ಈ ವರ್ಷ RRR ಸಿನಿಮಾ ಬರೋದು ಡೌಟಾ..? KGF ನಡೆಯನ್ನ ಫಾಲೋ ಮಾಡುತ್ತಾ RRR..?

ಈ ವರ್ಷ RRR ಸಿನಿಮಾ ಬರೋದು ಡೌಟಾ..? KGF ನಡೆಯನ್ನ ಫಾಲೋ ಮಾಡುತ್ತಾ RRR..?

ಮೊನ್ನೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ರಿಲೀಸ್ ಡೇಟ್​​ 8 ತಿಂಗಳು ಮುಂದೆ ಹೋದಾಗ ಎಲ್ಲರೂ ಅಚ್ಚರಿ ಪಟ್ರು.. ಅರೇ ಇಷ್ಟು ಲೇಟಾ ? ಅಂತೆಲ್ಲ ಮಾತನಾಡಿಕೊಂಡ್ರು.. ಆದ್ರೆ ರಾಕಿ ಭಾಯ್ ಹೆಜ್ಜೆಯಲ್ಲಿ ಒಂದು ಗೆಲುವಿನ ಲೆಕ್ಕವಿದೆ, ದೂರದೃಷ್ಟಿ ಇದೆ.. ಈಗ ಕೆಜಿಎಫ್ ತಂಡ ದಾರಿಯನ್ನ ಥ್ರಿಬಲ್ ಆರ್ ಸಿನಿಮಾ ತಂಡ ಹಿಂಬಾಲಿಸುತ್ತಿದೆ.

blank

ಸದ್ಯಕ್ಕಂತು ಸಿನಿಮಾ ರಂಗಕ್ಕೆ ಇದು ಗ್ರಹಣ ಕಾಲ.. ಅದ್ರಲೂ ಥಿಯೇಟರ್​ನ ಸಿಲ್ವರ್ ಸ್ಕ್ರೀನ್​​ಗಂತು ಇದು ಕಗ್ಗತ್ತಲ ಕಾಲ.. ವಾಯುಮಾಲಿನ್ಯವಾಗಿ ವಾತವಾರಣ ಕಲುಶಿಥವಾದಂತೆ ಸಿನಿಮಾ ರಂಗ ಪಾಡಾಗಿದೆ.. ಮತ್ತೆ ಥಿಯೇಟರ್​​ಗಳಿಗೆ ಪ್ರೇಕ್ಷಕರು ಬಂದು ಸಿನಿಮಾ ಹಬ್ಬ ಮಾಡಬೇಕೆಂದ್ರೆ ನೋಡುವಂತ, ನಿರೀಕ್ಷಿ ಮಾಡಿದಂತ ದೊಡ್ಡ ದೊಡ್ಡ ಸಿನಿಮಾಗಳು ಬರಬೇಕು ಅಂತ ಸಿನಿಮಾ ಪಂಡಿತರು ಭವಿಷ್ಯ ನುಡಿತಾರೆ.. ಆದ್ರೆ ದೊಡ್ಡ ಸಿನಿಮಾಗಳು ರಿಲೀಸ್​​ಗೆ​ ಮುಂದೆ ಬರಬೇಕಲ್ವಾ..? ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳೆಲ್ಲ ಒಂದೆಜ್ಜೆ ಮುಂದೆ ಬರೋ ಬದ್ಲು ಹತ್ತು ಹೆಜ್ಜೆ ಹಿಂದೆ ಹೋಗ್ತಿದ್ದಾವೆ

 KGF ಮುಂದೆ.. ಉಳಿದವರು ರಾಕಿ ಭಾಯ್​​​ ಹಿಂದೆ

ಭಾರತೀಯ ಚಿತ್ರರಂಗದ ದಕ್ಷಿಣದ ಎರಡು ನಿರೀಕ್ಷಿತ ಸಿನಿಮಾಗಳು ಕೆಜಿಎಫ್ ಚಾಪ್ಟರ್ 2 ಹಾಗೂ ರಣ ರೌದ್ರ ರುಧಿರ.. ಈ ಎರಡು ಸಿನಿಮಾಗಳು ತೆರೆಯನ್ನ ಬೆಳಗ ಬೇಕು ಆ ಬೆಳ್ಳಿ ಬೆಳಕನಲ್ಲಿ ಜನ ಮನ ಕುಣಿದು ಕುಪ್ಪಳಿಸ ಬೇಕು ಅನ್ನೋದು ಸಮಸ್ತ ಚಿತ್ರಪ್ರೇಮಿಗಳ ಆಶಯ.. ಈ ಎರಡು ಸಿನಿಮಾಳೇ ಥಿಯೇಟರ್​​​ಗೆ ಜನರನ್ನ ಕರೆದುಕೊಂಡು ಬರಲು ಸಾಧ್ಯ ಅನ್ನೋ ಅಂದಾಜಿದೆ.. ಆದ್ರೆ ಈ ಅಂದದ ಅಂದಾಜಿಗೆ ಸದ್ಯ ತಣ್ಣಿರು ಬಿಳುವಂತೆ ಸಂಭವ ಕಾಣುತ್ತಿದೆ.. ಈ ವರ್ಷ ನಾವು ಬರಲ್ಲ ಮುಂದಿನ ವರ್ಷದ್ ಏಪ್ರಿಲ್ 14 ಖಂಡಿತ ನಿಮ್ಮ ಮುಂದೆ ಬರ್ತಿವಿ ಕಾಯತ್ತಿರೀ ಎಂದು ಕೆಜಿಎಫ್ ಸಿನಿಮಾ ಪಡೆ ಘೋಷಣೆ ಮಾಡಿದೆ. ಈಗ ಕೆಜಿಎಫ್ ದಾರಿಯನ್ನ ರಾಜಮೌಳಿಯವರ ಥ್ರಿಬಲ್ ಆರ್ ತಂಡ ಹಿಡಿಯುವ ಸೂಚನೆ ಸಿಕ್ತಿದೆ..

ಈ ವರ್ಷ RRR ಸಿನಿಮಾ ಬರೋದು ಡೌಟಾ..?
KGF ನಡೆಯನ್ನ ಫಾಲೋ ಮಾಡುತ್ತಾ RRR..?
ಅದ್ಯಾಕೆ ಈ ವರ್ಷ RRR ಬರೋದು ಡೌಟ್​​​​..?

ಕೆಜಿಎಫ್ ಚಾಪ್ಟರ್ 2 ಈ ವರ್ಷ ಬರ್ತಿಲ್ಲ.. ಆದ್ರೆ ಮೇಕಿಂಗ್ ಟ್ರೈಲರ್ , ಸಾಂಗ್ಸ್ , ಡಿಫರೆಂಟ್ ಪೋಸ್ಟರ್ , ಶೂಟಿಂಗ್ ಝಲಕ್ ಅಪ್​ಡೇಟ್ಸ್​​ಗಳನ್ನ ಕೊಡುತ್ತಾ ನಾವು ಅಕ್ಟೋಬರ್ 13 ನೇ ತಾರೀಖ್ ಬಂದೇ ಬಿಡ್ತಿವಿ ನಮ್ಮ ಕಂಟೆಂಟ್ಸ್​​ಗಳನ್ನ ನೋಡ್ತಿರಿ ನಮಗಾಗಿ ಕಾದಿರಿ ಎಂದು ಸಾರುತ್ತಿತ್ತು ಥ್ರಿಬಲ್ ಆರ್ ಸಿನಿ ಬಳಗ.. ಆದ್ರೆ ಈಗ ಕಹಾನಿಮೇ ಟ್ವಿಸ್ಟ್ ಎಂಬುವಂತೆ ಥ್ರಿಬಲ್ ಆರ್ ತನ್ನ ಬರುವಿಕೆಯನ್ನ ಮುಂದುಡುವ ಸೂಚನೆ ಕೊಡುತ್ತಿದೆ.. ಮೊನ್ನ ತಾನೇ ಉಕ್ರೇನ್ ದೇಶದಲ್ಲಿ ಸಾಂಗ್ ಶೂಟ್ ಮುಗಿಸಿ ಕೊಂಡು ಒಂದಷ್ಟು ಪ್ಯಾಚ್ ವರ್ಕ್ಸ್ ಶೂಟಿಂಗ್ ಅನ್ನ ಸೆಪ್ಟೆಂಬರ್ 20ರ ಒಳಗೆ ಮುಗಿಸಿ ಬಿಡ್ತಿವಿ ಎಂದು ಸುದ್ದಿ ಹೊರ ಬಿಟ್ಟಿದ್ದ ಎಸ್​.ಎಸ್.ರಾಜಮೌಳಿ ಪಡೆ ಈಗ ಚಿಂತೆಯಲ್ಲಿ ಕುಂತಿದೆ.. ಕೆಜಿಎಫ್ 2 ರಿಲೀಸ್ ಡೇಟ್ ಎಂಟು ತಿಂಗಳು ಮುಂದೊಗಿದ್ದನ್ನ ಕಂಡು ಅಚ್ಚರಿಯಿಂದ ನೋಡಿದ್ದ ಮೌಳಿ ಗ್ಯಾಂಗ್ ಈಗ ರಾಕಿ ಭಾಯ್ ಮಾಡಿದ್ದು ಸರಿ , ನಾವು ಅವರಂತೆ ಮುಂದಿನ ವರ್ಷಕ್ಕೆ ಹೊಗಿ ಬಿಡೋಣ ನಡೀರಿ ಅನ್ನೋ ಸೂಚನೆ ಕೊಟ್ಟಿದ್ದಾರಂತೆ..

ಬೆಲ್ ಬಾಟಂ ಚಿತ್ರದಿಂದ ಹುಷಾರಾದ್ರಾ ರಾಜಮೌಳಿ..?

ಥ್ರಿಬಲ್ ಆರ್ ಬಳಗ ಈ ವರ್ಷ ಬಿಟ್ಟು ಮುಂದಿನ ವರ್ಷ ಸಿನಿಮಾವನ್ನ ತೆರೆಗೆ ತರೋದಕ್ಕೆ ನಾನಾ ಕಾರಣಗಳಿವೆ.. ಅದ್ರಲೂ ಅಕ್ಷಯ್ ಕುಮಾರ್ ನಟನೆಯ ಬೆಲ್ ಬಾಟಂ ಸಿನಿಮಾ ಪ್ರೇಕ್ಷಕರಿಲ್ಲದೆ ಕಂಗಾಲಾಗಿರೋದು ಕಣ್ಣಮುಂದೆ ಇದೆ.. ಅಕ್ಷಯ್ ಕುಮಾರ್ ಸಿನಿಮಾಗಳೆಂದ್ರೆ ಕನಿಷ್ಟ ನೂರು ಕೋಟಿ ಗ್ಯಾರಂಟಿ ಎನ್ನುವಂತಿತ್ತು. ಆದ್ರೆ ಈ ಕೊರೊನಾ ಕಾಲದಲ್ಲಿ ಅಕ್ಷಯ್ ಕುಮಾರ್ ಬಾಕ್ಸಾಫೀಸ್ ಅಕ್ಷಯ ಪಾತ್ರೆ ಕಾಲಿಹುಡಿಯುತ್ತಿದೆ.. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಥಿಯೇಟರ್​​ಗಳಿಗೆ ಇನ್ನೂ ಕೂಡ 100 ಪರಸೆಂಟ್ ಸೀಟು ಭರ್ತಿಗೆ ಅವಕಾಶ ಸಿಕ್ಕಿಲ್ಲ.. ಈ ವರ್ಷ ಸಿಗೋದು ಡೌಟ್ ಎನ್ನುತ್ತಿದೆ ರಿಪೋರ್ಟ್.. ಜೊತೆಗೆ ಕೊರೊನಾ ಮೂರನೇ ಅಲೆಯ ಭೀತಿ ಬೇರೆ ಕಾಡುತ್ತಿದೆ.. ಸುಮ್ನೇ ಯಾಕ್ ಬೇಕು ಊರ್​ ಉಸಾಬ್ರಿ ಎಂದು ಥ್ರಿಬಲ್ ಆರ್ ಸಿನಿಮಾ ತಂಡ ರಿಲೀಸ್ ಡೇಟ್​ ಅನ್ನ ಮುಂದುಡಲು ಯೋಚಿಸುತ್ತಿದೆ..

blankಸಿನಿಮಾ ಬ್ಯುಸ್​ನೆಸ್ ಅಂದ್ರೆ ಹತ್ತು ರೂಪಾಯಿ ಹಾಕಿ ನೂರು ರೂಪಾಯಿ ಸಂಪದಾನೆ ಮಾಡೋದು.. ಹೇಳಿ ಕೇಳಿ ರಾಮ್ ಚರನ್ , ಜೂನಿಯರ್ ಎನ್​​.ಟಿ.ಆರ್ ನಟನೆಯ ಥ್ರಿಬಲ್ ಆರ್ ಸಿನಿಮಾ 400 ಕೋಟಿ ಬಜೇಟ್​​ನಲ್ಲಿ ನಿರ್ಮಾಣ ಆಗಿರೋದು.. ರಾಜಮೌಳಿಯವರ ಹಿಂದಿನ ಸಿನಿಮಾ 250ಕೋಟಿ ಬಜೇಟ್​​​ಗೆ 1500 ಕೋಟಿ ಬ್ಯುಸ್ ನೆಸ್ ಮಾಡಿ ಕೊಟ್ಟಿದೆ.. ಇನ್ನೂ ಈ ಟೈಮ್​ನಲ್ಲಿ ಮುಂದೆ ಹೊದ್ರೆ ನಷ್ಟ ಗ್ಯಾರಂಟಿ ಎನ್ನುತ್ತಿದೆ ರಿಪೋರ್ಟ್​​.. ಈ ಕಾರಣಕ್ಕೆ ತ್ರಿಬಲ್ ಆರ್ ಸಿನಿಮಾ ಈ ವರ್ಷ ಬರೋದು ಡೌಟ್ ಎನ್ನುತ್ತಿದೆ ಮೂಲಗಳು.. ಇನ್ನೂ ಥ್ರಿಬಲ್ ಆರ್ ಏನಾದ್ರು ಮುಂದಿನ ವರ್ಷಕ್ಕೆ ಹೋಯ್ತು ಅಂದ್ರೆ ಇನ್ನು ಉಳಿದವರು ಯೋಚನೆ ಮಾಡದು ಗ್ಯಾರಂಟಿ..

Source: newsfirstlive.com Source link