ENG Vs IND: ಭಾರತದ ಜಯದ ಓಟಕ್ಕೆ ಕಡಿವಾಣ ಹಾಕ್ತಾರಾ ರೂಟ್​​-ಬೈರ್​​ಸ್ಟೋ?

ENG Vs IND: ಭಾರತದ ಜಯದ ಓಟಕ್ಕೆ ಕಡಿವಾಣ ಹಾಕ್ತಾರಾ ರೂಟ್​​-ಬೈರ್​​ಸ್ಟೋ?

ಲಾರ್ಡ್ಸ್​​​ ಟೆಸ್ಟ್​​​ ಗೆಲುವಿನ ಬಳಿಕ ಹೆಚ್ಚು ಆತ್ಮವಿಶ್ವಾಸದಲ್ಲಿರುವ ಭಾರತ, ಇದೀಗ ಲೀಡ್ಸ್​​​​ ಪಂದ್ಯದಲ್ಲೈ ಜಯಭೇರಿ ಬಾರಿಸುವ ವಿಶ್ವಾಸದಲ್ಲಿದೆ. ಆದ್ರೆ, ಈ ಮೂವರನ್ನ ಕಟ್ಟಿ ಹಾಕದಿದ್ರೆ, ಭಾರತಕ್ಕೆ ಹಿನ್ನಡೆ ಖಚಿತವಾಗಿದೆ. ಟೀಮ್​ ಇಂಡಿಯಾವನ್ನ ಕಾಡಲಿರೋ ಆ ಮೂವರು ಆಂಗ್ಲರು ಯಾರು..? ಇಲ್ಲಿದೆ ನೋಡಿ ಡಿಟೇಲ್ಸ್​

ಇಂಡೋ-ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​ ರೋಚಕತೆಗೆ ತಿರುಗಿದೆ. ಮೊದಲ ಪಂದ್ಯ ಡ್ರಾ ಸಾಧಿಸಿದ ಬಳಿಕ, ಐತಿಹಾಸಿಕ ಲಾರ್ಡ್ಸ್​​​ ಟೆಸ್ಟ್​​​​ನಲ್ಲಿ ಭಾರತ ಗೆದ್ದು ಬೀಗಿದೆ. ಇದೀಗ ಈ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸಲು ರಣತಂತ್ರ ಹಾಕಿಕೊಂಡಿದೆ. ಆದರೆ ಡ್ರಾ ಮಾಡಿಕೊಳ್ಳಬೇಕಾದ ಪಂದ್ಯವನ್ನ ಸೋತು ಅಪಮಾನಕ್ಕೆ ಒಳಗಾಗಿರುವ ಇಂಗ್ಲೆಂಡ್​, ಲೀಡ್ಸ್​​​​ನಲ್ಲಿ ಭಾರತವನ್ನ ಮಣಿಸಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಅದಕ್ಕೆ ಇಂಗ್ಲೆಂಡ್​ ಹಲವು ರೂಪುರೇಶೆಗಳನ್ನು ಸಿದ್ಧಪಡಿಸಿಕೊಂಡಿದೆ. ಅದರಲ್ಲೂ ಇಂಗ್ಲೆಂಡ್​​​​​​​ ಈ ಮೂವರಂತೂ ಟೀಮ್​ ಇಂಡಿಯಾಗೆ ವಿಲನ್ಸ್​​ ಆಗಿ ಮಾರ್ಪಟ್ಟಿದ್ದಾರೆ.

ಇಂಗ್ಲೆಂಡ್​​ ರನ್​ಮೆಷಿನ್​ ಜೋ ರೂಟ್​​, ಜಾನಿ ಬೈರ್​ಸ್ಟೋ ಮತ್ತು ಬೌಲಿಂಗ್​​ನಲ್ಲಿ ಮೊನಚಿನ ದಾಳಿ ನಡೆಸುವ ಜೇಮ್ಸ್​​ ಆ್ಯಂಡರ್​ಸನ್​..! ಇವರೇ ಭಾರತಕ್ಕೆ ಕಂಟಕವಾಗಿರುವ ಮೇನ್​​ ವಿಲನ್ಸ್​​. ಮೊದಲೆರಡು​​ ಪಂದ್ಯದಲ್ಲಿ ವಿರಾಟ್​ ಪಡೆಯನ್ನ ಹೆಚ್ಚು ಕಾಡಿದ್ದ ಇವರು, ಲೀಡ್ಸ್​​​ ಟೆಸ್ಟ್​​​​ನಲ್ಲೂ ಅಪಾಯದ ಸೂಚನೆ ನೀಡಿದ್ದಾರೆ. ಏಕೆಂದರೆ ರೂಟ್​ ಮತ್ತು ಬೈರ್​​ಸ್ಟೋಗೆ ಲೀಡ್ಸ್​ ಹೋಮ್​​​ ಪಿಚ್.

ಟೀಮ್​ ಇಂಡಿಯಾಗೆ ಬೆಂಬಿಡದೆ ಕಾಡ್ತಿದ್ದಾರೆ ರೂಟ್​.!
ವಿರಾಟ್​​ ಸೇನೆಗೆ ಮೇನ್​ ವಿಲನ್​ ಆಗಿರೋದು ಅಂದರೆ ಜೋ ರೂಟ್​. ಅದಕ್ಕೆ ರೂಟ್​​​ ರೆಡ್​​ಹಾಟ್​ ಫಾರ್ಮ್​​​ನಲ್ಲಿ ಇರೋದೇ ಕಾರಣ. ಫೆಬ್ರುವರಿಯಲ್ಲಿ ನಡೆದ ಭಾರತ-ಇಂಗ್ಲೆಂಡ್​ ಸರಣಿಯಲ್ಲೂ ರೂಟ್​ ಅದ್ಭುತ ಪ್ರದರ್ಶನ ತೋರಿದ್ರು. ಇದೀಗ ನಾಟಿಂಗ್​ಹ್ಯಾಮ್​, ಲಾರ್ಡ್ಸ್​​​ನಲ್ಲಿ ನಡೆದ 2 ಪಂದ್ಯದಲ್ಲಿ 2 ಶತಕ ಮತ್ತು ಒಂದು ಅರ್ಧಶತಕ ಸಿಡಿಸಿದ್ದಾರೆ. ರೂಟ್​ರ ಈ ರೆಡ್​ ಹಾಟ್​ ಫಾರ್ಮ್​​, ಭಾರತಕ್ಕೆ ಸವಾಲಾಗಿದೆ.

ಇನ್ನು ರೂಟ್​​​ಗೆ ಲೀಡ್ಸ್ ತವರಿನ ಪಿಚ್​​ ಆಗಿರೋದು 3ನೇ ಟೆಸ್ಟ್​​ನಲ್ಲಿ ಅಡ್ವಾಂಟೇಜ್​ ಆಗಿ ಮಾರ್ಪಟ್ಟಿದೆ. ಹೀಗಾಗಿ ಅವರ​​ ವಿಕೆಟ್​​ಗಾಗಿ ಭಾರತ ರಣತಂತ್ರ ರೂಪಿಸೋದು ಅನಿವಾರ್ಯವಾಗಿದೆ. ಮೊದಲೆರಡು ಪಂದ್ಯಗಳಲ್ಲೇ ರೂಟ್​ ವಿಕೆಟ್​ಗಾಗಿ ಭಾರತದ ಬೌಲರ್​​​ಗಳು ಪರದಾಡಿದ್ದಾರೆ. ಹೀಗಾಗಿ ತವರಿನ ಪಿಚ್​ ಲಾಭ ಪಡೆಯೋ ರೂಟ್​ ಮತ್ತೆ ಕಾಟ ನೀಡೋದು ಖಚಿತ ಎಂದು ಹೇಳಲಾಗ್ತಿದೆ.

ಪ್ರಸ್ತುತ ಸರಣಿಯಲ್ಲಿ ರೂಟ್​ ಪ್ರದರ್ಶನ
ಪ್ರಸ್ತುತ ಸರಣಿಯ ಮೊದಲೆರಡು ಟೆಸ್ಟ್​ಗಳ 4 ಇನ್ನಿಂಗ್ಸ್​​​ನಲ್ಲಿ ಜೋ ರೂಟ್​ ಕಲೆ ಹಾಕಿರೋದು 386 ರನ್​. 2 ಶತಕದ ಜೊತೆಗೆ ಒಂದು ಅರ್ಧಶತಕ ಕೂಡ ಸಿಡಿಸಿರುವ ರೂಟ್​ರ ಸರಾಸರಿ ಬರೋಬ್ಬರಿ 128.67 ಆಗಿದೆ.

ತವರಿನ ಲಾಭದ ನಿರೀಕ್ಷೆಯಲ್ಲಿ ಜಾನಿ ಬೈರ್​​ಸ್ಟೋ.!
ರೂಟ್​​​ಗೆ​ ಮಾತ್ರವಲ್ಲ, ಜಾನಿ ಬೈರ್​​ಸ್ಟೋಗೂ ಲೀಡ್ಸ್​​​ ಹೋಮ್​ ಪಿಚ್​​ ಆಗಿದೆ. ಹೀಗಾಗಿ ತವರಿನ ಲಾಭದ ನಿರೀಕ್ಷೆಯಲ್ಲಿದ್ದು, ಭಾರತಕ್ಕೆ ಹೊಸ ಚಾಲೆಂಜ್​ ಎಸೆದಿದ್ದಾರೆ. ಸರಣಿಯಲ್ಲಿ ಬೈರ್​​​​ಸ್ಟೋ ಕೂಡ ಉತ್ತಮ ಪ್ರದರ್ಶನ ನೀಡಿದ್ದು, ಲೀಡ್ಸ್​​​​ನಲ್ಲೂ ಭಾರತಕ್ಕೆ ವಿಲನ್​ ಆಗುವ ಸಾಧ್ಯತೆ ಇದೆ. ಸದ್ಯ 4 ಇನ್ನಿಂಗ್ಸ್​​ಗಳಲ್ಲಿ 29.50ರ ಸರಾಸರಿಯಲ್ಲಿ 118 ರನ್​ ಸಿಡಿಸಿ, ಒಂದು ಅರ್ಧಶತಕ ಬಾರಿಸಿದ್ದಾರೆ. ಹಾಗಾಗಿ ಟೀಮ್​ ಇಂಡಿಯಾ ಬೌಲರ್​ಗಳು ಬೇರ್​​​ಸ್ಟೋ ಎದುರು ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.

ಭಾರತದ ಜಯದ ಓಟಕ್ಕೆ ಕಡಿವಾಣ ಹಾಕ್ತಾರಾ ಆ್ಯಂಡರ್​​ಸನ್​​.?
40ರ ಹರೆಯದಲ್ಲೂ ಯುವ ಕ್ರಿಕೆಟಿಗನಂತೆ ದಾಳಿ ನಡೆಸುವ ಜೇಮ್ಸ್​​ ಆ್ಯಂಡರ್​ಸನ್​, ಮಾರಕ ಬೌಲಿಂಗ್​​​ ನಡೆಸೋಕೆ ಭರ್ಜರಿ ಪ್ಲಾನ್​​ ಹಾಕಿಕೊಂಡಿದ್ದಾರೆ. ಎರಡು ಟೆಸ್ಟ್​​ಗಳಲ್ಲಿ ಭಾರತಕ್ಕೆ ಕಂಟಕವಾಗಿದ್ದ ಆ್ಯಂಡರ್​​ಸನ್, ಮತ್ತೆ ವಿಕೆಟ್​ ಬೇಟೆ ಮುಂದುವರಿಸೋಕೆ ಪಕ್ಕಾ ಪ್ರಿಪರೇಷನ್​ ಮಾಡಿಕೊಂಡಿದ್ದಾರೆ. 2 ಪಂದ್ಯಗಳಲ್ಲಿ 9 ವಿಕೆಟ್​ ಪಡೆದಿರೋ ಆ್ಯಂಡರ್ಸನ್​ ಲೀಡ್ಸ್​​ನಲ್ಲೂ ಭಾರತಕ್ಕೆ ಅಪಾಯವೇ ಆಗಿದ್ದಾರೆ. ಲೀಡ್ಸ್​​​ ಪಿಚ್​​​ನಲ್ಲಿ ತನ್ನ ಡೇಂಜರಸ್ ಬೌಲಿಂಗ್​ ಮೂಲಕ ಅದ್ಭುತ ಸಾಧನೆ ಮಾಡಿರೋದೆ ಅದಕ್ಕೆ ಕಾರಣ.

ಲೀಡ್ಸ್​​​ನಲ್ಲಿ ಆ್ಯಂಡರ್ಸನ್​ ಪ್ರದರ್ಶನ
ಲೀಡ್ಸ್​ ಮೈದಾನದಲ್ಲಿ ಈವರೆಗೆ 18 ಇನ್ನಿಂಗ್ಸ್​ಗಳಲ್ಲಿ ಬೌಲಿಂಗ್​ ಮಾಡಿರುವ ಆ್ಯಂಡರ್ಸನ್​ 39 ವಿಕೆಟ್​​ ಕಬಳಿಸಿದ್ದಾರೆ.16 ರನ್​ ನೀಡಿ 5 ವಿಕೆಟ್​​​ ಕಬಳಿಸಿದ ಬೆಸ್ಟ್​ ಸಾಧನೆಯನ್ನ ಹೊಂದಿರುವ ರೂಟ್​​, 3.00ರ ಎಕಾನಮಿಯಲ್ಲಿ ರನ್​ ಬಿಟ್ಟು ಕೊಟ್ಟಿದ್ದಾರೆ.

ಎಲ್ಲಾ ಅಂಕಿ-ಅಂಶಗಳು ಈ ಮೂವರು ಭಾರತಕ್ಕೆ ವಿಲನ್​ ಅನ್ನೋದನ್ನ ಸ್ಪಷ್ಟವಾಗೇ ಹೇಳ್ತಿವೆ. ಇದರ ಜೊತೆಗೆ ಭಾರತವನ್ನ ಸೋಲಿಸೋಕೆ ಇಂಗ್ಲೆಂಡ್​​ ಹಲ ರಣರಂತ್ರಗಳೊಂದಿಗೂ ಕಣಕ್ಕಿಳಿಯಲಿದೆ. ಹಾಗಾಗಿ ವಿರಾಟ್​ ಪಡೆ, ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ.

Source: newsfirstlive.com Source link