BigBreaking: ಮತ್ತೊಂದು ಬಾರಿ ಮದುವೆಯಾದ ಬಹುಭಾಷಾ ನಟ ಪ್ರಕಾಶ್ ರೈ

BigBreaking: ಮತ್ತೊಂದು ಬಾರಿ ಮದುವೆಯಾದ ಬಹುಭಾಷಾ ನಟ ಪ್ರಕಾಶ್ ರೈ

ಇಂದು ಬಹುಭಾಷಾ ನಟ ಪ್ರಕಾಶ್ ರೈಗೆ ಸ್ಪೆಷಲ್​ ಡೇ.. ಈ ಸ್ಪೆಷಲ್​ ಡೇ ನೆನಪಿಗಾಗಿ ಅವರು ಮತ್ತೊಮ್ಮೆ ಮದುವೆಯಾಗಿದ್ದಾರೆ. ಅರೆ ಇದೇನಿದು.. ಪ್ರಕಾಶ್ ರೈ ಮತ್ತೆ ಮದುವೆಯಾದ್ರಾ? ಅಂತ ಉದ್ಘಾರ ತೆಗೆಯೋ ಮೊದಲೇ ಹೇಳಿ ಬಿಡ್ತೀವಿ.. ಹೌದು.. ಅವರು ಇನ್ನೊಂದು ಬಾರಿ ಮದುವೆಯಾಗಿದ್ದಾರೆ.. ಅದ್ರೆ ಅಲ್ಲೇ ಇರೋದು ಟ್ವಿಸ್ಟ್ ನೋಡಿ.. ಯಾಕಂದ್ರೆ ಅವರು ಈಗ ಮತ್ತೊಮ್ಮೆ ಮದುವೆಯಾಗಿರೋದು ಕೂಡ ತಮ್ಮ ಪತ್ನಿ ಪೋನಿ ವರ್ಮಾ ಅವರನ್ನೇ..!

blank

ಯೆಸ್​ ವಿಶೇಷ ಏನಂದ್ರೆ, ಇಂದು ಅವರ 11ನೇ ಮ್ಯಾರಿಯೇಜ್ ಅನಿವರ್ಸರಿ. 2010, ಆಗಸ್ಟ್ 24ರಂದು ಅವರು ಕೊರಿಯೋಗ್ರಾಫರ್ ಪೋನಿ ವರ್ಮಾ ಅವರನ್ನ ಮದುವೆಯಾಗಿದ್ರು. ಇದು ಅವರ ಎರಡನೇ ಮದುವೆ. ಮೊದಲು ಅವರು ನಟಿ ಲಲಿತಾ ಕುಮಾರಿ ಅವರನ್ನ 1994ರಲ್ಲಿ ಮದುವೆಯಾಗಿದ್ರು. ಬಳಿಕ 2009ರಲ್ಲಿ ಅವರಿಗೆ ವಿಚ್ಛೇದನ ನೀಡಿ, ತಮಗಿಂತ 13 ವರ್ಷ ಚಿಕ್ಕವರಾದ ಪೋನಿ ವರ್ಮಾ ಅವರನ್ನ ಮದುವೆಯಾಗಿದ್ರು.. ಈಗ ಮತ್ತೊಮ್ಮೆ ಪೋನಿ ವರ್ಮಾ ಅವರನ್ನೇ ಪ್ರಕಾಶ್ ರೈ ಮದುವೆಯಾಗಿದ್ದಾರೆ..!

blank

ಅಷ್ಟಕ್ಕೂ ಪ್ರಕಾಶ್ ರೈ ತಮ್ಮ ಪತ್ನಿಯನ್ನೇ ಮತ್ತೊಮ್ಮೆ ಯಾಕೆ ಮದುವೆಯಾದ್ರು? ಅಂತಾ ಕೇಳ್ತಿದ್ದೀರಾ? ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಅವರಿಗೆ ವೇದಾಂತ್ ಅಂತ ಮಗ ಇದ್ದಾನೆ. ಮಗನಿಗೆ ಮತ್ತೊಮ್ಮೆ ತಮ್ಮ ಅಪ್ಪ-ಅಮ್ಮ ಮದುವೆಯಾಗೋದನ್ನ ನೋಡಬೇಕು ಅಂತಾ ಆಸೆ ಆಗಿತ್ತಂತೆ. ಹೀಗಾಗಿಯೇ ಪುತ್ರನ ಆಸೆ ಈಡೇರಿಕೆಗಾಗಿ, ಪರಸ್ಪರ ತುಟಿಗೆ ಮುತ್ತನ್ನು ವಿನಿಮಯ ಮಾಡಿಕೊಳ್ಳುವುದರ ಮೂಲಕ ಪುತ್ರನ ಮುಂದೆ ಮದುವೆ ಮಾಡಿಕೊಂಡಿದ್ದಾರೆ.

blank

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದು ನಾವು ಮತ್ತೊಮ್ಮೆ ಮದುವೆಯಾಗಿದ್ದೇವೆ. ನಮ್ಮ ಪುತ್ರ ವೇದಾಂತ್, ಇದಕ್ಕೆ ಸಾಕ್ಷಿಯಾಗಲು ಬಯಸಿದ್ದ ಅಂತಾ ಹೇಳಿದ್ದಾರೆ.

ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಅವರು, ಥ್ಯಾಂಕ್ಯೂ ಮೈ ಡಿಯರ್ ವೈಫ್ ಅಂತಾ ಕೂಡ ತಮ್ಮ ಪತ್ನಿಗೆ ಧನ್ಯವಾದ ತಿಳಿಸಿದ್ರು.

Source: newsfirstlive.com Source link