮ್ಮ ಮುಂದಿನ ಚಿತ್ರಕ್ಕಾಗಿ ಉತ್ಸುಕನಾಗಿದ್ದೇನೆ. ಆಡ್​ವಾನ್ಸ್​ ಹ್ಯಾಪಿ ಬರ್ತ್​ಡೇ ” ಎಂದು ಬರೆದುಕೊಂಡಿದ್ದಾರೆ.

ಸದ್ಯ ಕಿಚ್ಚ ಸುದೀಪ್​ ,​ ಕಾಲಿವುಡ್​ ನಿರ್ದೇಶಕ ವೆಂಕಟ್​ ಪ್ರಭು ಜೊತೆ ಮುಂದಿನ ಸಿನಿಮಾ ಮಾಡಲಿದ್ದಾರೆ ಎನ್ನುವುದು ಒಂದು ಮಟ್ಟಕ್ಕೆ ಕನ್​ರ್ಫಮ್​ ಅಗಿದೆ. ಇನ್ನು ಸುದೀಪ್ ಹುಟ್ಟುಹಬ್ಬದ ದಿನ ಇಬ್ಬರ ಕಾಂಬಿನೇಷನ್ ಸಿನಿಮಾದ ಬಗ್ಗೆ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.

Source: newsfirstlive.com Source link