ಮದ್ವೆ ವಾರ್ಷಿಕೋತ್ಸವದ ದಿನ ಮಗನ ಆಸೆ ಈಡೇರಿಸಿದ ಪ್ರಕಾಶ್ ರೈ

ಬೆಂಗಳೂರು: ಬುಹುಭಾಷಾ ನಟ ಪ್ರಕಾಶ್ ರೈ ತಮ್ಮ ಮಗನ ಆಸೆಯಂತೆ ವಾರ್ಷಿಕೋತ್ಸವದ ದಿನ ಮಕ್ಕಳ ಎದರುರಲ್ಲಿ ಮತ್ತೆ ಮದುವೆಯಾದೆ ಎಂದು ಹೇಳುವ ಮೂಲಕವಾಗಿ ಮತ್ತೆ ಸುದ್ದಿಯಾಗಿದ್ದಾರೆ.

ಈ ರಾತ್ರಿ ನನ್ನ ಮಗನಿಗಾಗಿ ಮತ್ತೆ ಮದುವೆಯಾದೆವು. ಮಗ ವೇದಾಂತ್ ತನ್ನ ಹೆತ್ತವರ ಮದುವೆಗೆ ಸಾಕ್ಷಿಯಾಗಲು ಬಯಸಿದನು ಮತ್ತು ಅದನ್ನೇ ವ್ಯಕ್ತಪಡಿಸಿದನು. ನಾವು ನಮ್ಮ ಮಕ್ಕಳ ಮುಂದೆ ಉಂಗುರ, ಮುತ್ತು ವಿನಿಮಯ ಮಾಡಿಕೊಂಡೆವು ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

ಪ್ರಕಾಶ್ ರೈ ಅವರು ಎರಡನೇ ಮದುವೆಯಾದ ವಿಷಯ ತುಂಬಾ ಹಳೆಯದು. ಮೊದಲ ಪತ್ನಿಯಿಂದ ದೂರಾಗಿ ರೈ ನಂತರ ಪೋನಿ ಅವರನ್ನು ವಿವಾಹವಾದರು. ಪೋನಿಯವರು ಬಾಲಿವುಡ್‍ನಲ್ಲಿ ಕೊರಿಯೋಗ್ರಾಫರ್ ಆಗಿದ್ದರು. ಈ ವೇಳೆ ಪ್ರಕಾಶ್ ರೈ, ಪೋನಿ ಅವರನ್ನು ಪ್ರೀತಿಸಿ ಮದುವೆಯಾದರು. ಈ ಜೋಡಿಗೆ ಮುದ್ದಾದ ಮಗನಿದ್ದಾನೆ. ನಿನ್ನೆ 11 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಮಗನ ಆಸೆಯಂತೆ ಮತ್ತೆ ಮದುವೆಯಾಗಿದ್ದಾರೆ.

ಪ್ರಕಾಶ್ ರೈ ಮಗ ವೇದಾಂತ್ ತನ್ನ ತಂದೆ ತಾಯಿಯರನ್ನು ತನ್ನ ಮುಂದೆ ಮದುವೆ ಮಾಡಿಕೊಳ್ಳುವುದನ್ನು ನೋಡಲು ಬಯಸಿದ್ದನು. ತಮ್ಮ 11 ನೇ ವಾರ್ಷಿಕೋತ್ಸವದಂದು, ಪ್ರಕಾಶ್ ರಾಜ್ ಮತ್ತು ಪೋನಿ ವರ್ಮಾ ಮತ್ತೊಮ್ಮೆ ವಿವಾಹವಾದರು. ಈ ಬಾರಿ, ಅದು ಅವರ ಮಕ್ಕಳ ಸಮ್ಮುಖದಲ್ಲಿ ಇದ್ದಿದ್ದರಿಂದ ಸಾಕಷ್ಟು ಭಿನ್ನವಾಗಿತ್ತು. ಅವರ ಮೊದಲ ಪತ್ನಿಯ ಮಕ್ಕಳಾದ ಮೇಘನಾ, ಪೂಜಾ ಕೂಡ ಹಾಜರಿದ್ದರು. ಇದನ್ನೂ ಓದಿ:  ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ನಟ ಪ್ರಕಾಶ್ ರೈ

blank

ಮದುವೆ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪತ್ನಿ ಜೊತೆಗಿನ ಮದುವೆ ಫೋಟೋ ಅಪ್ಲೋಡ್ ಮಾಡಿಕೊಂಡಿರುವ ಪ್ರಕಾಶ್ ರೈ, ಪತ್ನಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನನ್ನ ಜೀವನ ಪಯಣದಲ್ಲಿ ಒಬ್ಬ ಒಳ್ಳೆಯ ಗೆಳತಿ, ಪ್ರಿಯತಮೆ ಹಾಗೂ ಜೀವನದ ಸಹ ಪ್ರಯಾಣಿಕೆಯಾಗಿ ಇರುವುದಕ್ಕೆ ತುಂಬಾ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

Source: publictv.in Source link