ENG Vs IND: ಟೀಮ್​ ಇಂಡಿಯಾದ ಪ್ಲೇಯಿಂಗ್​ XI ಬದಲಾಗುತ್ತಾ? ತಂಡದಲ್ಲಿ ಯಾರು ಇನ್​​​, ಯಾರು ಔಟ್?

ENG Vs IND: ಟೀಮ್​ ಇಂಡಿಯಾದ ಪ್ಲೇಯಿಂಗ್​ XI ಬದಲಾಗುತ್ತಾ? ತಂಡದಲ್ಲಿ ಯಾರು ಇನ್​​​, ಯಾರು ಔಟ್?

ಇಂಗ್ಲೆಂಡ್​​ ತಂಡದಲ್ಲೇನೋ ಇಂದಿನ ಪಂದ್ಯಕ್ಕೆ ಬದಲಾವಣೆ ಖಚಿತವಾಗಿದೆ. ಇದರ ಜೊತೆಗೆ ಆದ್ರೆ, ಟೀಮ್​ ಇಂಡಿಯಾದ ಪ್ಲೇಯಿಂಗ್​ ಇಲೆವೆನ್​ ಬದಲಾಗುತ್ತಾ..? ಅನ್ನೋ ಚರ್ಚೆಯೂ ಎದ್ದಿದೆ. ಹಾಗಾದ್ರೆ ತಂಡದಲ್ಲಿ ಚೇಂಜಸ್​ ಆಗುತ್ತಾ..? ಆದ್ರೂ.. ಯಾರನ್ನ ಕೈ ಬಿಡಲು ಕೊಹ್ಲಿ ಮುಂದಾಗ್ತಾರೆ.?

ಸೇಡಿನ ಸಮರ ಹೆಡಿಂಗ್ಲಿ ಟೆಸ್ಟ್​ ಪಂದ್ಯಕ್ಕೆ ಮಾಸ್ಟರ್ ಪ್ಲಾನ್​ನೊಂದಿಗೆ ಉಭಯ ತಂಡಗಳು ಕಣಕ್ಕಿಳಿಯುತ್ತಿವೆ. ಆದ್ರೆ, ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಯ ಮುಂದೆ ಉತ್ತರ ಸಿಗದ ಬಹುದೊಡ್ಡ ಪ್ರಶ್ನೆಗಳೆ ಇವೆ. ಪ್ಲೇಯಿಂಗ್​ ಇಲೆವೆನ್​ ಆಯ್ಕೆಯೇ ಕೊಹ್ಲಿ ಪಾಲಿಗೆ ದೊಡ್ಡ ಕಗ್ಗಂಟಾಗಿ ಮಾರ್ಪಟ್ಟಿದೆ. ಇದೇ ತಂಡವನ್ನ ಮುಂದುವರೆಸಬೇಕಾ ಅಥವಾ ಕೆಲವರಿಗೆ ರೆಸ್ಟ್​ ನೀಡಬೇಕಾ ಅನ್ನೋ ಗೊಂದಲ ಮ್ಯಾನೇಜ್​ಮೆಂಟ್​ನಲ್ಲಿದೆ.

blank

ಸದ್ಯ ಮುಗಿದ 2 ಪಂದ್ಯಗಳಲ್ಲಿ ಟೀಮ್ ಇಂಡಿಯಾ, ಉತ್ತಮ ಪ್ರದರ್ಶನವನ್ನೇ ನೀಡಿದೆ. ಸಂಘಟಿತ ಹೋರಾಟದ ಕಾರಣ ಸರಣಿಯಲ್ಲಿ ಮುನ್ನಡೆಯನ್ನೂ ಸಾಧಿಸಿದೆ. ಆದ್ರೆ, ಕೆಲ ಆಟಗಾರರ ವೈಯಕ್ತಿಕ ಪ್ರದರ್ಶನದಿಂದ ಹಿನ್ನಡೆಯನ್ನೂ ಎದುರಿಸುತ್ತಿದೆ. ಹೀಗಾಗಿಯೇ ಲೀಡ್ಸ್​​ನಲ್ಲಿ ಕೆಲ ಬದಲಾವಣೆಗೊಳೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯುವ ಸಾಧ್ಯತೆ ಇದೆ.

ಸೂರ್ಯಕುಮಾರ್ ಮಾಡ್ತಾರಾ ಟೆಸ್ಟ್​ ಡೆಬ್ಯೂ?

blank

ಟೆಸ್ಟ್​ ಸ್ಪೆಷಲಿಸ್ಟ್​ ಪೂಜಾರ ಬದಲಿಗೆ ಸೂರ್ಯಕುಮಾರ್ ತಂಡದಲ್ಲಿ ಸ್ಥಾನ ಗಿಟ್ಟಿಸುವ ಸಾಧ್ಯತೆ ಇದೆ. ಇಂಗ್ಲೆಂಡ್​​ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರದ ಪೂಜಾರ, ಕಳೆದ 35 ಇನ್ನಿಂಗ್ಸ್​ಗಳಿಂದಲೂ ಹೇಳಿಕೊಳ್ಳುವಂತ ಪರ್ಫಾಮೆನ್ಸ್ ನೀಡಿಲ್ಲ.. ಹೀಗಾಗಿ 3ನೇ ಕ್ರಮಾಂಕದಲ್ಲಿ ಸಾಲಿಡ್ ಪರ್ಫಾಮೆನ್ಸ್​ ನೀಡ್ತಿರುವ ಸೂರ್ಯಕುಮಾರ್​ಗೆ ಚಾನ್ಸ್ ನೀಡೋ ಸಾಧ್ಯತೆ ಇದೆ. ಕಳೆದ ರಣಜಿ ಟೂರ್ನಿಯಲ್ಲಿ 69.75ರ ಸರಾಸರಿಯಲ್ಲಿ ಬ್ಯಾಟ್​​ ಬೀಸಿದ್ದಲ್ಲದೇ, ಫಸ್ಟ್​​ ಕ್ಲಾಸ್​ನಲ್ಲಿ 44.01ರ ಸರಾಸರಿಯನ್ನ ಸೂರ್ಯ ಹೊಂದಿದ್ದಾರೆ. ಹೀಗಾಗಿ ಪೂಜಾರಾಗೆ ವಿಶ್ರಾಂತಿ ನೀಡಿ ಸೂರ್ಯಗೆ ಅವಕಾಶ ನೀಡುವ ಸಾಧ್ಯತೆಯಿದೆ.

ಜಡೇಜಾ ಅಥವಾ ಕೇರಂ ಸ್ಪಿನ್ನರ್​ ಅಶ್ವಿನ್..?

blank

ಲೆಫ್ಟ್​ ಆರ್ಮ್ ಸ್ಪಿನ್ನರ್ ರವೀಂದ್ರ ಜಡೇಜಾ, ಬ್ಯಾಟಿಂಗ್​ನಲ್ಲಿ ಭರವಸೆ ಮೂಡಿಸಿದ್ರೂ, ಬೌಲಿಂಗ್​ನಲ್ಲಿ 2 ಪಂದ್ಯಗಳಿಂದ ನಿರಾಸೆ ಮೂಡಿಸಿದ್ದಾರೆ. 44 ಓವರ್​ ಬೌಲಿಂಗ್ ಮಾಡಿ ಒಂದೇ ಒಂದು ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಅಶ್ವಿನ್​ಗೆ ಚಾನ್ಸ್ ನೀಡುವ ಎಲ್ಲಾ ಸಾಧ್ಯತೆ ಇದೆ. 4 ಹಾಗೂ 5ನೇ ದಿನದಾಟ ಸ್ಪಿನ್ನರ್​ಗಳ ಪಾತ್ರ ಬಹುಮುಖ್ಯ ಎಂದೇ ಹೇಳಲಾಗ್ತಿದೆ. ಜೊತೆಗೆ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳು ಕೂಡ ಅಶ್ವಿನ್ ಎದುರು ಪರದಾಟ ನಡೆಸಿದ್ದಾರೆ. ಕೌಂಟಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿರುವುದರಿಂದ ಸ್ಪಿನ್ ಸ್ಪೆಷಲಿಸ್ಟ್​ನ ಪ್ರಯೋಗಿಸುವ ಇರಾದೆ, ಟೀಮ್ ಮ್ಯಾನೇಜ್​ಮೆಂಟ್​ನದ್ದಾಗಿದೆ.

ಇಶಾಂತ್ ಬದಲಿಗೆ ಶಾರ್ದೂಲ್​ಗೆ ನೀಡ್ತಾರಾ ಚಾನ್ಸ್..?

ಮೊದಲ ಪಂದ್ಯ ಬೆಂಚ್ ಕಾದಿದ್ದ ಅನುಭವಿ ಇಶಾಂತ್​ಗೆ ಮತ್ತೆ ಬೆಂಚ್ ಕಾಯುವ ಪರಿಸ್ಥಿತಿ ಎದುರಾಗಿದೆ. ಲಾರ್ಡ್ಸ್​ ಟೆಸ್ಟ್​ನಲ್ಲಿ ನೀಡಿದ ಉತ್ತಮ ಪ್ರದರ್ಶನದ ಹೊರತಾಗಿ ಹೊರಗುಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಡೇಜಾಗೆ ಬೆಂಚ್ ಕಾಯಿಸಿದರೆ, ಬ್ಯಾಟಿಂಗ್ ವಿಭಾಗಕ್ಕೆ ಕೊಂಚ ಹಿನ್ನಡೆ ಅನುಭವಿಸಲಿದೆ. ಹೀಗಾಗಿ ತಂಡದಲ್ಲಿ ಸಮತೋಲನ ಕಾಯ್ದುಕೊಳ್ಳುವ ಜೊತೆಗೆ ಬ್ಯಾಟಿಂಗ್​​ ವಿಭಾಗಕ್ಕೆ ಬಲ ತುಂಬಲು ಶಾರ್ದೂಲ್​ ಠಾಕೂರ್​ರನ್ನ ಇನ್​ ಮಾಡುವ ಸಾಧ್ಯತೆಯೂ ದಟ್ಟವಾಗಿದೆ. ಆದ್ರೆ, ಹೆಡಿಂಗ್ಲಿ ಪಿಚ್ ವೇಗಿಗಳಿಗೆ ಹೆಚ್ಚು ಸಹಕಾರಿ ಕಾರಣ ಮ್ಯಾನೇಜ್​ಮೆಂಟ್ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

Source: newsfirstlive.com Source link